ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಟ್ಯೂಷನ್ ಕ್ಲಾಸ್ ಉದ್ಘಾಟನೆ
ಮುದ್ದೇಬಿಹಾಳ 14: ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಇಂದು ಸರ್ಕಾರಿ ಪ್ರೌಢ ಶಾಲೆ ಬ ಸಾಲವಾಡಗಿಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ನಡೆಸಿ ಟ್ಯೂಷನ್ ಕ್ಲಾಸ್ ಮಾಡುವ ಸಲುವಾಗಿ ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮುದ್ದೇಬಿಹಾಳ ತಾಲೂಕಿನ ಯೋಜನಾಧಿಕಾರಿಗಳಾದ ನಾಗೇಶ್ ರವರು ಧರ್ಮಸ್ಥಳದ ಸಂಸ್ಥೆ ಯಾವ ರೀತಿ ಕೆಲಸ ಮಾಡುತ್ತಿದೆ ಸಮಾಜಮುಖಿಯಾಗಿ ಎನ್ನುವ ಕುರಿತು ಮಾತನಾಡಿದರು ಜೊತೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವನ್ನು ನೀಡಿದರು. ಧರ್ಮಸ್ಥಳ ಸಂಸ್ಥೆಯಿಂದ ನೀಡುವ ವಿದ್ಯಾರ್ಥಿ ವೇತನ. ಹಾಗೂ ಅಂಗವಿಕಲ ಮಕ್ಕಳಿಗೆ ವಾಟರ್ ಬೆಡ್ ನೀಡುವ ಕುರಿತು.ಕಡು ಬಡತನದ ಹೆಣ್ಣು ಮಕ್ಕಳಿಗೆ ವಾತ್ಸಲ್ಯ ಎಂಬ ಹೆಸರಿನಿಂದ ಮನೆ ನಿರ್ಮಾಣ ಮಾಡುವ ಕುರಿತು, ಹಲವು ವಿಚಾರಗಳನ್ನು ಹಂಚಿಕೊಂಡರು. ಶಾಲೆಯ ಹಿರಿಯ ಶಿಕ್ಷಕರಾಗಿರುವ ಚಿಮ್ಮಲಗಿ ಗುರುಗಳು ಧರ್ಮಸ್ಥಳ ಸಂಸ್ಥೆಯು ಸಮಾಜಮುಖಿಯಾಗಿ ಕೆಲಸವನ್ನು ಕಾರ್ಯವನ್ನು ನಿರ್ವಹಿಸುತ್ತಾ ಬಂದಿದೆ ಎಂದು ಹೇಳಿದರು. ಈ ಹಿಂದೆ ಜ್ಞಾನದೀಪ ಶಿಕ್ಷಕರನ್ನ ನಮ್ಮ ಶಾಲೆಗೆ ಕೊಡ ಮಾಡಲ್ಪಟ್ಟಿರುವ ವಿಚಾರವನ್ನು ಕೂಡ ತಿಳಿಸಿದರು. ಅಧ್ಯಕ್ಷತೆ ವಹಿಸಿಕೊಂಡಿರುವಂತ ಶ್ರೀಮತಿ ಸುಮಂಗಳ ಕೊಳುರ್ ಮುಖ್ಯೋಪಾಧ್ಯಾಯರು 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿರುವ ಈ ಕಾರ್ಯಕ್ರಮದ ಅನುಷ್ಠಾನವು ಸಮರ್ಕವಾಗಿ ಮಾಡಿಕೊಳ್ಳುತ್ತವೆ ಎಂದು ತಿಳಿಸಿದರು. ಈ ಧರ್ಮಸ್ಥಳ ಸಂಸ್ಥೆಯ ಕಾರ್ಯಕರ್ತರಾಗಿರುವಂತಹ ತಾಳಿಕೋಟಿ ಭಾಗದ ಸಾಬಣ್ಣ ಅವರು ಕಾರ್ಯಕ್ರಮ ನಿರೂಪಿಸಿದರು. ಸುಜಾತ ರವರು ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಶಿಕ್ಷಕರಾದಂತಹ ರಾಜೇಂದ್ರ ಹುನಗುಂದ, ಐ ಎಂ ಮನಗೂಳಿ ಶ್ರೀಕಾಂತ ಕೊಡೆಕಲ್ ಶಾಂತಗೌಡ ಶಿಕ್ಷಕಿಯರಾದ ಸುವರ್ಣಮಠ . ರತ್ನ ಹಂಗರಗಿ, ವಿದ್ಯಾ ಹೊರಗಿನ ಮನಿ ನೀಲಮ್ಮ ಕೊಡತೆ ಧರ್ಮಸ್ಥಳದ ಸ್ತ್ರೀಶಕ್ತಿ ಸಂಘದ ಕಾರ್ಯಕರ್ತರಾದ ಪುಷ್ಪ ದೊಡ್ಮನಿ, ಸುಲೋಚನ