ಅಂಗನವಾಡಿ ನೂತನ ಕಟ್ಟಡ ಉದ್ಘಾಟನೆ

ಲೋಕದರ್ಶನ ವರದಿ

ರಾಮದುರ್ಗ 27: ತಾಲೂಕಿನ ಸುರೇಬಾನ, ಶಿವಪೇಟ, ಅವರಾದಿ ಗ್ರಾಮಗಳಲ್ಲಿ ಶಾಸಕ ಮಹಾದೇವಪ್ಪ ಯಾದವಾಡ 50 ಲಕ್ಷ ರೂ.ವೆಚ್ಚದ ವಿವಿಧ ಕಾಮಗಾರಿಗೆ ಶನಿವಾರ ಭೂಮಿ ಪೂಜೆ ನೆರೆವೇರಿದರಲ್ಲದೆ ಶಿವಪೇಟೆಯಲ್ಲಿ ಅಂಗನವಾಡಿ ನೂತನ ಕಟ್ಟಡ ಉದ್ಘಾಟಿಸಿದರು.

ಶಿವಪೇಟ ಗ್ರಾಮದಲ್ಲಿ 12 ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ ಭವನ ನಿಮರ್ಾಣ, ಅವರಾದಿಯಲ್ಲಿ 15 ಲಕ್ಷ ರೂ. ವೆಚ್ಚದಲ್ಲಿ ಗ್ರಾ.ಪಂ. ಕಟ್ಟಡ ಹಾಗೂ  ಸುರೇಬಾನದಲ್ಲಿ 23 ಲಕ್ಷ ರೂ. ವೆಚ್ಚದಲ್ಲಿ ಕುಡಿಯುವ ನೀರಿನ ಓವರ್ ಹೆಡ್ ಟ್ಯಾಂಕ್ ನಿಮರ್ಿಸಲಾಗುತ್ತಿದೆ. ಆಯಾ ಗ್ರಾಮಗಳ ಮುಖಂಡರು ಅಭಿವೃದ್ಧಿ ಕಾಮಗಾರಿಗಳನ್ನು ಮುಂದೆ ನಿಂತು ಗುಣಮಟ್ಟದ ಕೆಲಸ ಮಾಡಿಸಿಕೊಳ್ಳಬೇಕೆಂದು ಹೇಳಿದರು.

ಜಿ.ಪಂ.ಸದಸ್ಯೆ ಶಿವಕ್ಕ ಬೆಳವಡಿ, ಗ್ರಾ.ಪಂ. ಅಧ್ಯಕ್ಷ ಮಹಾದೇವಪ್ಪ ಮದಕಟ್ಟಿ, ಗ್ರಾ.ಪಂ ಅಧ್ಯಕ್ಷೆ ಯಲ್ಲಮ್ಮ ಮೋಟೆ, ಎ.ಪಿ.ಎಂ.ಸಿ ಸದಸ್ಯ ದ್ಯಾವಪ್ಪ ಬೆಳವಡಿ, ತಾ.ಪಂ. ಸದಸ್ಯ ಶಿವಪ್ಪ ಮೇಟಿ, ಕೃಷಿ ಬ್ಯಾಂಕ ಅಧ್ಯಕ್ಷ ಸಂಗನಗೌಡ ಪಾಟೀಲ, ಸಿ.ಡಿ.ಪಿ.ಓ ಸಿಂಗಾರೆವ್ವ ಒಂಟಮೂರಿ, ಮೇಲ್ವಿಚಾರಕಿ ವೈಶಾಲಿ ಕುಲಕಣರ್ಿ, ಲಕ್ಷ್ಮಣ ಬಾಡಗಾರ, ರಮೇಶ ಕಮ್ಮಾರ, ತಿಪ್ಪಣ್ಣ ಗಾಣಿಗೇರ, ನಿಂಗಪ್ಪ ಮೆಳ್ಳಿಕೇರಿ, ಬಸಣ್ಣ ಕುದರಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.  

ಮುತ್ತಿಗೆ ಹಾಕಿದ ಮಹಿಳೆಯರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದ ಶಾಸಕ:

ತಾಲೂಕಿನ ಅವರಾದಿ ಗ್ರಾಮದಲ್ಲಿ ಮಹಿಳೆಯರು ಶಾಸಕರನ್ನು ಮುತ್ತಿಗೆ ಹಾಕಿ ಪ್ರವಾಹದಲ್ಲಿ ಮನೆ ಕಳೆದುಕೊಂಡು ಬೀದಿಗೆ ಬಂದಿದ್ದೇವೆ. ಆದರೆ ಇನ್ನೂ ಮನೆಗಳನ್ನು ಜಿ.ಪಿ.ಎಸ್ ಮಾಡಿಸಿಲ್ಲ. ಹೀಗಾದರೆ ನಾವು ಮಕ್ಕಳು ಮರಿಗಳನ್ನು ಕರೆದುಕೊಂಡು ಎಲ್ಲಿಗೆ ಹೋಗೋಣ ಎಂದು ಪ್ರಶ್ನಿಸಿದರು. ತಕ್ಷಣದ ಸ್ಥಳದಲ್ಲಿ ಪಿ.ಡಿ.ಒ ಅವರನ್ನು ತರಾಟೆಗೆ ತೆಗೆದುಕೊಂಡು 15 ದಿನಗಳ ಒಳಗಾಗಿ ಎಲ್ಲವನ್ನು ಸರಿಪಡಿಸಬೇಕೆಂದು ಎಚ್ಚರಿಕೆ ನೀಡಿದರಲ್ಲದೆ ತಹಸೀಲ್ದಾರರಿಗೆ ಪೋನ್ ಮೂಲಕ ಮಾತನಾಡಿ ತಕ್ಷಣದಲ್ಲಿ ಸ್ಥಳಕ್ಕೆ ಆಗಮಿಸಿ ಈ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕೆಂದು ತಿಳಿಸಿ ಮಹಿಳೆಯರನ್ನು ಸಾಮಾದಾನ ಪಡಿಸಿದರು.