ಹಾರೂಗೇರಿ,01: ಚುನಾವಣೆಗಳು ಗಮನದಲ್ಲಿ ಇಟ್ಟುಕೊಂಡು ವಿವಿಧ ಘೋಷಣೆಗಳು ಮಾಡುವುದನ್ನು ನಾವುಗಳು ಸಾಕಷ್ಟು ಸರಕಾರಗಳುನ್ನು ನೋಡಿದ್ದೇವೆ. ಆದರೆ ದೂರದ ದೃಷ್ಠಿಯ ಬಗ್ಗೆ ಆಲೋಚನೆ ಮಾಡಿ ರೈತ ಬೆಳೆಯುವುದಕ್ಕೆ ರೈತ ಸಮುದಾಯದಲ್ಲಿ ಪ್ರಗತಿಯಾಗಬೇಕು. ಅವರುಗಳು ತಮ್ಮ ಸ್ವಂತ ಬಲದಿಂದ ಮುಂದೆ ಬರಬೇಕಾದರೆ ರೈತರು ಬೆಳೆಸಿದ ಬೆಳೆಗೆ ವೈಜ್ಞಾನಿಕ ಬೆಲೆ ನೀಡಬೇಕೆಂದು ಆಲೋಚನೆ ಮಾಡಿದ ಏಕೈಕ ಪ್ರಧಾನಿ ನರೇಂದ್ರ ಮೋದಿಜಿಯವರು. ನಮ್ಮ ರೈತರಿಗೆ ಸಾಲ ಮನ್ನಾ ಪರಿಹಾರವಲ್ಲ. ರೈತರಿಗೆ ಶಾಶ್ವತವಾಗಿ ಪರಿಹಾರಕ್ಕಾಗಿ ಕಲ್ಪಿಸುವುದಕ್ಕೆ ವೈಜ್ಞಾನಿಕ ಬೆಲೆ ನೀಡಬೇಕಾಗಿದೆ. ನಮ್ಮ ರಾಜ್ಯ ಸರಕಾರವು ರೈತರ ಜೀವನದೊಂದಿಗೆ ಚಲ್ಲಾಟವಾಡಬಾರದೆಂದು ಮಾಜಿ ಚಿಕ್ಕೋಡಿ ಸಂಸದ ಹಾಗೂ ಬಿ.ಡಿ.ಸಿ.ಸಿ ಬ್ಯಾಂಕ ಬೆಳಗಾವಿ ಅಧ್ಯಕ್ಷ ರಮೇಶ ವಿ ಕತ್ತಿ ಹೇಳಿದರು.
ಅವರು ಸಮೀಪದ ಶೇಗುಣಸಿ ಗ್ರಾಮದ ಕೂಡನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಶೇಗುಣಸಿಯ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಕಾರ್ಯಕ್ರಮದ ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ಸರಕಾರ ರೈತರಿಗೆ ಕೊಟ್ಟ ಭರವಸೆಗಳನ್ನು ತಕ್ಷಣ ನೀಡಬೇಕು. ಕೇಂದ್ರ ಸರಕಾರದ ಯೋಜನೆಯ ಜನಧನ ಯೋಜನೆ ಮೂಲಕ ರೈತರ ಬ್ಯಾಂಕ ಖಾತೆಗೆ ನೇರವಾಗಿ ಆರು ಸಾವಿರ ರೂಪಾಯಿಗಳು ಜಮೆ ಆಗುತ್ತಿವೆ. ಮುಂಬರುವ ದಿನಗಳಲ್ಲಿ ರೈತರಿಗಾಗಿ ಹೊಸ ಹೊಸ ಕೃಷಿ ಬಗ್ಗೆ ಕಾರ್ಯಕ್ರಮಗಳು ನಡೆಸಿ ಅವರುಗಳಿಗೆ ಮಾಹಿತಿ ನಮ್ಮ ಯುವಕರು ಕೃಷಿಯ ಕಡೆಗೆ ಕರೆದುಕೊಂಡು ಬರಬೇಕಾಗಿದೆ. ನಾವುಗಳು ಕೇವಲ ಇಸ್ರೇಲ್ಗೆ ಹೋಗಿ ಅಲ್ಲಿರುವ ಕೃಷಿ ಬಗ್ಗೆ ನೋಡಿಕೊಂಡು ಬಂದರೆ ಸಾಲದು. ಅದರ ಮಾದರಿಯಂತೆ ಬೆಳೆಯನ್ನು ನಾವುಗಳು ಬೆಳೆಸುವುದಕ್ಕೆ ಪ್ರಯತ್ನ ಮಾಡಬೇಕಾಗಿದೆ. ರೈತರಿಗೆ ಬಿಡಿಸಿಸಿ ಬ್ಯಾಂಕಗಳಿಂದ ಹನಿ ನೀರಾವರಿಗಾಗಿ, ಒಬ್ಬ ರೈತರಿಗೆ ಒಂದೊಂದು ಎಮ್ಮೆ ಆಕಳು ಹೈನುಗಾರಿಕೆಗಾಗಿ ನೀಡುವ ಸೌಲಭ್ಯಗಳ ಉಪಯೋಗವನ್ನು ಪಡೆದುಕೊಂಡು ಆಥರ್ಿಕವಾಗಿ ಸ್ವಾವಲಂಬಿಗಳಾಗಬೇಕೆಂದು ರಮೇಶ ವಿ ಕತ್ತಿ ಕರೆ ನೀಡಿದರು.
ಫೆಬ್ರುವರಿ 26ರಂದು ನಮ್ಮ ದೇಶಕ್ಕೆ ಇನ್ನೊಂದು ಶಿಖರ ದೊರಕಿದ ಸಂಭ್ರಮಾಚರಣೆ. ಭಾರತ ದೇಶದ ಗೌರವ ಈ ವಿಶ್ವ ಮೆಚ್ಚುಗೆ ವ್ಯಕ್ತಪಡಿಸುತ್ತಿರುವುದಕ್ಕೆ ದೇಶದ ಸೈನಿಕರೆ ಕಾರಣ. ಅವರಿಗೊಂದು ನಾವುಗಳು ನಮನಗಳು ಸಲ್ಲಿಸೋಣ. ಇಂದು ನಾವುಗಳು ಪ್ರತಿಜ್ಞೆಯನ್ನು ಮಾಡಿಕೊಳ್ಳೋಣ. ದೂರವಾಣಿ ಕರೆಗಳು ಬಂದಾಗ ಹಲೋ ಅನ್ನುವ ಬದಲು "ಜೈ ಜವಾನ" ಪದವನ್ನು ಬಳಸುವ ಮೂಲಕ ದೇಶಾಭಿಮಾನವನ್ನು ಬೆಳೆಸಬೇಕಾಗಿದೆ. ರಾಜ್ಯದಲ್ಲಿ ಅತೀ ಹೆಚ್ಚು ಸಾಲ ಮನ್ನಾ ಅಥಣಿ ತಾಲೂಕಿನ ಫಲಾನುಭವಿಗಳು ಪಡೆದುಕೊಂಡಿದ್ದಾರೆ. ಕಳೆದ ಹಲವಾರು ವರ್ಷಗಳಿಂದ ಸಹಕಾರಿ ಕ್ಷೇತ್ರದ ಅಭಿವೃದ್ಧಿಗಾಗಿ ನಾವು ಶ್ರಮಿಸಿದ್ದೇವೆ. ಸಾಲ ನೂರಕ್ಕೆ ನೂರರಷ್ಟು ವಸೂಲಿಯಾಗುತ್ತಿರುವುದಕ್ಕೆ ಹೆಮ್ಮೆ ಇದೆ ಎಂದು ಮಾಜಿ ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ ಸಹಕಾರಿ ಸಂಸ್ಥೆಗಳು ಬೆಳಗಾವಿ ಜಿಲ್ಲೆಯಲ್ಲಿ ಅಥಣಿ ತಾಲೂಕಿನಲ್ಲಿ ಪ್ರಾಮಾಣಿಕವಾಗಿ ನಡೆದು ಕೃಷಿ ರೈತರಿಗೆ ಅದರಿಂದ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಸಹಕಾರಿ ಸಂಘ ಅಭಿವೃದ್ಧಿಗಾಗಿ ಸಹಾಯ ಸಹಕಾರ ನೀಡುವುದಾಗಿ ಭರವಸೆ ಮಹಾಂತೇಶ ಕವಟಗಿಮಠ ನೀಡಿದರು.
ಸುಕ್ಷೇತ್ರ ಇಂಚಲದ ಶಿವಾನಂದ ಭಾರತಿ ಸ್ವಾಮಿಗಳು, ವಿರಕ್ತ ಮಂಹಾತ ದೇವರು, ಭಸ್ತಿಮಠ ನರಸಿಂಹರಾಜುಪುರ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು, ಶೇಗುಣಸಿ ಹಣಮಾಪುರ ಸದ್ಗುರು ಸಮರ್ಥ ಹಣಮಂತ ಮಹಾರಾಜರು, ಸಿದ್ದಶ್ರೀ ಸಿದ್ದಾಶ್ರಮ ಕವಲಗುಡ್ಡ ಹಣಮಾಪುರದ ಅಮರೇಶ್ವರ ಮಹಾರಾಜರು ಮಾತನಾಡಿದರು.
ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ, ಕಾಗವಾಡ ಮಾಜಿ ಶಾಸಕ ರಾಜು ಕಾಗೆ, ಕೃಷ್ಣ ಸಹಕಾರಿ ಸಕ್ಕರೆ ಕಾಖರ್ಾನೆ ಅಥಣಿ ಅಧ್ಯಕ್ಷ ಪರಪ್ಪ ಸವದಿ, ನಿದರ್ೇಶಕರು ಬಿಡಿಸಿಸಿ ಬ್ಯಾಂಕ ಬೆಳಗಾವಿಯ ಅಶೋಕ ಅವಕ್ಕನ್ನವರ, ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಶ್ರೀಶೈಲ ನಾರಗೊಂಡ, ರಾಜಶೇಖರ ಪಾಟೀಲ, ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ತಮ್ಮಣ್ಣಪ್ಪ ತೇಲಿ, ಮಲ್ಲಪ್ಪ ಶ್ಯಾನವಾಡ, ಶಿವರಾಯ ಯಲಡಗಿ, ಅಣ್ಣಾಸಾಬ ಮುನ್ನೊಳ್ಳಿ, ಅಶೋಕ ಜಮಖಂಡಿ, ವೀರಣ್ಣಾ ಸಸಾಲಟ್ಟಿ, ವಿಠ್ಠಲ ಮೆಕ್ಕಳಕಿ, ಬಸಪ್ಪ ತಳವಾರ, ರಾಮಪ್ಪ ನಾಯಿಕ, ಪದ್ಮಾವತಿ ಚೌಗಲಾ, ಮಹಾದೇವಿ ಯಡಹಳ್ಳಿ, ಭಗವಂತ ಮಾಂಗ, ವಿಠ್ಠಲ ಪೂಜೇರಿ, ಅಪ್ಪಾಸಾಬ ನಾಗನೂರ, ಸಿದ್ದಾರೂಡ ಪುರಾಣಿಕವ್ಮಠ, ಗಿರಿಮಲ್ಲಾ ಸಣ್ಣಶಿವನ್ನವರ, ಕಲ್ಮೇಶ ಶ್ಯಾನವಾಡ ಹಾಗೂ ಅಧ್ಯಕ್ಷರು ಉಪಧ್ಯಕ್ಷರು ಆಡಳಿತ ಮಂಡಳಿ ಸದಸ್ಯರು ಸರ್ವ ಸದಸ್ಯು ಮತ್ತು ಸಿಬ್ಬಂದಿ ಮರ್ಗದವರಿ ಉಪಸ್ಥಿತರಿದ್ದರು.