ಕುರಬಗಟ್ಟಿ ಗ್ರಾಮದ ಶ್ರೀಮಾರುತೇಶ್ವರ ಮಂದಿರದ ಉದ್ಘಾಟನೆ ಹಾಗೂ ಕಳಸಾರೋಹನ ಕಾರ್ಯಕ್ರಮ

Inauguration of Srimaruteshwara Mandir of Kurbagatti village and Kalasaroha program

ಕುರಬಗಟ್ಟಿ ಗ್ರಾಮದ ಶ್ರೀಮಾರುತೇಶ್ವರ ಮಂದಿರದ ಉದ್ಘಾಟನೆ ಹಾಗೂ ಕಳಸಾರೋಹನ ಕಾರ್ಯಕ್ರಮ 

ಯರಗಟ್ಟಿ 08: ತಾಲ್ಲೂಕಿನ ಕುರಬಗಟ್ಟಿ ಗ್ರಾಮದ ಶ್ರೀಮಾರುತೇಶ್ವರ ಮಂದಿರದ ಉಧ್ಘಾಟನೆ ಹಾಗೂ ಕಳಸಾರೋಹನ ಕಾರ್ಯಕ್ರಮ ಐದು ದಿನಗಳವರಗೆ ಜರಗುವದು.  

ರವಿವಾರ ದಿ.9ರಂದು ಬೆಳಿಗ್ಗೆ ಮಾರುತಿ ದೇವರ ಅಭಿಷೇಕ ಮಹಾಪೂಜೆ, ಶಿವ ಭಜನಾ ಕಾರ್ಯಕ್ರಮ ಜರಗುವುದು. ಸಂಜೆ 5 ಗಂಟೆಗೆ ಶ್ರೀಸದ್ಗುರು ಅಭಿನವ ಬನಸಿದ್ದೇಶ್ವರ ಮಹಾರಾಜರು ಮುಮ್ಮಟಗುಡ್ಡರಕೇರಿ ಇವರಿಂದ ಪ್ರವಚನ ನಡೆಯುತ್ತದೆ. 

ಸೋಮವಾರ ದಿ.10 ರಂದು ಬೆಳಿಗ್ಗೆ ಮಾರುತೇಶ್ವರ ದೇವರ ರುದ್ರಾಭಿಷೇಕ ಶ್ರೀಆಕಾಶ ಹಿರೇಮಠ ಸ್ವಾಮಿಗಳು ಇವರ ಅಮೃತ ಹಸ್ತದಿಂದ ನೆರವೇರುವುದು. ಸಂಜೆ 5 ಗಂಟೆಗೆ ಶ್ರೀಪ.ಪೂ.ಶ್ರೀಸಿದ್ದಯೋಗಿ ಅಮರೇಶ್ವರ ಮಹಾರಾಜರು ಸಿದ್ದಸಿರಿ ಸಿದ್ದಾಶ್ರಮ ಹಣಮಾಪೂರ ಮತ್ತು ಕೌಲಗುಡ್ಡ ಇವರಿಂದ ಪ್ರವಚನ. ರಾತ್ರಿ 9 ಗಂಟೆಗೆ ಶಬ್ಬೀರ ಡಾಂಗೆ ಅವರಿಂದ ರಸಮಂಜರಿ ಉಧ್ಘಾಟಕರು ಮಡಿವಾಳಪ್ಪ ಎಂ ಬಿದರಗಡ್ಡಿ ಬಿಜೆಪಿ ಮುಖಂಡರು ಸವದತ್ತಿ, ಮುಖ್ಯ ಅಥಿತಿಗಳಾಗಿ ಗುರು ವಾಲಿ ಗ್ರಾಮ ಪಂಚಾಯತಿ ಸತ್ತಿಗೇರಿ ಮುಂತಾದವರು ಉಪಸ್ಥಿತರಿರುವರು.  

ಮಂಗಳವಾರ ದಿ.11ರಂದು ಬೆಳಿಗ್ಗೆ ಮಾರುತೇಶ್ವರ ದೇವರ ಕಾರ್ಯಕ್ರಮಗಳು ನಂತರ ಪರಸ್ಥಳದಿಂದ ಶ್ರೀಹನುಮಂತ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು ಹಾಗೂ ಕುರಬಗಟ್ಟಿ ಗ್ರಾಮದ ಪಲ್ಲಕ್ಕಿಗಳನ್ನು ಶ್ರೀಮಾರುತೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳುವುದು. ನಂತರ ಸಕಲ ಪಲ್ಲಕ್ಕಿಗಳ ಸಮ್ಮುಖದಲ್ಲಿ ಕಳಸ, ಮತ್ತು ಶ್ರೀಮಾರುತಿ ದೇವರ ಬೆಳ್ಳಿ ಮೂರ್ತಿ ಹಾಗೂ ವಿವಿದ ವಾದ್ಯಮೇಳ, ಮಹಿಳೆಯರ ಕುಂಭಮೇಳ ಸಿದ್ದಾರೋಢ ಮಠದಿಂದ ಮಾರುತಿ ದೇವರ ಗುಡಿಯವರಗೆ ಮೇರವನಿಗೆ ನಡೆಯಿವುದು. ಅಂದು ಸಂಜೆ 5 ಗಂಟೆಗೆ ಮಾಳಿಂಗರಾಯ ಮಹಾರಾಜರು ಹುಲಜಂತಿ ಇವರಿಂದ ಆರ್ಶಿವಚನ ಕಾರ್ಯಕ್ರಮ. 

ಸಾನಿದ್ಯ ಶ್ರೀಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು,ನೇತೃತ್ವ ತ್ರೀವಿಧ ದಾಸೋಹ ಮೂರ್ತಿ ಅಭಿನವ ಸಿದ್ರಾಯ ಅಜ್ಜನವರು ಕಟಕೋಳ, ಬೃಹ್ಮಶ್ರೀ ಸಿದ್ದಲಿಂಗ ಮಹಾಸ್ವಾಮಿ, ಗದಿಗಯ್ಯಾ ಸ್ವಾಮಿ ಕಾರ್ಯಕ್ರಮ ಉಧ್ಘಾಟಕರು ಸತೀಶ ಜಾರಕಿಹೋಳಿ ಲೋಕೋಪಯೋಗಿ ಇಲಾಖೆ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಕರ್ನಾಟಕ ಸರಕಾರ, ಜ್ಯೋತಿ ಬೆಳಗಿಸುವರು ಶಾಸಕ ವಿಶ್ವಾಸ ವೈದ್ಯ ಸವದತ್ತಿ, ಅಧ್ಯಕ್ಷತೆ ಲಕ್ಕಪ್ಪ ಸನ್ನಿಂಗನವರ ಗ್ರಾಮ ಪಂಚಾಯತಿ ಮಾಡಮಗೇರಿ, ಹಾಗೂ ಮುಖ್ಯ ಅಥಿತಿಗಳು ನೀಖಿಲ ದೇಸಾಯಿ ಯರಗಟ್ಟಿ, ಮಲಿಕಸಾಬ ಬಾಗವಾನ, ಮಹಾದೇವಿ ಘಟನಟ್ಟಿ, ರೇಣುಕಾ ಕಾರಬಾರಿ, ಗೋಪಾಲ ದಳವಾಯಿ, ಮುಂತಾದವರು ಉಪಸ್ಥಿತರಿರುವರು. 

ಬುಧವಾರ ದಿ 12ರಂದು ಬೆಳಿಗ್ಗೆ ದೇವರಿಗೆ ಅಭಿಷೇಕ ಮುಂಜಾನೆ 10 ಗಂಟೆಗೆ ಮಹಾತ್ಮರಿಂದ ಕಳಸಾರೋಹನ ಕಾರ್ಯಕ್ರಮ ಸಾನಿದ್ಯ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ತ್ರೀವಿಧ ದಾಸೋಹ ಮೂರ್ತಿ ಅಭಿನವ ಸಿದ್ರಾಯಜ್ಜನವರು ಕಟಕೋಳ, ಗಣಪತಿ ಮಹಾರಾಜ ರಾಜರಾಜೇಶ್ವರಿ ಆಶ್ರಮ ಯರಗಟ್ಟಿ, ಕಾರ್ಯಕ್ರಮ ಉದ್ಘಾಟಕರು ಪಂಚನಗೌಡ ದ್ಯಾಮನಗೌಡ್ರ ಡಿಸಿಸಿ ಬ್ಯಾಂಕ ನಿರ್ದೆಶಕರು ಬೆಳಗಾವಿ, ಅಧ್ಯಕ್ಷತೆ ಲಕ್ಕಪ್ಪ ಸನ್ನಿಂಗನವರ ಗ್ರಾಪಂ ಅಧ್ಯಕ್ಷ ಮಾಡಮಗೇರಿ , ಜ್ಯೋತಿ ಬೆಳಗಿಸುವವರು ವಿರೋಪಾಕ್ಷ ಮಾಮನಿ ಬಿಜೆಪಿ ತಾಲ್ಲೂಕಾ ಅಧ್ಯಕ್ಷ ಸವದತ್ತಿ, ಸೌರಬ ಚೋಪ್ರಾ, ಮುಖ್ಯ ಅಥಿತಿ ಅಜೀತಕುಮಾರ ದೇಸಾಯಿ ಯರಗಟ್ಟಿ ಮಾಜಿ ಜಿಪಂ ಸದಸ್ಯ, ರತ್ನಾ ಮಾಮನಿ ಸವದತ್ತಿ, ಬಸಯ್ಯಾ ಹಿರೇಮಠ, ಉಪನ್ಯಾಸಕಿ ರಾಧಿಕಾ ಮಂಜುನಾಥ ಮುಂತಾದವರು ಅಂದು ರಾತ್ರಿ ನಾಟಕ ರೈತರ ಹುಲಿ ಜರಗುವುದು.