ಕುರಾನಿನ ಶ್ಲೋಕಗಳ ಕಲಾಕೃತಿಗಳ ಉದ್ಘಾಟನೆ

ಲೋಕದರ್ಶನ ವರದಿ

ಗದಗ 02: ಸ್ಥಳೀಯ ರಾಜೀವಗಾಂಧಿನಗರ ನಿವಾಸಿ ಹಾಗು ಚಿತ್ರ ಕಲಾವಿದ ಜನಾಬ ನಜೀರಅಹ್ಮದ ಎನ್ ಡಂಬಳ ಇವರಿಂದ ಕಲಾಕೃತಿಗಳ ಉದ್ಘಾಟನೆಯನ್ನು ಶಬೇಖದರ್ ಅಂಗವಾಗಿ ದಿ. 01ರಂದು ರಾತ್ರಿ ಮಜೀದೆ ರಝಾ ಆವರಣದಲ್ಲಿ ಹಾಪೀಜ್ ಮಹಮ್ಮದ ಅಂಜರಹುಸೇನ ಇವರಿಂದ ಉದ್ಘಾಟನೆ ಜರುಗಿತು. 

ಈ ಸಂಧರ್ಭದಲ್ಲಿ ಇಂದಿನ ದಿನಗಳಲ್ಲಿ ವಿವಿಧ ಕಲಾಕೃತಿಗಳನ್ನು ಪ್ರರ್ದಶನ ಮಾಡುತ್ತಾರೆ. ಆದರೆ ಇಸ್ಲಾಂ ಬಗ್ಗೆ ಯಾವುದೇ ಕುರಾನಿನ ಕಲಾಕೃತಿಗಳನ್ನು ಪ್ರರ್ದಶನ ಮಾಡುವುದಿಲ್ಲ ಇಂದು ಕುರಾನಿನ ಕಲಾಕೃತಿಗಳನ್ನು ಒಳ್ಳೆಯ ರೀತಿಯಲ್ಲಿ ರಚನೆ ಮಾಡಿ ಎಲ್ಲಾ ಸಮಾಜ ಬಾಂಧವರಿಗೆ ಕೃತಿಗಳ ಮೂಲಕ ಸಂದೇಶ ಪ್ರಸಾರ ಮಾಡಿದ ಜನಾಬ ನಜೀರಅಹಮ್ಮದ ಡಂಬಳ ಇವರ ಕಾರ್ಯ ತುಂಬಾ ಮನಮುಟ್ಟವಂತವಾಗಿದೆ. ಎಂದು ಜನಾಬ ಅಬ್ದುಲ್ಜಬ್ಬಾರ ಖವಾಸ ಇವರು ತಮ್ಮ ವಿಚಾರ ಪ್ರಕಟಿಸಿದರು. ಈ ಪ್ರದರ್ಶನವು 01ರಿಂದ ರಂಜಾನ ಹಬ್ಬದ ವರೆಗೆ ನಡೆಯುತ್ತದೆ. ಎಲ್ಲಾ ಬಾಂಧವರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು. 

ಜನಾಬ ಹಾಜಿ ನಬಿಸಾಬ ಜೆ ಡಂಬಳ, ಮಜ್ಜೀದೆ ರಝಾ ಚೇರಮನ್, ಮಹಬೂಬಸಾಬ ಜಿ ಡಂಬಳ, ಜನಾಬ ಡಾ. ಮಸೂತಿಮನಿ, ಜನಾಬ ಶಮುಶುದ್ದೀನ ಖಾಜಿ, ಜನಾಬ ಆಲಮ್ಸಾಬ,  ಜನಾಬ ಮೆಹಬೂಬಸಾಬ ಹಣಗಿ, ಜನಾಬ ಮುನಿರ ಮಕಾಂದಾರ, ಶೌಕತ್ ಕಳಸಾಪೂರ, ಅನ್ವರ ಎ ಡಂಬಳ, ಮೌಲಾ ಕಟ್ಟಿಮನಿ ಹಾಗೂ ರಾಜುಗಾಂಧಿನಗರದ ಗಣ್ಯರು ಉಪಸ್ಥಿತರಿದ್ದರು.