ಕಿಸಾನ್ ಸೇನಾ ನೂತನ ಸಂಘಟನೆಯ ಉದ್ಘಾಟನೆ: ಅಮ್ಜದ್ ಪಟೇಲ್ ಗೆ ಆಹ್ವಾನ
ಕೊಪ್ಪಳ 19: ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ನೂತನ ರಾಷ್ಟ್ರೀಯ ಮಟ್ಟದ ಸಂಘಟನೆಯ ಉದ್ಘಾಟನೆ ಹಾಗೂ ವಿಶ್ವ ರೈತ ದಿನಾಚರಣೆ ಮತ್ತು ರಾಜ್ಯ ರೈತರ ಮಹಾ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮತ್ತು ಪ್ರಶಸ್ತಿ ಸ್ವೀಕರಿಸುವಂತೆ ಕೊಪ್ಪಳ ನಗರಸಭೆಯ ಅಧ್ಯಕ್ಷರಾದ ಅಮ್ಜದ್ ಪಟೇಲ್ ರವರಿಗೆ ಕೊಪ್ಪಳದಲ್ಲಿ ಸಂಘಟಕರು ಭೇಟಿ ಮಾಡಿ ಆಹ್ವಾನ ಪತ್ರಿಕೆ ನೀಡಿದರು.
ಅಲ್ಲದೆ ರಾಜ್ಯಮಟ್ಟದ ಸೇವಾ ರತ್ನ ಪ್ರಶಸ್ತಿ ಕೂಡ ಸ್ವೀಕರಿಸುವಂತೆ ಸಂಘಟಕರು ಮನವಿ ಮಾಡಿಕೊಂಡರುಇದೇ ತಿಂಗಳ 21ರಂದು ಮಂಗಳವಾರ ಬೆಳಿಗ್ಗೆ ಜಿಲ್ಲೆಯ ಕುಕನೂರು ಪಟ್ಟಣದ ಮುಂಡರಗಿ ಅನ್ನದಾನಿಶ್ವರ ಶಾಖಾ ಮಠ ದಲ್ಲಿ ಅಮ್ಜದ್ ಪಟೇಲ್ ರವರಿಗೆ ಪ್ರಶಸ್ತಿ ಪ್ರಧಾನ ಮಾಡಿ ಸತ್ಕರಿಸಲಾಗುವುದು ಎಂದು ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ರಾಷ್ಟ್ರೀಯ ಅಧ್ಯಕ್ಷರಾದ ಎಂ ಎನ್ ಕುಕನೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟಕ ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನಾ ಸಂಘದ ರಾಷ್ಟ್ರೀಯ ಅಧ್ಯಕ್ಷ ಎಂ ಎನ್ ಕುಕನೂರ್ ಸೇರಿದಂತೆ ಈ ಸಂದರ್ಭದಲ್ಲಿ ಕಾರ್ಯಕ್ರಮ ಸಂಘಟನೆ ಹಾಗೂ ಸಂಘದ ಪದಾಧಿಕಾರಿಗಳಾದ ಜಿಲ್ಲಾಧ್ಯಕ್ಷ ಮಹಬೂಬ್ ಮಾಳೆಕೋಪ್, ಜಿಲ್ಲಾ ಉಪಾಧ್ಯಕ್ಷರಾದ ಬಸವರಾಜ್ ಅಡವಿ ಸದಸ್ಯರಾದ ಚಂದ್ರಕಾಂತ್ ಗುಡಿಮನಿ ಜಿಲ್ಲಾ ಕಾರ್ಯದರ್ಶಿ ಹನುಮೇಶ ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷ ಪಿಡನ ಗೌಡ್ರು ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡಿದ್ದು, ಅಮ್ಜದ್ ಪಟೇಲ್ ರವರಿಗೆ ಪ್ರಶಸ್ತಿ ಲಭಿಸಿರೋದಕ್ಕೆ ಅವರ ಅಭಿಮಾನಿ ವರ್ಗ ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.