ಲೋಕದರ್ಶನ ವರದಿ
ಗದಗ 27: ಕನ್ನಡ ಚಳುವಳಿ ವಾಟಾಳ್ ಸಂಘಟನೆ ಉದ್ಘಾಟನಾ ಕಾರ್ಯಕ್ರಮವನ್ನು ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು ಉದ್ಘಾಟನೆಯನ್ನು ಅನೀಲ ಗರಗ ನಗರಸಭೆ ಸದಸ್ಯರು ಗದಗ ಮಾತನಾಡಿ ಕನ್ನಡ ಚಳುವಳಿಯ ಸಂಘಟನೆ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸಲಿ ಎಂದು ಹರಿಸಿದರು. ಬಿ.ವಿ.ಹುಡೇದ ಶಿಕ್ಷಕರು ಕಾರ್ಯಕ್ರಮದ ನಿರೂಪಣಾ ಮಾತನಾಡಿ ನಮ್ಮ ಗದಗ ಜಿಲ್ಲೆಯ ಜಕ್ಕಲಿ ಗ್ರಾಮದ ಅಂದಾನೇಪ್ಪ ಮೇಟಿ ಅವರು ಕನ್ನಡ ಭುವನೇಶ್ವರಿಯ ಭಾವಚಿತ್ರವನ್ನು ನೀಡಿದ ಕೊಡುಗೆ ನಮ್ಮ ಗದಗ ಜಿಲ್ಲೆಯದ್ದು ಎಂಬ ಮಾತನ್ನ ತಿಳಿಸಿದರು. ಕನ್ನಡದ ಕಟ್ಟಾಳುವಿನ ಸಂಘಟನೆ ನಮ್ಮ ಗದಗ ಜಿಲ್ಲೆಯಲ್ಲಿ ಉದ್ಘಾಟನೆ ಗೊಂಡಿದ್ದು ತುಂಬಾ ಸಂತೋಷದ ವಿಷಯ ಎಂದು ಮಾತನಾಡಿದರು.
ಇದೆ ಸಂದರ್ಭದಲ್ಲಿ ರಾಮ ಸೇನೆ ಗದಗ ಜಿಲ್ಲಾ ಅಧ್ಯಕ್ಷರು ಆದ ರಾಜು ಖಾನಪ್ಪನವರ ಮಾತನಾಡಿ ಕನರ್ಾಟಕದ ಒಟ್ಟು 1857 ಸಂಘಟನೆಯ ರಾಜ್ಯಾಧ್ಯಕ್ಷರು ಬೆಂಗಳೂರಿನಲ್ಲಿ ಇದ್ದಾರೆ ಅದರಲ್ಲಿ ಹೋರಾಟದ ಸಂಘಟನೆಗಳಿಗೆ ಇರುವ ಮಹತ್ವವೆ ಬೇರೆ ಎಂಬ ಮಾತನ್ನು ತಿಳಿಸಿದರು.
ನಂದಿವೇರಿ ಮಠದಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಮುಖರು ಕನ್ನಡ ಚಿಗುರಲಿ ಸಂಘಟನೆ ಬೆಳೆಯಲಿ ಎಂದು ಹರಸಿದರು. ಆಯ್.ಎಫ್.ಬೇಟಗೇರಿ ಭೋವಿ ಸಮಾಜದ ಅಧ್ಯಕ್ಷರು ಟ್ರಸ್ಟ್ ಕಮೀಟಿ ಗದಗ ಕನ್ನಡ ಚಳುವಳಿ ವಾಟಳ್ ಸಂಘಟನೆ ಗದಗ ಜಿಲ್ಲಾ ಅಧ್ಯಕ್ಷರು ರಾಜು ಎಫ್ ಪೂಜಾರ ಜಿಲ್ಲಾ ಉಪಾಧ್ಯಕ್ಷ ವೆಂಕಟೇಶ್ ಎಸ್ ಶಾಂತಗೇರಿ ಉಪಸ್ಥಿತರಿದ್ದರು. ಅಥಿಗಳಾಗಿ ಯಲ್ಲಪ್ಪ ತಾಳಿಕೋಟಿ, ಸುರೇಶ ಹಾವೇರಿ ಗಣೇಶ ಹೆಬ್ಬಳ್ಳಿ ತಿಮ್ಮಣ್ಣ ನಿಡಗುಂದಿ ಬಂಗಾರೇಪ್ಪ ಕಟಗಿ ಭೀಮಣ್ಣ ನರೇಗಲ್ಲ ನಿವಾಸ ಭಂಡಾರಿ ರಜಾಕ ಹಳ್ಳಿಕೇರಿ ಮೈಲಾರೇಪ್ಪ ಕೋಟೆಪ್ಪನವರ ಸುರೇಶ ಮ್ಯಾದಾರ ಮಂಜು ಕಟ್ಟಿಮನಿ ನಾಗರಾಜ ವಡ್ಡರ ಮಲ್ಲೇಶ ಹರಿಜನ ಕನರ್ಾಟಕ ವಿಶ್ವ ನಿಮರ್ಾಣ ಸೇನೆ ಗದಗ ಜಿಲ್ಲಾ ಅದ್ಯಕ್ಷರು.ದುರಗಪ್ಪ ಸಂಕನಕಲ್ಲ ಅಯ್ಯಪ್ಪ ಭಂಡಾರಿ ಮರಿಯಪ್ಪ ಭಂಡಾರಿ ವೇಂಕಟೇಶ ಗುರಿಕಾರ, ಸುರೇಶ ಕೊಪ್ಪಳ, ಲಕ್ಷ್ಮಣ ಪೂಜಾರ, ಮತ್ತು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.