ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಂಗೀತ ಸ್ಪರ್ಧೆಯ ಬೆಳಗಿಸುವ ಮೂಲಕ ಉದ್ಘಾಟನೆ
ಬ್ಯಾಡಗಿ : ಸಂಗೀತಕ್ಕೆ ಅದ್ಭುತ ಶಕ್ತಿ ಇದ್ದು ಅನಾರೋಗ್ಯ ಪೀಡಿತರನ್ನು ಗುಣಪಡಿಸುವ ಶಕ್ತಿ ಇದೆ ಎಂದು ಪುರಸಭೆಯ ಮುಖ್ಯ ಅಧಿಕಾರಿ ವಿನಾಯಕುಮಾರ ಹೊಳೆಪ್ಪಗೋಳ ಹೇಳಿದರು. ಪಟ್ಟಣದ ವೀರಭದ್ರೇಶ್ವರ ಹಾಗೂ ಕಲ್ಮೇಶ್ವರ ದೇವಾಲಯಗಳ 70 ನೇ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಸಂಗೀತ ಸ್ಪರ್ಧೆಯ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಇಂತಹ ಕಾರ್ಯಕ್ರಮ ಮೂಲಕ ಅವು ಹೊರಬರಲು ಸಾಧ್ಯ ಎಂದರು. ಈ ವೇಳೆ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಪ್ರಥಮ ಬಹುಮಾನ.ಪ್ರಿಯಾಂಕಾ ಪ್ರ ಕೊರವರ.ದ್ವಿತಿಯ ಬಹುಮಾನ ಅಂದ ಮಗು ವೀರ್ಪ ದುಂದಿ.ತೃತಿಯ ಬಹುಮಾನ ಮಾಲತೇಶ ಈಟೇರ ಪಡೆದುಕೊಂಡರು.ಜಾತ್ರಾ ಸಮಿತಿಯ ಅಧ್ಯಕ್ಷ ಮಲ್ಲಣ್ಣ ಹುಚಗೊಂಡರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಮಿತಿಯ ಉಪಾಧ್ಯಕ್ಷ ಗಂಗಣ್ಣ ತಿಳವಳ್ಳಿ. ಗೌರವ ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ. ಸದಸ್ಯರಾದ ಶಿವಣ್ಣ ಶೆಟ್ಟರ. ಶಿವಣ್ಣ ಬಣಕಾರ. ತೀಪುಗಾರರಾದ ಶ್ರೀ ದೇವಿ ಮಾಳ ಪ್ಪನವರ. ಯಮನಪ್ಪ ಹರಿಜನ. ವೀರೇಶ ಸಿದ್ದಣ್ಣನವರ. ಸಂದ್ಯಾ ದೇಶಪಾಂಡೆ. ಬಿ. ಡಿ ಪರಶುರಾಮ.ಗೀರೀಶ ಇಂದಿಮಠ. ಎಂ. ಎಫ್ ಕರಿಯಣ್ಣನವರ ಹಾಗೂ ಇತರರು ಉಪಸ್ಥಿತರಿದ್ದರು