ಸಾಮಾಜಿಕ ಜಾಲತಾಣದಿಂದ ನಿಮರ್ಿತವಾದ ಸಂಘ ನಗರದ ಅನಾಥಶ್ರಮದಲ್ಲಿ ಉದ್ಘಾಟನೆ

ಲೋಕದರ್ಶನ ವರದಿ

ವಿಜಯಪುರ 08:(ಎಸ್ಎಚ್ಡಿ) ಸ್ನೇಹ ಹೃದಯ ದೀವಿಗೆ ಮೈಸೂರಿನ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಶೃತಿ ಯವರ ನಿಮರ್ಿಸಿದ ಸಂಘ ಇಂದು ನಗರದ ಅನಾಥಶ್ರಮದಲ್ಲಿ ಎಚ್. ಪ್ರಸನ್ನ ಅವರು ಉದ್ಘಾಟಿಸಿದರು. ಈ ಸಂಘವು ವಾಟ್ಸ್ಆ್ಯಫ್ ಗ್ರುಪ್ ಮಾಡಿ ಅದರಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ವಾರಕ್ಕೊಮ್ಮೆ ಅವರಲ್ಲಿ ಉಳಿದಿರುವ ಹಣವನ್ನು ಕೂಡಿ ಹಾಕಿ ಅನಾಥಾಶ್ರಮಕ್ಕೆ ಹಾಗೂ ಬಡ ಕುಟುಂಬಕ್ಕೆ ಹಾಗೂ ಕಷ್ಟದಲ್ಲಿವರಿಗೆ ಸಹಾಯ ಮಾಡುತ್ತಾ ಬಂದಿದೆ. ಈ ಗ್ರೂಫ್ ಹಲವು ಜಿಲ್ಲೆಗಳಲ್ಲಿ ಹುಟ್ಟಿಕೊಂಡು ಸೇವೆ ಮಾಡುವುದರಲ್ಲಿ ನಿರತವಾಗಿದೆ. ಇದೇ ರೀತಿಯಾಗಿ ಸಮಾಜಸೇವೆಯಲ್ಲಿ ಒಳ್ಳೆಯ ಛಾಪು ಮೂಡಿಸಲಿ ಅಪರ ಜಿಲ್ಲಾಧಿಕಾರಿ ಎಚ್. ಪ್ರಸನ್ ಅವರು ಶುಭ ಹಾರೈಸಿದರು.

ಸಾಮಾಜಿಕ ಜಾಲತಾಣಗಳನ್ನು ನೋಡಿದರೆ ಪ್ರಜ್ಞಾವಂತರಿಗೆ ಬೇಡಪ್ಪ ಬೇಡ ಇದರ ಸಹವಾಸ ಎನ್ನುವಷ್ಟರ ಮಟ್ಟಿಗೆ ಆಗಿದೆ. ಫೇಸ್ಬುಕ್, ವಾಟ್ಸ್ಆ್ಯಫ್ ಗ್ರೂಫ್ಗಳಲ್ಲಿ ಹರಿದಾಡುತ್ತಿರುವ ಸಂದೇಹಗಳು, ಚಿತ್ರಗಳು, ವಿಡಿಯೋಗಳನ್ನು ನೊಡಿದವರು ದಾರಿ ತಪ್ಪುವುದೇ ಹೆಚ್ಚು ಇಂತಹ ಪರಿಸ್ಥಿತಿಯುಲ್ಲಿ ಒಂದು ವಾಟ್ಸ್ಆ್ಯಫ್ ಗ್ರೂಪ್ ಮಾನವೀಯ ಮೌಲ್ಯಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡುತ್ತಿದ್ದು, ಇತರರಿಗೆ ಮಾದರಿಯಾಗಿದೆ. 

ಸಮಾನ ಮನಸ್ಕ ಸದಸ್ಯರಿದ್ದಾರೆ. ಈ ರೂಫ್ನ 165 ಸದಸ್ಯರು ನಿರಂತರವಾಗಿ ಸಮಾಜಸೇವೆ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಾ ಬಂದಿದ್ದಾರೆ.

ಈ ಗ್ರೂಪ್ನಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ಇಲಾಖೆಯವರೇ ಹೆಚ್ಚಿನವರಿದ್ದಾರೆ. ಪ್ರತಿ ಸದಸ್ಯನೂ ಆಯಾ ಜಿಲ್ಲೆ ವ್ಯಾಪ್ತಿಯಲ್ಲಿ ಪರಿಸರ, ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಜತೆಗೆ ಮನುಷ್ಯ ಮನುಷ್ಯರ ನಡುವೆ ಸಂಬಂಧ ಬೆಸೆಯುವ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ. 

ವಿಜಯಪುರದ ವೃದ್ಧಾಶ್ರಮದ ಅನಾಥರಿಗೆ ಬಟ್ಟೆ ಹಾಸಿಗೆ ವಿತರಣೆ ಅಲ್ಲದೇ ನಿಮ್ಮೊಂದಿಗೆ ನಾವಿದ್ದೇವೆ, ನೀವು ಅನಾಥರಲ್ಲ ಎಂದು ಸ್ಪೂತರ್ಿ ತುಂಬುವ ಎಚ್. ಪ್ರಸನ್ ಅವರು ಹೇಳಿದರು. ಎಸ್ಎಚ್ಡಿ ವಾಟ್ಸ್ಯಆ್ಯಫ್ ಗ್ರೂಫ್ನಿಂದ ನಿರಂತರ ಸಮಾಜ ಸೇವೆ ಕಾರ್ಯ ನಡೆಸಲಾಗುತ್ತಿದೆ. 

ಈ ಸಂದರ್ಭದಲ್ಲಿ ಚಂದ್ರಶೇಖರ ಉಕ್ಕೂರ ಗ್ರಾಮ ಲೆಕ್ಕಾಧೀಕಾರಿ ಸಂಘ, ಉಪಾಧ್ಯಕ್ಷರು, ಆರ್.ಬಿ. ಬಡಿಗೇರ, ಅಧ್ಯಕ್ಷರು ಜಿಲ್ಲಾ. ಗ್ರಾ. ಲೆಕ್ಕಾಧಿಕಾರಿ ಸಂಘ, ಸಂತೋಷ ಲೋಕೂರೆ ಪ್ರಧಾನ ಕಾರ್ಯದಶರ್ಿ, ರಾಜಪುರ, ಉಪಸ್ಥಿತರಿದ್ದರು.