ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳಿಗಾಗಿ ‘ಐಸಿಎಐ ಸಹಾಯ ವಾಣಿ ಉದ್ಘಾಟನೆ
ಬಳ್ಳಾರಿ 18: ನಗರದಲ್ಲಿ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಬಳ್ಳಾರಿ ಶಾಖೆ (ಖಋಅ)ವತಿಯಿಂದ ಆಯೋಜಿಸಲಾಗಿದ್ದ ಸೂಕ್ಷ್ಮ, ಸಣ್ಣ, ಮಧ್ಯಮ ( ಒಖಒಇ) ಉದ್ಯಮಗಳಿಗಾಗಿ ‘ಐಸಿಎಐ ಸಹಾಯ ವಾಣಿ’ಯನ್ನು ಜಿಲ್ಲಾಧಿಕಾರಿಗಳಾದ ಪ್ರಶಾಂತ್ ಕುಮಾರ್ ಮಿಶ್ರ ಅವರು ಉದ್ಘಾಟಿಸಿದರು.
ನಂತರ ಮಾತನಾಡಿ ವಿದ್ಯಾರ್ಥಿಗಳು ಉದ್ಯಮವನ್ನು ಸ್ಥಾಪಿಸಿ ಉದ್ಯೋಗಗಳನ್ನು ಸೃಷ್ಟಿಸಬೇಕು,ಅದಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಸರ್ಕಾರದ ಪ್ರತಿನಿಧಿಯಾಗಿ ನಾನು , ಚಾರ್ಟರ್ಡ್ ಅಕೌಂಟೆಂಟ್ಸ್ ಸಂಸ್ಥೆ ಹಾಗೂ ಇತರೆ ಸಂಸ್ಥೆಗಳ ಸಹಯೋಗದೊಂದಿಗೆ , ವ್ಯವಸ್ಥೆ ಮಾಡಲು ಪ್ರಯತ್ನಿಸುತ್ತೇನೆ ಮತ್ತು ವಿದ್ಯಾರ್ಥಿಗಳಲ್ಲಿ ಕೌಶಲ್ಯ ಅಭಿವೃದ್ಧಿ ಆಗಬೇಕೆಂದರೆ ಪಠ್ಯಕ್ರಮದಲ್ಲಿ ಅಗತ್ಯ ಬದಲಾವಣೆ ಮಾಡಲು ವಿಶ್ವವಿದ್ಯಾನಿಲಯದ ಜೊತೆಗೆ ಮಾತುಕತೆಯನ್ನು ಮಾಡುತ್ತೇನೆ ಎಂದು ತಿಳಿಸಿದರು.
ತರುವಾಯ ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ಸಮಿತಿ ಹಾಗೂ ಐಸಿಎಐನ ದಕ್ಷಿಣ ಭಾರತ ವಿಭಾಗದ ಮಾಜಿ ಅಧ್ಯಕ್ಷರಾದ ಶ್ರೀ ಸಿರಿಗೇರಿ ಪನ್ನಾರಾಜ್ ಅವರು ಮಾತನಾಡಿ ಐಸಿಎಐ ಬಳ್ಳಾರಿ ಶಾಖೆಯ ಸ್ಥಾಪನೆ ಮತ್ತು ಶಾಖೆಯ ಸಾಧನೆಗಳನ್ನು ವಿವರಿಸಿದರು. ಬಳ್ಳಾರಿ ಶಾಖೆಯ ಋಂಋ ಊಇಐಕ ಆಇಖಏ ತಿಂಗಳಿಗೆ ಎರಡು ದಿನಗಳಂದು ನವೋದ್ಯಮಿಯಾಗಲು ಇಚ್ಛಿಸುವ ಯುವಕರಿಗೆ ಮಾರ್ಗದರ್ಶನ ನೀಡಲು ಪ್ರಾರಂಭಿಸುತ್ತದೆ ಎಂದು ಹೇಳಿದರು.ಈ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸಿಎ ವೆಂಕಟನಾರಾಯಣ್ ಚಲವಾಡ, ಉಪಾಧ್ಯಕ್ಷರಾದ ಸಿಎ ಗಜರಾಜ್, ಚಿರಕಾರ್ಯದರ್ಶಿಗಳಾದ ಸಿಎ ಸ್ವಪ್ನ ಪ್ರಿಯ, ಸಿಎ ಶರಣ ಪಾಟೀಲ್,ಹಾಗೂ ಸಂಸ್ಥೆಯ ಸದಸ್ಯರುಗಳು ಮತ್ತು ವಿದ್ಯಾರ್ಥಿಗಳು ನೆರೆದಿದ್ದರು. ಐಸಿಎಸ್‌ಐ ಮತ್ತು ಐಸಿಎಂಎಐ ಯ ಸದಸ್ಯರುಗಳು ಮತ್ತು ವಿದ್ಯಾರ್ಥಿಗಳು ,ವೀರಶೈವ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಾದ ಅಲ್ಲಮ ಕರಿಬಸಪ್ಪ ಮತ್ತು ರಾವ್ ಬಹದ್ದೂರ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.