ಭಗವಾನ್ ರಾಮಕೃಷ್ಣರ ಪ್ರಾರ್ಥನಾ ಮಂದಿರದ ಉದ್ಘಾಟನೆ
ಹುಬ್ಬಳ್ಳಿ 31: ಆಶ್ರಮದ ಶಾಖಾ ಕೇಂದ್ರವಾದ ತಡಸ ಗ್ರಾಮದ ಕಮಲಾನಗರದ ಪಂಚವಟಿ ಕ್ಷೇತ್ರದಲ್ಲಿ ಕಲ್ಪತರು ಶುಭದಿನದಂದು ದಿನಾಂಕ 01 ಜನವರಿ 2025 ರ ಮುಂಜಾನೆ ನೂತನವಾಗಿ ನಿರ್ಮಿಸಲಾಗಿರುವ ಭಗವಾನ್ ರಾಮಕೃಷ್ಣರ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ಆಶ್ರಮದ ಅಧ್ಯಕ್ಷರಾದ ಸ್ವಾಮಿ ತೇಜಸಾನಂದಜೀ ಮಹಾರಾಜ್, ಸ್ವಾಮಿ ಬುದ್ಧಿಯೋಗಾನಂದಜೀ ಮಹಾರಾಜ್, ಸ್ವಾಮಿ ಗುರುದೇವಚರಣಾನಂದಜೀ ಮಹಾರಾಜ್ ಅವರ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ.
ಮುಂಜಾನೆ 9:15ಕ್ಕೆ ವಿಷ್ಣು ಸಹಸ್ರನಾಮ, 10:00ಕ್ಕೆ ವಿದ್ವಾನ ಸತ್ಯನಾರಾಯಣ ಜೋಶಿ ಅವರ ನೇತೃತ್ವದಲ್ಲಿ ಹೋಮ ನಡೆಯಲಿದ್ದು, 11:30ಕ್ಕೆ ಭಜನೆ, 12:00ಕ್ಕೆ ಡಾ. ವಿನಾಯಕ ಕುಲಕರ್ಣಿ "ಕಲ್ಪತರು ಶ್ರೀರಾಮಕೃಷ್ಣ" ವಿಷಯದ ಕುರಿತು ಉಪನ್ಯಾಸ ನೀಡಲಿದ್ದು, ನಂತರ ಮಹಾಮಂಗಳಾರತಿ - ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಹುಬ್ಬಳ್ಳಿ ಆಶ್ರಮದಿಂದ ಮುಂಜಾನೆ 7:30ಕ್ಕೆ ಪಂಚವಟಿಗೆ ತೆರಳಲು ವಾಹನ ವ್ಯವಸ್ಥೆ ಮಾಡಲಾಗಿದೆ. ವಾಹನ ವ್ಯವಸ್ಥೆ ಬೇಕಾದವರು ಈ ಮೊಬೈಲ್ ಸಂಖ್ಯೆಗೆ 8792192875 ಸಂಪರ್ಕಿಸಲು ವಿನಂತಿ. ಜೈ ರಾಮಕೃಷ್ಣ.