ಕುರಆನ್ ಪ್ರವಚನ ಕಾರ್ಯಾಲಯ ಉದ್ಘಾಟನೆ
ತಾಳಿಕೋಟಿ, 07; ಪಟ್ಟಣದ ಶ್ರೀ ಶರಣ ಮುತ್ಯಾ ದೇವಸ್ಥಾನ ಆವರಣದಲ್ಲಿ ಫೇ. 21ರಿಂದ 23ರ ವರೆಗೆ ನಡೆಯಲಿರುವ ಕನ್ನಡದಲ್ಲಿ ಸಾರ್ವಜನಿಕ ಕುರಆನ್ ಪ್ರವಚನ ಕಾರ್ಯಕ್ರಮದ ಕಾರ್ಯಾಲಯವನ್ನು ಶುಕ್ರವಾರ ಶ್ರೀ ಶರಣ ಮುತ್ಯಾ ದೇವಸ್ಥಾನದ ಎದುರುಗಡೆ ಇರುವ ವಿರೇಶ ಬಾಗೇವಾಡಿ ಬಿಲ್ಡಿಂಗ್ ನಲ್ಲಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಘಟಕದ ಉಪಾಧ್ಯಕ್ಷ ಜನಾಬ. ಮಹಮ್ಮದ್ ಯೂಸೂಫ ಕಣ್ಣಿ ಮಾತನಾಡಿ ಪಟ್ಟಣದಲ್ಲಿ ಈ ಮೊದಲು ನಡೆದ ಎರಡೂ ಪ್ರವಚನಗಳು ಎಲ್ಲ ಸಮಾಜದ ಬಂಧುಗಳ ಸಹಕಾರದಿಂದ ಅಭೂತಪೂರ್ವ ಯಶಸ್ವಿಯಾಗಿವೆ ಈಗ ಮೂರನೇ ಬಾರಿ ಈ ಪ್ರವಚನವನ್ನು ಹಮ್ಮಿಕೊಳ್ಳಲಾಗಿದೆ, ಇದರ ಕಾರ್ಯಗಳನ್ನು ಮಾಡಲಿಕ್ಕಾಗಿ ಇವತ್ತು ಈ ಕಾರ್ಯಾಲಯವನ್ನು ಆರಂಭಿಸಲಾಗಿದೆ ಇದಕ್ಕೆ ಅವಕಾಶ ಮಾಡಿಕೊಟ್ಟ ಈ ಕಟ್ಟಡದ ಮಾಲೀಕರಾದ ವೀರೇಶ್ ಬಾಗೇವಾಡಿ ಅವರಿಗೆ ಸಂಘಟನೆ ವತಿಯಿಂದ ಅಭಿನಂದಿಸುತ್ತೇನೆ ಎಂದರು.
ಸಮಾರಂಭದ ಸಾನಿಧ್ಯ ವಹಿಸಿ ಶ್ರೀಖಾಸ್ಗತೇಶ್ವರ ಮಠದ ಮುಖ್ಯಸ್ಥರಾದ ವೇದ ಮೂರ್ತಿ ಶ್ರೀ ಮುರುಗೇಶ ವಿರಕ್ತಮಠ ಅವರು ಮಾತನಾಡಿ ಪಟ್ಟಣದಲ್ಲಿ ಈ ಮೊದಲು ನಡೆದ ಎರಡೂ ಪ್ರವಚನಗಳಲ್ಲಿ ಎಲ್ಲ ಸಮಾಜದವರ ಸಹಕಾರದಿಂದ ಯಶಸ್ವಿಯಾಗಿವೆ, ಪಟ್ಟಣದ ಶಾಂತಿ ಹಾಗೂ ಸೌಹಾರ್ದತೆಗೆ ಜಮಾತ್ ಬಂಧುಗಳ ಕೊಡುಗೆ ಬಹಳಷ್ಟುಇದ್ದು ಅವರ ಕಾರ್ಯ ಶ್ಲಾಘನೀಯವಾಗಿದೆ ಈ ಪ್ರವಚನವು ಯಶಸ್ವಿಯಾಗಲು ಎಲ್ಲರ ಸಹಕಾರದೊಂದಿಗೆ ಶ್ರೀ ಮಠದ ಸಂಪೂರ್ಣ ಸಹಕಾರವು ಇರುವುದು ಎಂದರು.
ಹಿರಿಯ ಪತ್ರಕರ್ತ ಜಿ.ಟಿ. ಘೋರೆ್ಡ, ಪ್ರವಚನಕಾರ ಲಾಲಹುಸೇನ ಕಂದಗಲ್, ಕಸಾಪ ಅಧ್ಯಕ್ಷ ಆರ್.ಎಲ್.ಕೊಪ್ಪದ, ವಿಕಾಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ವಿರೇಶ ಬಾಗೇವಾಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡ ಸೈಯದ್ ಶಕೀಲ ಅಹ್ಮದ್ ಖಾಜಿ,ಅಧ್ಯಕ್ಷ ಮುಜಾಹೀದ ನಮಾಜಕಟ್ಟಿ, ಪ್ರವಚನ ಸಂಚಾಲಕ ಸೈಯದ್ ಇರ್ಫಾನ್ ಖಾಜಿ,ಅಲ್ಲಾಭಕ್ಷ ನಮಾಜಕಟ್ಟಿ,ಎಂ.ಎ.ಮೇತ್ರಿ, ಮಹಮ್ಮದ್ ಕಾಸೀಮ ನಮಾಜಕಟ್ಟಿ, ಹುಸೇನ್ ಪಟೇಲ, ಇಸ್ಮಾಯಿಲ್ ಸಾಸಬಾಳ, ಶಫೀಕ್ ಇನಾಮದಾರ, ಅಜೀಜ ಜಮಾದಾರ, ಇಸ್ಮಾಯಿಲ್ ನಮಾಜಕಟ್ಟಿ, ಮಜೀದ ಲಾಹೋರಿ, ಮೆಹಬೂಬ ನಮಾಜಕಟ್ಟಿ ಮತ್ತಿತರರು ಇದ್ದರು.