ಭಗೀರಥ ಸಮುದಾಯ ಭವನ ಸಚಿವ ತಿಮ್ಮಾಪುರ ಉದ್ಘಾಟನೆ
ಮಹಾಲಿಂಗಪುರ 29: ನೂತನ ಭಗೀರಥ ಸಮುದಾಯ ಭವನ ಉದ್ಘಾಟನೆಯನ್ನು ಹಲವಾರು ಶ್ರೀಗಳ ಸಮ್ಮುಖ ಭವ್ಯ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ ನೆರೆವೇರಿಸಲಿದ್ದಾರೆ ಎಂದು ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಭೀಮಪ್ಪ ಸಸಾಲಟ್ಟಿ ಹೇಳಿದರು.
ಜನವರಿ 31 ರಂದು ಮುಂಜಾನೆ 11 ಗಂಟೆಗೆ ರಬಕವಿ, ಬನಹಟ್ಟಿ ತಾಲೂಕಿನ ಕೆಸರಗೊಪ್ಪ ಗ್ರಾಮದಲ್ಲಿ ಜರುಗುವ ಸಮಾರಂಭದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಮುದಾಯ ಭವನದ ಕಾಮಗಾರಿ ಆರಂಭಗೊಂಡು ಸುಮಾರು ಒಂದು ದಶಕಗತಿಸಿದ್ದು, ಇನ್ನೂ 10 ರಿಂದ 15 ಪ್ರತಿಶತ ರಷ್ಟು ಕೆಲಸ ಬಾಕಿ ಇದೆ. ಇಲ್ಲಿಯವರೆಗೆ ಅಂದಾಜು 2.5 ಕೋಟಿಯಷ್ಟು ಹಣ ವ್ಯಯಿಸಲಾಗಿದೆ. ಈ ಕೆಲಸಕ್ಕೆ ಸರ್ವರೂ ತಮ್ಮ ತನು ಮನ ಧನ ನೀಡಿ ಸಹಕರಿಸಿದ್ದಾರೆ ಅವರೆಲ್ಲರಿಗೂ ಸಮಾಜ ಬಂಧುಗಳ ವತಿಯಿಂದ ಅಭಿನಂದನೆಗಳು ಎಂದರು.
ಕಾರ್ಯಕ್ರಮ ರೂಪು ರೇಷೆ; ಅಂದೆ ಶುಕ್ರವಾರ 8 ಗಂಟೆಗೆ ಭಗೀರಥ ಭಾವ ಚಿತ್ರ, ಪುರುಷೋತ್ತಮಾನಂದ ಶ್ರೀಗಳ ಬೆಳ್ಳಿ ರಥ ಹಾಗೂ ಕುಂಬ ಮೇಳದೊಂದಿಗೆ ಮೆರವಣಿಗೆ ಶ್ರೀ ಬಿಸಿಲುಸಿದ್ಧೇಶ್ವರ ದೇವಸ್ಥಾನದಿಂದ ಗ್ರಾಮದ ಭಗಿರಥ ದೇವಸ್ಥಾನ ವರೆಗೆ ಸಾಗಿ, ನಂತರ ಹೋಮ ಹವನ ನಡೆಯುವುದು. ಮಧ್ಯಾಹ್ನ ಭಜನೆ ರಾತ್ರಿ ಸೋಲಿಲ್ಲದ ಸರದಾರ ನಾಟಕ ಪ್ರದರ್ಶನ ನಡೆಯುವುದು.
ಮಧುರೈ ಪುರುಷೋತ್ತಮಾನಂದ ಶ್ರೀಗಳು, ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು, ಪ್ರಭು ಶ್ರೀಗಳು, ಗುರುಸಿದ್ಧೇಶ್ವರ ಶ್ರೀಗಳು, ಅಭಿನವ ಧರೇಶ್ವರ ಶ್ರೀಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ, ಕಾಂಗ್ರೆಸ್ ನಾಯಕ ಸಿದ್ದು ಕೊಣ್ಣೂರ ಹಾಗೂ ಇತರರು ಜ್ಯೋತಿ ಬೆಳಗುವರು, ಅಧ್ಯಕ್ಷತೆಯನ್ನು ಭೀಮಶಿ ಸಸಾಲಟ್ಟಿ ಮತ್ತು ಪರ್ಪ ಗಂಗಪ್ಪ ಬ್ಯಾಕೋಡ್ ವಹಿಸಿ, ಸಂಸದ ಪಿ ಸಿ ಗದ್ದಿಗೌಡರ, ವಿಪ ಸದಸ್ಯ ಉಮಾಶ್ರೀ, ಹಣ್ಮಂತ ನಿರಾಣಿ, ಸುನೀಲ್ ಗೌಡ ಪಾಟೀಲ್ ಹಾಗೂ ಉಪ್ಪಾರ ಸಮಾಜದ ರಾಜ್ಯಾಧ್ಯಕ್ಷ ಪುಟ್ಟರಂಗಶೆಟ್ಟಿ ಉಪಸ್ಥಿತರಿರುವರು. ಕಾರ್ಯಕ್ರಮದಲ್ಲಿ ಸಾಧಕರಿಗೆ ವಿಶೇಷ ಸನ್ಮಾನ ನಡೆಯುವುದು.
ಪೂರ್ವಭಾವಿ ಸಭೆಯಲ್ಲಿ ಉಪ್ಪಾರ ಸಂಘದ ಭೀಮಪ್ಪ ಸಸಾಲಟ್ಟಿ, ಮಾರುತಿ ಬ್ಯಾಕೋಡ, ಮಾರುತಿ ಕರೋಶಿ, ವಿಠ್ಠಲ್ ಕಲ್ಲಟ್ಟಿ, ಪರ್ಪ ಬ್ಯಾಕೋಡ, ಮಾರುತೆಪ್ಪ ತೇಜಪ್ಪಗೋಳ, ಅಲ್ಲಪ್ಪ ದಡ್ಡಿಮನಿ, ಭೀಮಪ್ಪ ಬ್ಯಾಕೋಡ, ಮಲ್ಲಪ್ಪ ತೇಜಪ್ಪಗೋಳ, ಬಾಳಪ್ಪ ದಡ್ಡಿಮನಿ, ತಿಪ್ಪಣ್ಣ ಬ್ಯಾಕೋಡ್, ವಿಠ್ಠಲ್ ಶಿರೋಳ, ಕರೆಪ್ಪ ಬ್ಯಾಕೋಡ, ಶಿವಾನಂದ ಬ್ಯಾಕೋಡ, ವಸಂತ ಜಗದಾಳ ಊರಿನ ಹಾಗೂ ಸಮಾಜದ ಪ್ರಮುಖರಾದ ದುಂಡಪ್ಪ ಜಾಧವ, ಡಾ.ಎಂ. ಬಿ ಪೂಜಾರಿ, ಹುಲೇಪ್ಪ ಬ್ಯಾಕೋಡ, ಮಹಾದೇವ ಸಸಾಲಟ್ಟಿ, ಭೀಮಪ್ಪ ಲ. ಸಸಾಲಟ್ಟಿ, ಭರಮಪ್ಪ ದಡ್ಡಿಮನಿ, ಬಸವರಾಜ ಜಿಡ್ಡಿಮನಿ, ಅಡಿವೆಯ್ಯ ಮಠಪತಿ, ಶಿವಾಜಿ ತೇಜಪ್ಪಗೋಳ, ಸಂಗಪ್ಪ ಪೂಜಾರಿ, ಧರೆಪ್ಪ ಸಸಾಲಟ್ಟಿ, ಸತೀಶ್ ಬ್ಯಾಕೋಡ ಸೇರಿದಂತೆ ಅನೇಕ ಇದ್ದರು.