ಲೋಕದರ್ಶನ ವರದಿ
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ, ಬೆಳಗಾವಿ, ಭಾರತ ಸಕರ್ಾರದ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಪ್ರಾದೇಶಿಕ ನಿದರ್ೆಶನಾಲಯ, ಬೆಂಗಳೂರು, ಇವರ ಸಹಯೋಗದಲ್ಲಿ ರಾಷ್ಟ್ರೀಯ ಭಾವೈಕ್ಯತಾ ಶಿಬಿರವನ್ನು ದಿ.23-29 ನವೆಂಬರ 2018ರ ಅವಧಿಯಲ್ಲಿ "ಜ್ಞಾನ ಸಂಗಮ", ಬೆಳಗಾವಿಯಲ್ಲಿ ಏರ್ಪಡಿಸಲಾಗಿದೆ. ದೇಶದ ಹನ್ನೊಂದು ರಾಜ್ಯಗಳ 150 ಎನ್.ಎಸ್.ಎಸ್. ಸ್ವಯಂ ಸೇವಕರು ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ.
ಶಿಬಿರದ ಉದ್ಘಾಟನಾ ಸಮಾರಂಭವು 23ರಂದು ಜರುಗಿತು. ಆರ್. ರಾಮಚಂದ್ರನ್, ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್, ಬೆಳಗಾವಿ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಮಾಶಂಕರ ಬಿ. ಪಿ., ಜಂಟಿ ನಿದರ್ೆಶಕರು, ಸಾರಿಗೆ ಇಲಾಖೆ, ಬೆಳಗಾವಿ ಹಾಗೂ ಡಾ. ಬಿ. ವಸಂತ ಶೆಟ್ಟಿ, ಉಪಕುಲಸಚಿವರು, ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಇವರು ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ. ಆನಂದ ವಿ. ಶಿವಾಪುರ, ಪ್ರಾದೇಶಿಕ ನಿದರ್ೆಶಕರು, ವಿತಾವಿ ಪ್ರಾದೇಶಿಕ ಕಛೇರಿ, ಬೆಳಗಾವಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ರಾಮಚಂದ್ರನ್ ಅವರು "ಯುವ ಜನಾಂಗ ಸಮಾಜದ ಪ್ರಗತಿಗಾಗಿ ನಿಸ್ವಾರ್ಥ ಸೇವೆ ಮಾಡಬೇಕು ಹಾಗೂ ಜೀವನದಲ್ಲಿ ತಾವು ಹಾಕಿಕೊಂಡ ಗುರಿ ತಲಪಲು ಬೇಕಾದ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ನಮ್ಮ ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆ ವಹಿಸಿದ್ದ ಡಾ. ಶಿವಾಪುರ ಅವರು ಮಾತನಾಡಿ "ಯುವಕರಲ್ಲಿ ದೇಶಭಕ್ತಿ ಬೆಳೆಸುವಲ್ಲಿ ಹಾಗೂ ಏಕತೆ ಹಾಗೂ ರಾಷ್ಟ್ರಿಯ ಭಾವೈಕ್ಯತೆ ಬೆಳೆಸುವಲ್ಲಿ ಭಾವೈಕ್ಯತಾ ಶಿಬಿರಗಳು ಮಹತ್ವದ ಪಾತ್ರವಹಿಸುತ್ತವೆ" ಎಂದು ಹೇಳಿದರು.
ಕೆ. ವಿ. ಖಾದ್ರಿ ನರಸಿಂಹಯ್ಯ, ಪ್ರಾದೇಶಿಕ ನಿದರ್ೆಶಕರು, ಎನ್.ಎಸ್.ಎಸ್. ಪ್ರಾದೇಶಿಕ ನಿದರ್ೆಶನಾಲಯ, ಬೆಂಗಳೂರು ಇವರು ಸ್ವಾಗತಿಸಿದರು. ವಿತಾವಿ ಎನ್.ಎಸ್.ಎಸ್. ಅಧಿಕಾರಿ ಡಾ. ಅಪ್ಪಾಸಾಬ ಎಲ್. ವಿ. ಕಾರ್ಯಕ್ರಮ ಆಯೋಜಿಸಿದ್ದಾರೆ.