ಜ್ಞಾನ ಸೇತು ತರಬೇತಿ ಕಾರ್ಯಕ್ರಮ ಜಗದೀಶ್ ಜಿ.ಎಚ್ ಉದ್ಘಾಟನೆ

ಜ್ಞಾನ ಸೇತು ತರಬೇತಿ ಕಾರ್ಯಕ್ರಮ ಜಗದೀಶ್ ಜಿ.ಎಚ್ ಉದ್ಘಾಟನೆ Inauguration of Jnana Setu Training Program Jagdish G.H

ಜ್ಞಾನ ಸೇತು ತರಬೇತಿ ಕಾರ್ಯಕ್ರಮ ಜಗದೀಶ್ ಜಿ.ಎಚ್ ಉದ್ಘಾಟನೆ 

ಕೊಪ್ಪಳ 05: ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಭೌತಶಾಸ್ತ್ರ, ರಸಾಯನಶಾಸ್ತ್ರಗಣಿತ, ಜೀವಶಾಸ್ತ್ರ, ಗಣಕವಿಜ್ಞಾನ,ಅರ್ಥಶಾಸ್ತ್ರ ಮತ್ತುಇಂಗ್ಲಿಷ್ ವಿಷಯದಉಪನ್ಯಾಸಕರಿಗೆಒಂದು ದಿನದಜ್ಞಾನಸೇತುತರಬೇತಿಕಾರ್ಯಗಾರವನ್ನುಭಾಗ್ಯನಗರದ ನವಚೇತನ ಪಿಯುಕಾಲೇಜು ಮತ್ತುಜ್ಞಾನಬಂಧು ಪದವಿ ಪೂರ್ವ ಕಾಲೇಜುಗಳಲ್ಲಿ ಏರಿ​‍್ಡಸಲಾಗಿತ್ತು. ಕಾರ್ಯಕ್ರಮವನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಜಗದೀಶ್‌ಜಿ.ಎಚ್ ಯವರು ಉದ್ಘಾಟಿಸಿ ಬದಲಾವಣೆ ಸಹಜ ಪ್ರಕ್ರಿಯೆ, ಬದಲಾವಣೆಗೆ ಹೊಂದಿಕೊಳ್ಳದ ಜೀವಿ ನಾಶ ಹೊಂದುತ್ತದೆ. ಈ ಕಾರಣಕ್ಕಾಗಿ ಶಿಕ್ಷಣದಲ್ಲಿ ಕೂಡ ಅನೇಕ ಬದಲಾವಣೆಗಳು ಬರುತ್ತಿವೆ. ಅದರಲ್ಲಿ ಸರ್ಕಾರದ ಮಹತ್ವಕಾಂಕ್ಷಿಯ ಜ್ಞಾನಸೇತುಕಾರ್ಯಕ್ರಮ ಕೂಡಒಂದಾಗಿದೆ ಎಂದರು. ಈ ಕಾರ್ಯಕ್ರಮವು ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನ ನೀಡುವ ಪದ್ಧತಿಯಾಗಿದೆ,ಇದು ನಮ್ಮ ವಿದ್ಯಾರ್ಥಿಗಳಿಗೆ ಮತ್ತುಉಪನ್ಯಾಸ್ಕರಿಗೆತಮ್ಮಜ್ಞಾನವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ದ್ವಿತೀಯ ಪಿಯುಸಿ ಫಲಿತಾಂಶ ಹೆಚ್ಚಿಸಿಕೊಳ್ಳುವಲ್ಲಿ ಹೆಚ್ಚು ಸಹಕಾರಿಯಾಗಿದೆ.ಉಪನ್ಯಾಸಕರು ಸರ್ಕಾರಿ ಕಾಲೇಜುಗಳಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಶ್ರದ್ಧಾಪೂರ್ವಕವಾಗಿ ಸಮರಾ​‍್ಣ ಭಾವದಿಂದಯೋಜನೆ ಬಗ್ಗೆ ಮಾಹಿತಿ ನೀಡಿಅತ್ಯಂತ ಯಶಸ್ವಿಯಾದ ಕಾರ್ಯಕರ್ಮನ್ನಾಗಿರೂಪಿಸಲು ಶ್ರಮಿಸಬೇಕೆಂದುಕರೆ ನೀಡಿದರು.ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದಅಧ್ಯಕ್ಷರಾದ ಬಸಪ್ಪ ನಾಗೋಲಿ, ಖಜಾಂಚಿ ಶಾಂತಪ್ಪ ಟಿ. ಸಿ.,ಉಪನ್ಯಾಸಕರ ಸಂಘದಅಧ್ಯಕ್ಷರಾದ ಸೋಮಶೇಖರ್‌ಗೌಡ ಹಾಗೂ ಜ್ಞಾನಸೇತುಕಾರ್ಯಕ್ರಮದಜಿಲ್ಲಾ ನೋಡಲ್‌ಅಧಿಕಾರಿ ಎ.ಭೀಮಪ್ಪಇವರು ಉಪಸ್ಥಿತರಿದ್ದರು. ಸಮಾರಂಭದಅಧ್ಯಕ್ಷತೆಯನ್ನು ನವಚೇತನ ಪದವಿಪೂರ್ವಕಾಲೇಜಿನ ಪ್ರಾಚಾರ್ಯರಾದ ಸಂಗೀತ ಪಾಟೀಲ್ ವಹಿಸಿಕೊಂಡಿದ್ದರು.ಆರಂಭದಲ್ಲಿಜಿಲ್ಲಾ ನೋಡಲು ಅಧಿಕಾರಿಗಳಾದ ಎ.ಭೀಮಪ್ಪಇವರುಜ್ಞಾನಸೇತುಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡುತ್ತಾಇದು ಲಾಭರಹಿತ ಸಂಸ್ಥೆಯಾದಖಾನ್‌ಅಕಾಡೆಮಿಇಂಡಿಯಾಇದರ ಸಹಯೋಗದೊಂದಿಗೆಕಲಿಕೆಯಲ್ಲಿ ಆಸಕ್ತಿಯುಳ್ಳವರಿಗೆ ವಿಶ್ವದರ್ಜೆಯ ಶಿಕ್ಷಣವನ್ನು ಒದಗಿಸುವುದುಇದರಧ್ಯಯವಾಗಿದೆ ಹಾಗೂ ಕಲಿಯುವವರೆಲ್ಲರಿಗೂಇದುಉಚಿತವಾಗಿದೆಎಂದರು. ಪ್ರಾಚಾರ್ಯರಾದರವೀಂದ್ರ ಮತ್ತುಇತರರು ಉಪಸ್ಥಿತರಿದ್ದರು. 

ಈ ತರಭೇತಿಯಲ್ಲಿ ಏಳು ವಿಷಯಗಳ ಸಂಪನ್ಮೂಲ ವ್ಯಕ್ತಿಗಳು, ಮುನಿರಾಬಾದ್‌ಡಯಟ್ ಸಂಸ್ಥೆಯ ಪರೀಕ್ಷಕರು ಭಾಗವಹಿಸಿದ್ದರು.ಜಿಲ್ಲೆಯ ವಿವಿಧ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಿಂದ ಸುಮಾರು250ಕ್ಕೂ ಹೆಚ್ಚು ಉಪನ್ಯಾಸಕರು ಈ ತರಬೇತಿ ಶಿಬಿರದಲ್ಲಿ ಭಾಗವಹಿಸಿದ್ದರು.