ಬಸಾಪೂರ ಗ್ರಾಮದಲ್ಲಿ ನೂತನ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ

Inauguration of new temples, idol installation program in Basapur village

ಬಸಾಪೂರ ಗ್ರಾಮದಲ್ಲಿ ನೂತನ ದೇವಸ್ಥಾನಗಳ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ 

ಹಾವೇರಿ: ತಾಲೂಕಿನ ಬಸಾಪೂರ ಗ್ರಾಮದಲ್ಲಿ ನೂತನವಾಗಿ ಅಂದಾಜು 4.ಕೋಟಿ ರೂಪಾಯಿಯಲ್ಲಿ ನಿರ್ಮಿಸಲಾಗಿರುವ ಬಸಾಪೂರ ಹಾಗೂ ಇಪ್ಪಿಕೊಪ್ಪದ ಆಲದಮ್ಮ, ದುರ್ಗಾದೇವಿ ದೇಸ್ಥಾನ ಉದ್ಘಾಟನೆ ಮತ್ತು ಕಳಸಾರೋಹಣ ಮತ್ತು ಧರ್ಮಜಾಗೃತಿ ಸಮಾರಂಭವು ಇದೇ 31ರಿಂದ ಜ.5.ರಂದು ಜರುಗಲಿದೆ. 

ಇದೇ.31 ರಂದು ಪರಪೂಜ್ಯ ಶಿವ ಪ್ರಸಾಧ ದೇವರು ಇವರಿಂದ ಪ್ರವಚನ ಆರಂಭವಾಗಲಿದೆ, 1.ರಂದು ಹರಿಕೃಷ್ಣ ಕಲಾ ತಂಡದಿಂದ ಜಾನಪದ ಕಾರ್ಯಕ್ರಮಗಳು ನಡೆಯಲಿವೆ, ದಿ.2ಂದು ನಡೆಯಲಿರುವ ಧರ್ಮ ಸಭೆಯಲ್ಲಿ ಕೊಪ್ಪಳದ ಕವಿ ಮಠದ.ಮ.ನಿ.ಪ್ರ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳಿಂದ ಆರ್ಶಿವಚನ ನಡೆಯಲಿದ್ದು ಈ ಸಮಾರಂಭದ ಸಾನಿಧ್ಯವನ್ನು ಅಗಡಿಯ ಅಕ್ಕಿಮಠದ ಮ.ನಿ.ಪ್ರ ಗುರುಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. 03ರಂದು ಬಂಕಾಪುರ ಕೆಂಡದ ಮಠದ ರೇವಣ ಸಿದ್ದೇಶ್ವರ ಮಹಾಸ್ವಾಮಿಗಳ ಸನ್ನಿದಿಯಲ್ಲಿ ದೇವಿಗಳ ಭವ್ಯ ಮೆರವಣಿಗೆ ನಡೆಯಲಿದೆ.  

04 ರಂದು ಮಂಗಳವಾರದಂದು ದೇವಿಯ ಹೋಮ, ಹವನದೊಂದಿಗೆ ಪೂಜಾ ಕಾರ್ಯಕ್ರಮ ಜರುಗಲಿದೆ. ಇದರ ಜೊತೆಗೆ ಕೂಡಲದ ಗುರು ನಂಜೇಶ್ವರ ಮಠದ ಗುರುಮಹೇಶ್ವರ ಶಿವಾಚಾರ್ಯ ಸ್ವಾಮಿಗಳ ಅಮೃತ ಹಸ್ತದಿಂದ ದೇವಿ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನೆ ಜರುಗುವುದು. ಹಾಗೂ ಕನಕ ಪೀಠಾಧಿಪತಿ ನಿರಂಜನ ಸ್ವಾಮಿಗಳ ಹಸ್ತದಿಂದ ಕಳಸಾ ರೋಹಣ ಕಾರ್ಯಕ್ರಮ ಮತ್ತು ಧರ್ಮಸಭೆ ಜರುವುದು. 

ದೇವಿಯ ದೇವಸ್ಥಾನದ ಉದ್ಘಾಟನೆಯನ್ನು ಉಪಸಭಾಧ್ಯಕ್ಷರು ಹಾಗೂ ಶಾಸಕರಾದ ರುದ್ರ​‍್ಪ ಲಮಾಣಿ ಹಾಗೂ ಸಂಸದ ಬಸವರಾಜ ಬೊಮ್ಮಯಿ ನೆರೆವೇರಿಸಲಿದ್ದಾರೆ. ಕಾರ್ಯಕ್ರಮದ ಜ್ಯೋತಿಯನ್ನು ಶಾಸಕ ಬಸವರಾಜ ಶಿವಣ್ಣನವರ ಹಾಗೂ ಸಂಸದ ನಿವಾಸ ಕೋಟಾ ಪೂಜಾರಿ ನೆರೆವೇರಿಸಲಿದ್ದಾರೆ. ಅಂದು ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಶಿವರಾಜ ಸಜ್ಜನರ, ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌.ಎಫ್‌.ಎನ್‌.ಗಾಜಿಗೌಡ್ರ, ಎಂ.ಎಂ.ಹಿರೇಮಠ, ಮಾರುತಿ ಗೊರವರ, ವೆಂಕಟೇಶ ನಾರಾಯಣಿ, ನಾಗರಾಜ ಆನ್ವೇರಿ, ಚನ್ನಪ್ಪ ಕೆ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ ಶ್ರೀಮತಿ ಶರಣಮ್ಮ ಕಾರಿ, ಪರಭುಗೌಡ್ರ ಬಿಷ್ನಗೌಡರ, ಬಸವರಾಜ ಬಿರಾದರ ಮುಂತಾದವರು ಆಗಮಿಸಲಿದ್ದಾರೆ. 

05 ರಂದು ಬುಧವಾರ 9-30 ರಿಂದ 10.00ಗಂಟೆವರೆಗೆ ಸರ್ವಧರ್ಮ ಸಾಮೂಹಿಕ ವಿವಾಹಗಳು ನಂತರ 11.00 ಗಂಟೆಗೆ ಧರ್ಮ ಸಭೆ ನಡೆಯುವುದು. ಈ ಕಾರ್ಯಕ್ರದಮದಲ್ಲಿ ಹುಕ್ಕೇರಿಮಠದ ಸದಾಶಿವ ಸ್ವಾಮಿಗಳು, ಅಗಡಿ ಗುರುಲಿಂಗ ಮಹಾಸ್ವಾಮಿಗಳು ಸಾನಿಧ್ಯದಲ್ಲಿ ಜರುಗಲಿದೆ. ಅಂದು ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವ ಹೆಚ್‌. ವಿಶ್ವನಾಥ, ಮಾಜಿ ಸಚಿವ ಕೆ.ಎಸ್‌.ಈಶ್ವರ​‍್ಪ, ರಾಮುಲು, ಮಾಜಿ ಶಾಸಕ ನೆಹರು ಓಲೇಕಾರ, ಆನಂದಸ್ವಾಮಿ ಗಡ್ಡದೇವರಮಠ, ಸಂಜೀವಕುಮಾರ ನೀರಲಗಿ, ಅರುಣಕುಮಾರ ಪೂಜಾರ, ಗವಿಸಿದ್ದಪ್ಪ ದ್ಯಾಮಣ್ಣನವರ, ಬಸವರಾಜ ಅರಬಗೊಂಡ, ಎಂ.ಎಂ.ಮೈದೂರು, ಸಿದ್ದಣ್ಣ ಬಾಲಣ್ಣನವರ, ಮುತ್ತಣ್ಣ ಯಲಿಗಾರ, ಅಶೋಕ ಬಣಕಾರ, ಗೌಡಪ್ಪಗೌಡ  ಪಾಟೀಲ, ಉಮೇಶ ಮಾಗಳ, ಈರ​‍್ಪ ಲಮಾಣಿ ಮುಂತಾದವರು ಭಾಗವಹಿಸಲಿದ್ದಾರೆ. 

ರಾತ್ರಿ 8-00 ಘಂಟೆಗೆ ಬಸಾಪುರ ಗ್ರಾಮದ ಸರಕಾರಿ ಪ್ರಾಥಮಿಕ, ಪ್ರೌಢ, ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಹಾಗೂ ಶ್ರೀ ಪರಮೇಶ್ವರ ಪ್ರಾಥಮಿಕ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.