ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ವಯಂ ರಕ್ತದಾನ ಶಿಬಿರ ಉದ್ಘಾಟನೆ
ಮಾಂಜರಿ 28 : ಗ್ರಾಮೀಣ ಭಾಗದ ಜನರ ಆರೋಗ್ಯ ಕುರಿತು ಹಾಗೂ ಸದೃಢ ಸಮಾಜ ನಿರ್ಮಾಣಕ್ಕಾಗಿ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಆಧ್ಯತೆ ಕೊಡಬೇಕು. ಸರ್ವರೂ ನೂರಾರು ಕಾಲ ಬಾಳಿ ಬದುಕಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ಹಾಗೂ ನಮ್ಮ ಜೀವನಸಮೃದ್ಧಿಗೊಳಿಸಬೇಕು. ಇಂದಿನ ದಿನಗಳಲ್ಲಿ ಆರೋಗ್ಯವೇ ಭಾಗ್ಯ ಎಂಬಂತೆ ಆರೋಗ್ಯದ ಕಡೆ ಎಲ್ಲರೂ ಗಮನಕೊಡಬೇಕು ಎಂದು ನಾಗನಸೂರ ಬೃಹನ್ಮಠದ ಪರಮಪೂಜ್ಯ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮೀಜಿಗಳು ಹೇಳಿದರು
ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರು ಗ್ರಾಮದಲ್ಲಿರುವ ವೀರಭದ್ರ ದೇವಸ್ಥಾನದ ವಿಶಾಳಿ ಜಾತ್ರಾ ಮಹೋತ್ಸವ ಮತ್ತು ಮಹಾ ರಥೋತ್ಸವ ಅಂಗವಾಗಿ ಮಂಗಳವಾರ ರಂದು ಮುಂಜಾನೆ ಅಯೋಜಿಸಲಾದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಸ್ವಯಂ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು ಈ ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಶೈಲ ಪೀಠದ ಜಗದ್ಗುರು ಹಾಗೂ ಕಾಡ ಸಿದ್ದೇಶ್ವರ ಸಂಸ್ಥಾನ ಮಠ ಮತ್ತು ವೀರಭದ್ರ ದೇವಸ್ಥಾನದ ಧರ್ಮಾಧಿಕಾರಿಗಳಾದ ಡಾ. ಚೆನ್ನ ಸಿದ್ದರಾಮ ಪಂಡಿತರಾದ ಶಿವಾಚಾರ್ಯ ಮಹಾಸ್ವಾಮಿಜಿಗಳು ವಹಿಸಿದ್ದರು ಈ ವೇಳೆ ಹುಕ್ಕೇರಿಯ ಹಿರೇಮಠದ ಚಂದ್ರಶೇಖರ್ ಶಿವಾಚಾರ್ಯ ಸ್ವಾಮೀಜಿಗಳು ಅಂಬಿಕಾ ನಗರದ ಈಶ್ವರ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಕಾಡ ಸಿದ್ದೇಶ್ವರ ಸಂಸ್ಥಾನ ಮಠದ ಹಾಗೂ ವೀರಭದ್ರ ದೇವಸ್ಥಾನದ ಉತ್ತರಾಧಿಕಾರಿಗಳಾದ ರೇಣುಕಾ ದೇವರು ಜಮಖಂಡಿಯ ಗೌರಿಶಂಕರ್ ಶಿವಾಚಾರ್ಯ ಸ್ವಾಮೀಜಿಗಳು ಕಲ್ಯಾಣ ಹಿರೇಮಠ ಗುಣದಾಳದ ಡಾ. ವಿವೇಕಾನಂದ ದೇವರು ಹಾಗೂ ವಿಧಾನಪರಿಷತ್ತಿನ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಯಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಬಾಳು ಧನಗರ್ ಹಾಜರಿದ್ದರು
ಈ ವೇಳೆ ಶ್ರೀಶೈಲ್ ಪೀಠದ ಜಗದ್ಗುರುಗಳಾದ ಡಾ. ಚನ್ನ ಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ಇಂದು ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಬದಲಾವಣೆ ಮತ್ತು ಸಂಶೋಧನಾ ಆಗಿದ್ದರೂ ಕೂಡ ಗ್ರಾಮೀಣ ಭಾಗದ ಜನರಿಗೆ ಇನ್ನೂವರೆಗೆ ಆರೋಗ್ಯ ಸೇವೆ ಯೋಗ್ಯ ಪ್ರೀತಿಯಲ್ಲಿ ಸಿಗುತ್ತಿಲ್ಲ ಆದಕಾರಣ ಹಲವಾರು ಗ್ರಾಮೀಣ ಭಾಗದ ಜನರು ಮಹಾಭಯಂಕರ ರೋಗಗಳಿಗೆ ಗೊತ್ತಾಗುತ್ತಾರೆ ಅದೇ ಪ್ರಕಾರ ಹಲವಾರು ಮಾದಕ ವ್ಯಸನದಿಂದ ಜನರು ಗುಣಮುಖರಾದ ಕಾಯಿಲೆಗೆ ಬಲಿಯಾಗುತ್ತಿದ್ದಾರೆ ಅದಕ್ಕಾಗಿ ವ್ಯಸನ ಮುಕ್ತ ಸಮಾಜದ ಜೊತೆಗೆ ಸದೃಢ ಆರೋಗ್ಯ ನಿರ್ಮಾಣಕ್ಕಾಗಿ ಎಲ್ಲರು ಕೈ ಜೋಡಿಸಬೇಕೆಂದು ಅವರು ಹೇಳಿದರು ಈ ವೇಳೆ 5ಜಿ ಸಲದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ರಕ್ತದಾನ ಶಿಬಿರವನ್ನು ವಿಧಾನ ಪರಿಷತ್ತಿನ ಸದಸ್ಯರಾದ ಪ್ರಕಾಶ್ ಹುಕ್ಕೇರಿ ಹಾಗೂ ಪರಮಪೂಜ್ಯ ಶ್ರೀಕಂಠ ಶಿವಾಚಾರ್ಯ ಸ್ವಾಮೀಜಿಗಳು ದೀಪ ಬೆಳಗಿಸಿ ಉದ್ಘಾಟಿಸಿದರು
ಇಂದು ಆಯೋಜಿಸಲದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಕೊಲ್ಲಾಪುರದ ಕ್ಯಾನ್ಸರ್ ಆಸ್ಪತ್ರೆ ಮಿರಜಿನ ಸೇವಾ ಸದನ್ ಆಸ್ಪತ್ರೆ
ಜೈ ಸಿಂಗ್ಪುರದ ಪಾಯೋಸ್ ಆಸ್ಪತ್ರೆ ಸಾಂಗ್ಲಿಯ ಉಷಾಕಲಾ ಆಸ್ಪತ್ರೆ ಹಾಗೂ ಚೀಕೋಡಿಯ ಸಾರ್ಜನಿಕ್ ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ರಕ್ತದಾನ ಮತ್ತು ಉಚಿತ ಆರೋಗ್ಯ ತಪಾಸಣಾ ಶಿಬಿರ ಮಾಡಲಾಯಿತು ಈ ವೇಳೆ ಇದುರ್ ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಗ್ರಾಮಸ್ಥರು ಹಾಜರಿದ್ದರು ಮಲ್ಲಪ್ಪ ಸಿಂಧೂರ್ ಸ್ವಾಗತಿಸಿ ನಿರೂಪಿಸಿ ವಂದಿಸಿದರು
ಫೋಟೋ 28ಮಾಂಜರಿ 3
ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದ ವೀರಭದ್ರ ದೇವರ ವಿಶಾಳಿ ಜಾತ್ರಾ ಮಹೋತ್ಸವ ಅಂಗವಾಗಿ ಆಯೋಜಿಸಲಾದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡುವಾಗ ನಾಗನಸೂರ ಬೃಹನ್ಮಠದ ಪರಮಪೂಜ್ಯ ಶ್ರೀಕಂಠ ಶಿವಾಚಾರ್ಯ ಮಹಾಸ್ವಾಮೀಜಿಗಳು ಶ್ರೀಶೈಲ ಜಗದ್ಗುರುಗಳು ಹುಕ್ಕೇರಿಯ ಸ್ವಾಮೀಜಿಗಳು ರೇಣುಕಾ ದೇವರು ಹಾಗೂ ಪ್ರಕಾಶ್ ಹುಕ್ಕೇರಿ