ಸಕರ್ಾರಿ ಪ್ರೌಡಶಾಲೆಯಲ್ಲಿ ಒಂದು ವಾರದ ಉಚಿತ ಯೋಗ ವಿಜ್ಞಾನ ಶಿಬಿರದ ಉದ್ಘಾಟನೆ


ಲೋಕದರ್ಶನ ವರದಿ

ಬಳ್ಳಾರಿ23: ಬಳ್ಳಾರಿ ತಾಲ್ಲೂಕಿನ  ಸಿಂಧವಾಳ ಗ್ರಾಮದ ಸಕರ್ಾರಿ  ಪ್ರೌಡಶಾಲೆಯ 150 ವಿದ್ಯಾಥರ್ಿಗಳು ಒಂದು ವಾರದ ಉಚಿತ ಯೋಗ ವಿಜ್ಞಾನ ಶಿಬಿರದ ಜಿಲ್ಲಾ ಪತಂಜಲಿ ಕಾರ್ಯಕ್ರಮದ ಉದ್ಘಾಟನೆಯನ್ನು ಊರಿನ ಮುಖಂಡರಾದ ವಿರೇಶ್ಗೌಡ್  ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾದ   ಜಿಲ್ಲಾ ಪತಂಜಲಿ ಯೋಗ ಸಂಯೋಜಕರಾದ ಇಸ್ವಿ ಪಂಪಾಪತಿ ಮಕ್ಕಳಿಗೆ ಯೋಗ ಅಭ್ಯಾಸವನ್ನು ಮಾಡಿಸುತ್ತಾ ಇಂದಿನ ತಾಂತ್ರಿಕ ಯುಗದಲ್ಲಿ ಯೋಗ   ಅತ್ಯಅವಶ್ಯಕ. ಪ್ರಾಣಾಯಮಾ ಮಾಡುವುದರಿಂದ ಹಳ್ಳಿಯ ರೈತ ಮಕ್ಕಳಿಗೆ ದೈಹಿಕ ಬದಲಾವಣೆ ಮಾನಸಿಕ ಚೈತನ್ಯವೃದ್ದಿ, ನರನಾಡಿಗಳಿಗೆ ಒಳ್ಳೆಯ ಆಮ್ಲಜನಕ ದೊರಕಿದ್ದು ರಕ್ತದ ಕಣಗಳು, ವೃದ್ದಿಯಾಗಿ ರೋಗದಿಂದ ಮುಕ್ತರಾಗಲು ಸಹಕಾರ ನೀಡುತ್ತದೆ, ಯೋಗಾಭ್ಯಾಸದಿಂದ ಪಾಠದಲ್ಲಿ ಆಸಕ್ತಿ, ಕಲಿಕೆಯಲ್ಲಿ ಒಳ್ಳಯೆ ಫಲಿತಾಂಶ ಸಿಗುತ್ತದೆ. ಹಾಗೂ ಆಟೋಟಗಳಲ್ಲಿ ನಂ.1 ಆಗಲು ಸಾದ್ಯವಾಗುವುದೆಂದು ತಿಳಿಸಿದರು.

ಶಾಲೆಯ ಮುಖ್ಯ ಗುರುಗಳಾದ ಕೆ.ರೇವಣಸಿದ್ದಪ್ಪ ಇವರು ಶಿಬಿರವನ್ನು ಉದ್ದೇಶಿಸಿ ಇಂದಿನ ಒತ್ತಡದ ಬದುಕಿನಲ್ಲಿ ಯೋಗದ ಅವಶ್ಯಕತೆ ತಿಳಿಸುತ್ತಾ ವಿದ್ಯಾಥರ್ಿಗಳು, ನಕಾರಾತ್ಮಕ ಭಾವನೆಗಳನ್ನು ತ್ಯಜಿಸಿ, ಸಕಾರಾತ್ಮಕ ಭಾವನೆಗಳನ್ನು ರೂಡಿಸಿಕೊಂಡಾಗ ಉತ್ತಮ ಜೀವನ ನಡೆಸಲು ಯೋಗ ಸಂಪೂರ್ಣ ಸಹಕಾರಿಯಾಗಿದೆ ಎಂಬುದನ್ನು ತಿಳಿಸಿದರು. ಏಕಾಗ್ರತೆಯಿಂದ ಜ್ಞಾನಾರ್ಜನೆ, ಶಿಸ್ತು,ಸಂಯಮ, ಶ್ರದ್ದೆ, ಹೊಸತನಗಳನ್ನು ಬೆಳೆಸಿಕೊಳ್ಳಬಹುದಾಗಿದೆ. ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪತಂಜಲಿ ಯೋಗ ಸಮಿತಿ ಅಧ್ಯಕ್ಷರಾದ ಪಿ.ಎಂ.ನಟರಾಜ್, ಯುವ ಭಾರತ ಅಧ್ಯಕ್ಷರಾದ ಲಕ್ಷ್ಮಿರೆಡ್ಡಿ, ಹಾಗೂ ಯೋಗ ಸಂಪನ್ಮೂಲ ಶಿಕ್ಷಕರಾದ ಗೂಳೆಪ್ಪ, ರುದ್ರಮುನಿ, ಮಹೇಶಗೌಡ, ಕನರ್ಾಟಕ ಯುವಕ ಸಂಘದ ಅಧ್ಯಕ್ಷರಾದ ವೀರೇಶ್ ಹಾಗೂ ಕಾರ್ಯದಶರ್ಿಗಳಾದ ಮಹಂತೇಶ್, ಪ್ರಾಥಮಿಕ ಪ್ರೌಡಶಾಲೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ತಿತರಿದ್ದು, ಕಾರ್ಯಕ್ರಮದ ನಿರೂಪಣೆಯನ್ನು ಶಂಕರಪ್ಪ, ಸ.ಶಿ. ಹಾಗೂಗೀತಾ ಸ.ಶಿ.ಇವರು ಸ್ವಾಗತಿಸಿದರು.