ಎಲ್.ಐ.ಸಿ ಪಾಲೀಸಿಗಳ ಕಂತು ಸಂಗ್ರಹಣಾ ಕೇಂದ್ರದ ಉಧ್ಘಾಟನೆ
ಮಹಾಲಿಂಗಪುರ,07 : ಭಾರತೀಯ ಜೀವ ವಿಮಾ ನಿಗಮದ ಪಾಲೀಸಿದಾರರು ಅಲ್ಲಿ ಇಲ್ಲಿ ಅಲೆದಾಡಿ ಪಾಲೀಸಿ ಕಂತು ಕಟ್ಟುವುದು ತುಂಬಾ ತೊಂದರೆಯಾಗುತ್ತದೆ ಕಾರಣ ಅಂಥವರಿಗೆ ಇಂಥ ಅಧಿಕೃತ ಕಂತು ಕಟ್ಟುವ ಸೇವಾ ಕೇಂದ್ರಗಳಲ್ಲಿ ಕಂತು ಸಹಕಾರಿಯಾಗಲಿವೆ ಎಂದು ಪುರಸಭೆ ಅಧ್ಯಕ್ಷ ಯಲ್ಲನಗೌಡ ಪಾಟೀಲ ಹೇಳಿದರು.
ಸ್ಥಳೀಯ ಅಷ್ಟಗಿ ಚಿತ್ರಮಂದಿರದ ಹತ್ತಿರದ ಕಿರಗಟಗಿಯವರ ಕಾಂಪ್ಲೇಕ್ಷನಲ್ಲಿ ನೂತನವಾಗಿ ಪ್ರಾರಂಭವಾದ ಎಲ್.ಐ.ಸಿಯ ಅಧಿಕೃತ ಕಂತು ಕಟ್ಟುವ ಸೇವಾ ಕೇಂದ್ರದ ಉಧ್ಘಾಟನೆ ಮಾಡಿ ಮಾತನಾಡಿದ ಅವರು ಎಲ್.ಐ.ಸಿ ದೇಶದಲ್ಲಿಯೇ ಒಂದು ವಿಸ್ವಾಸಾರ್ಹ ಸಂಸ್ಥೇಯಾಗಿದ್ದು ಸಾರ್ವಜನಿಕರು ತಮ್ಮ ಕುಟುಂಬ ರಕ್ಷಣೆ ಮತ್ತು ಮಕ್ಕಳ ವಿದ್ಯಾಬ್ಯಾಸ, ಮದುವೆ, ವೃದ್ಯಾಪ್ಯದ ಸಲುವಾಗಿ ಹಣ ಸಂಗ್ರಹಣ ಮಾಡುವುದರ ಜೋತೆಗೆ ತಮ್ಮ ಜೀವದ ಭದ್ರತೆಯನ್ನು ನೀಡುವ ವಿಸ್ವಾಸಾರ್ಹ ಸಂಸ್ಥೇ ಇದಾಗಿದ್ದು. ಇಲ್ಲಿ ಪಾಲೀಸಿದಾರರಿಗೆ ಸಾವರಿನ ಗ್ಯಾರಂಟಿ ಇರುವುದರಿಂದ ತಮ್ಮ ಹಣಕ್ಕೆ ಯಾವುದೇ ತರಹದ ಮೊಸ ಇರುವುದಿಲ್ಲ, ಪ್ರತಿಯೊಬ್ಬರು ಇಲ್ಲಿ ಹಣ ಹೂಡಿಕೆ ಮಾಡಿ ತಮ್ಮ ಮುಂದಿನ ನೇಮ್ಮದಿಯ ಜೀವನಕ್ಕೆ ದಾರಿ ಮಾಡಿಕೊಳ್ಳಬೇಕು ಎಂದರು.
ನಂತರ ಮಾತನಾಡಿದ ಜಮಖಂಡಿಯ ಎಲ್.ಐ.ಸಿ ಶಾಖೆಯ ಶಾಖಾಧಿಕಾರಿ ಗಣೇಶ ಗಾಗ ಎಲ್.ಐ ಸಿ ಸಂಸ್ಥೆ ಪಾಲೀಸಿದಾರರ ಅನುಕೂಲಕ್ಕಾಗಿ ಪ್ರತಿವರ್ಷ ಹೊಸ ಹೊಸ ಪಾಲೀಸಿಗಳನ್ನು ಹುಟ್ಟು ಹಾಕುವ ಮೂಲಕ ಪಾಲೀಸಿದಾರರಿಗೆ ಅನುಕೂಲ ಮಾಡುತ್ತಲೆ ಬಂದಿದೆ, ಆದ್ದರಿಂದ ಸಾರ್ವಜನಿಕರು ಕೂಡ ಇಂಥ ಸಂಸ್ಥೇಗಳಲ್ಲಿ ಪಾಲೀಸಿ ತೆಗೆದುಕೊಳ್ಳುವ ಮೂಲಕ ತಮ್ಮ ಹಣವನ್ನು ಉಳಿತಾಯ ಮಾಡುತ್ತಾ ಹೋದಾಗ ಅದು ಒಂದು ಒಂದು ದೊಡ್ಡ ಮೊತ್ತದಲ್ಲಿ ಪಾಲೀದಾರರಿಗೆ ಬರುತ್ತದೆ, ಮತ್ತು ಈ ಸಂಸ್ಥೆಯ ಹಣ ಸರ್ಕಾರದ ವಿವಿದ ದೊಡ್ಡ ದೊಡ್ಡ ಕಾಮಗಾರಿಗಳಿಗೆ ಬಳಸಲಾಗುತ್ತದೆ. ಕಾರಣ ಇಂಥ ಸರ್ಕಾರಿ ಸ್ವಾಮ್ಯದ ಸಂಸ್ಥೇಗಳಲ್ಲಿ ಮಾತ್ರ ಪಾಲೀಸಿಗಳನ್ನು ತೆಗೆದುಕೊಳ್ಳುವ ಮೂಲಕ ಸರ್ಕಾರ ಜೋತೆ ಕೈಜೋಡಿಸಿ, ದೇಶದ ಅಭಿವೃಧ್ದಿಯಲ್ಲಿ ನೀವು ಕೂಡಾ ಪಾಲುದಾರರಾಗಬೇಕು ಎಂದರು.
ನಂತರ ಮುಧೋಳ ಎಸ್.ಓ ಮ್ಯಾನೇಜರ ವೆಂಕಟೇಶ ಸರ್ಜಾಪುರ, ಹಾಗೂ ರಬಕವಿ ಎಸ್.ಓ ಮ್ಯಾನೇಜರ ಶಿವಪ್ರಸಾದ ಸರ್ ಮಾತನಾಡಿ, ಎಲ್.ಐ.ಸಿ ಸೇವಾ ಕೇಂದ್ರಗಳ ಪಾಲೀಸಿದಾರರ ಅನುಕೂಲಕ್ಕಾಗಿ ಮತ್ತು ಅವರಿಗೆ ಬೇಕಾಗುವ ಮಾಹಿತಿ ನೀಡುವುದಕ್ಕಾಗಿಯೇ ಇರುವುದರಿಂದ ಸಾರ್ವಜನಿಕರು ಇಲ್ಲಿ ತಮ್ಮ ಪಾಲೀಸಿಯ ಕಂತು ತುಂಬುವುದು, ಮತ್ತು ಇತರ ಪಾಲೀಸಿಗಳ ಬಗ್ಗೆ ಮಾಹಿತಿ ಪಡೆಯುವ ಮಹತ್ವದ ಕೆಲಸ ಇಲ್ಲಿ ನಡೆಯುತ್ತದೆ ಕಾರಣ ಎಲ್ಲ ಈ ಸೇವಾ ಕೇಂದ್ರದ ಪ್ರಯೋಜನೆ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಹನಮಂತ ನಾವಿ ಸ್ವಾತಿಸಿದರು. ಲಕ್ಷ್ಮಣ ಕಿಶೋರ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಖಂಡಿ ಅಭಿವೃದ್ದಿ ಅಧಿಕಾರಿ ಡಿ. ಬಾಪುಗೌಡ ವಹಿಸಿದ್ದರು. ಡಿ.ಓ ರಾಜೇಂದ್ರ ಹುನ್ನೂರ, ಡಿ.ಓ ರಾಜಕುಮಾರ ಕಾಳೆ, ಪುರಸಭೆ ಮಾಜಿ ಅಧ್ಯಕ್ಷರಾದ ಬಸನಗೌಡ ಪಾಟೀಲ, ಶೇಖರ ಅಂಗಡಿ, ಬಸವರಾಜ ಹಿಟ್ಟಿನಮಠ, ಗುತ್ತಿಗೆದಾರ ಹುಚ್ಚೇಶ ವಡ್ಡರ, ಡಾ.ವಿಶ್ವನಾಥ ಗುಂಡಾ, ಡಾ ಎಂ.ಎಂ ಮೇದಾರ, ಡಾ. ಜಬ್ಬಾರ ಯಕ್ಷಂಬಿ, ಡಾ. ಎಂ.ಎಸ್. ಚನ್ನಾಳ, ಗಣ್ಯರಾದ, ಈರ್ಪ ದಿನ್ನಿಮನಿ, ಮಹಾಲಿಂಗಪ್ಪ ಕೌಜಲಗಿ, ಮಲಪ್ಪ ಬಾವಿಕಟ್ಟಿ, ಚಂದಾ ಅಷ್ಟಗಿ, ಶ್ರೀಶೈಲ ಕಿರಗಟಗಿ, ಮನೋಹರ ಶಿರೋಳ, ಜಮೀರ ಯಕ್ಷಂಬಿ, ವಿಜಯ ಸಬಕಾಳೆ, ಡಾ ಮಹಾದೇವ ಕದ್ದಿಮನಿ, ಮಂಜು ಪತ್ತಾರ, ಪಾರ್ವತಿ ಇಜೇರಿ, ಸುಜಾತಾ ಆಡಿನ, ಶ್ರೀದೇವಿ ಮುದ್ದಿ, ಲಾವಣ್ಯ ಮುದ್ದಿ, ಶಿವಾನಂದ ಸೇರಿದಂತೆ ಪ್ರತಿನಿಧಿ ಮಿತ್ರರು, ಪತ್ರಕರ್ತರು ಇದ್ದರು.