ಕೊಪ್ಪಳ 20: ಕೊಪ್ಪಳ ಭತ್ತದ ನಾಡು ಎಂದೇ ಹೆಸರಾದ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಣಬೆ ಬೆಳೆಯಲು ಮುಂದಾಗಿದ್ದಾರೆ ವಾಣಿಶ್ರೀ. ಅಣಬೆ ಕ್ಷೇತ್ರದಲ್ಲಿ ಸಾಧನೆಗೈಯುತ್ತಿರುವ ಕೊಪ್ಪಳ ಜಿಲ್ಲೆಯ ರೈತ ಮಹಿಳೆ ಇವರಾಗಿದ್ದಾರೆ.
ಜಿಲ್ಲೆಯ ಗಂಗಾವತಿಯ ವಾಣಿಶ್ರೀರವರು ಅಣಬೆ ಬಗ್ಗೆ ಪತ್ರಿಕೆ ಹಾಗೂ ಟಿವಿಗಳಲ್ಲಿ ನೋಡಿ ಲೋಟಗಾರಿಕೆ ಇಲಾಖೆಗೆ ಸಂಪಕರ್ಿಸಿದ್ದಾರೆ. ಅಲ್ಲಿಂದ ಕೊಪ್ಪಳ ತಾಲೂಕಿನ ಹುಲಿಗಿ ಗ್ರಾಮದಲ್ಲಿ ಅಣಬೆ ಬೇಸಾಯ ಮಾಡುತ್ತಿರುವ ಕೃಷಿಕರ ಬಳಿ ತೆರಳಿ ಈ ಕುರಿತು ತರಬೇತಿಯನ್ನು ಪಡೆದು ಮತ್ತು ಇದಕ್ಕೆ ಇಲಾಖೆಯ ಸಹಾಯಧನ ಸೌಲಭ್ಯ ಇರುವ ಬಗ್ಗೆಯೂ ಸಹ ಮಾಹಿತಿ ಪಡೆದು ಅಣಬೆ ಬೆಳೆಯಲು ಮುಂದಾಗಿದ್ದಾರೆ. ವಾಣಿಶ್ರೀರವರಿಗೆ ಅವರ ಪತಿ ಎಂ.ವಿ. ವಿರೇಶರವರು ಸಹ ಸಾತು ನೀಡಿದ್ದಾರೆ.
ಇಂದಿನ ದಿನಮಾನಗಳಲ್ಲಿ ವಿಷಕಾರಿ ಆಹಾರವನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಕೆಲಸದ ಒತ್ತಡ, ಜಂಕ್ ಆಹಾರ ಸೇವನೆ ಮತ್ತು ರಾಸಾಯನಿಕ ಬಳಸಿದ ಆಹಾರ ಸೇವನೆಯಿಂದಾಗಿ, ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ರೋಗಗಳಲ್ಲದೇ ಇನ್ನೂ ಅನೇಕ ಆರೋಗ್ಯ ಸಮಸ್ಯೆಗಳು ಜನರನ್ನು ಬಾಧಿಸುತ್ತವೆ. ಸಂಧಿ ವಾತಗಳಂತಹ ವ್ಯಾಧಿಗಳು ಮಧ್ಯ ವಯಸ್ಕ ಸ್ತ್ರೀಯರಲ್ಲಿ ಹಾಗೂ ವಯಸ್ಸಾದ ಎಲ್ಲರಲ್ಲೂ ಕಾಣಿಸುತ್ತಿರುವುದು ನಮ್ಮ ಆಹಾರ ಪದ್ದತಿಯಲ್ಲಿನ ನ್ಯೂನತಯೇ ಕಾರಣವಾಗಿದೆ. ಇಂದಿನ ದಿನಗಳಲ್ಲಿ ರಾಸಾಯನಿಕ ಮುಕ್ತ ಹಾಗೂ ವಿಷಮುಕ್ತ ಆಹಾರದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಕೈತೋಟ, ತಾರಸಿ ತೋಟ ಹಾಗೂ ಸಾವಯವ ತೋಟಗಾರಿಕೆ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಾವು ಮೇಳದಂತಹ ಕಾರ್ಯಕ್ರಮಗಳಲ್ಲಿ ನೈಸಗರ್ಿಕವಾಗಿ ಹಣ್ಣು ಮಾಗಿಸುವ ಬಗ್ಗೆ ರೈತರಿಗೆ ಮತ್ತು ಗ್ರಾಹಕರಿಗೆ ಒತ್ತು ಕೊಟ್ಟು ಜಾಗ್ರತೆ ಮೂಡಿಸಲಾಗುತ್ತಿದೆ.
ತೋಟಗಾರಿಕೆ ಎಂದರೆ ವೈವಿಧ್ಯಮಯ ಬೆಳೆಗಳು ಉದಾಹರಣೆಗೆ ಹಣ್ಣು, ತರಕಾರಿ, ಪುಷ್ಪ, ಸಾಂಬಾರು ಪದಾರ್ಥಗಳು ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದರ ಜೊತೆಗೆ ವಿಶಿಷ್ಟವಾದ ಮತ್ತು ರಾಸಾಯನಿಕ ಸಂಪರ್ಕವೇ ಇಲ್ಲದೇ ಮಾಡುವ ಕೃಷಿ ಎಂದರೆ "ಅಣಬೆ ಕೃಷಿ". ಅಣಬೆ ಕೂಡಾ ತೋಟಗಾರಿಕೆ ವ್ಯಾಪ್ತಿಗೆ ಬರುವ ಅನೇಕ ಪೋಷಕಾಂಶಗಳು, ವಿಟಮಿನ್ಗಳನ್ನು ಉದಾರಣೆಗೆ ವಿಟಮಿನ್ "ಬಿ", ವಿಟಮಿನ್ "ಡಿ" ಮುಂತಾದ ಆನೇಕ ವಿಟಮಿನ್ಗಳು ಮತ್ತು ಖನಿಜಗಲ್ಲದೆ ಕ್ಯಾಲ್ಸಿಯಮ್, ಪೊಟ್ಯಾಶಿಮ್ ನಂತಹ ಆನೇಕ ಆರೋಗ್ಯಕಾರಿ ಪೋಷ್ಟಿಕಾಂಶಗಳನ್ನು ಹೊಂದಿದ ಒಂದು ಶಿಲೀಂದ್ರವಾಗಿದೆ. ವಿಶೇಷವಾಗಿ ಕಬ್ಬಿಣ ಹಾಗೂ ವಿಟಮಿನ್ 'ಡಿ' ಜೀವಸತ್ವವನ್ನು ಹೊಂದಿದ ಅಣಬೆ ಮಕ್ಕಳು ಹಾಗೂ ಮಹಿಳೆಯರಿಗೆ ಅತ್ಯಂತ ಪೌಷ್ಟಿಕ ಆಹಾರ ಅದರಲ್ಲೂ ಗಭರ್ಿಣಿಯರಿಗೆ ಹಾಗೂ ಬಾಣಂತಿಯರಿಗೆ ಅವಶ್ಯಕವಾಗಿದೆ. ಅಷ್ಟೇ ಅಲ್ಲದೆ ಮಾಂಸಹಾರಕ್ಕೆ ಪಯರ್ಾಯ ಆಹಾರ. ಇತ್ತೀಚಿನ ದಿನಗಳಲ್ಲಿ ಮಾಂಸಹಾರ ಸೇವನೆಯಿಂದ ಅನೇಕ ವ್ಯಾಧಿಗಳು ಉಂಟಾಗುತ್ತಿವೆ. ಇದನ್ನು ತಡೆಗಟ್ಟಲು ಅಣಬೆ ಪಯರ್ಾಯ ಆಹಾರ ಪದ್ಧತಿಯಾಗಿದೆ.
ತೋಟಗಾರಿಕೆ ಇಲಾಖೆಯಿಂದ 2017-18 ರಲ್ಲಿ ಅಣಬೆ ಬೇಸಾಯಕ್ಕೆ ವ್ಯಾಪಕ ಪ್ರಚಾರ ನೀಡಲಾಯಿತು. ಜಿಲ್ಲೆಯ ನಾಲ್ಕೂ ತಾಲೂಕಗಳಲ್ಲಿ 1000ಕ್ಕೂ ಹೆಚ್ಚು ಮಹಿಳೆ ಮತ್ತು ಪುರುಷರಿಗೆ ಇಲಾಖಾ ಅಧಿಕಾರಿಗಳಿಂದ ಹಾಗೂ ತಜ್ಞರಿಂದ ತರಬೇತಿ ನೀಡಲಾಯಿತು. ಒಂದು ಅಭಿಯಾನವೇ ಹಮ್ಮಿಕೊಳ್ಳಲಾಗಿತ್ತು. ಇದರ ಪರಿಣಾಮವೇ ಈಗ ಜಿಲ್ಲೆಯಾದ್ಯಂತ ಅನೇಕ ರೈತರು, ರೈತ ಮಹಿಳೆಯರು ಅಣಬೆ ಬೇಸಾಯ ಮಾಡಲು ಆಸಕ್ತಿ ತೋರುತ್ತಿದ್ದಾರೆ. ಗಂಗಾವತಿ ತಾಲೂಕಿನಲ್ಲಿ ಈಗಾಗಲೇ 5 ರಿಂದ 6 ರೈತರು ಹಾಗೂ ರೈತ ಮಹಿಳೆ ಅಣಬೆ ಕೃಷಿ ಮಾಡುತ್ತಿದ್ದಾರೆ. ಇವರಲ್ಲಿ ವಾಣಿಶ್ರೀ ಎಮ್.ವಿ. ಅವರು ಕಳೇದ 8 ತಿಂಗಳಿನಿಂದ ಅಣಬೆ ಕೃಷಿಯನ್ನು ಮಾಡುತ್ತಿದ್ದು, ಲಾಭದತ್ತ ಮುಖ ಮಾಡಿದ್ದಾರಲ್ಲದೇ ಹೆಚ್ಚಿನ ಆಸಕ್ತಿವುಳ್ಳವರಾಗಿದ್ದಾರೆ. ತಮ್ಮ ಒಂದು ಎಕರೆ ಜಮೀನಿನಲ್ಲಿ 60*40 ಜಾಗದಲ್ಲಿ ಅಣಬೆ ಕೃಷಿಗೆ ಬೇಕಾಗುವ ಕತ್ತಲೆ ಕೋಣೆ, ಬೆಳಕಿನ ಕೋಣೆ, ನೀರಿನ ತೊಟ್ಟಿಗಳನ್ನು ನಿರ್ಮಿಸಿ ತಾಪಮಾನ ಕಾಪಾಡುವಂತೆ ಹಸಿರು ನೆರಳು ಪರದೆ, ಮುಂತಾದವುಗಳನ್ನು ನಿಮರ್ಿಸಿ ರೂ. 3 ಲಕ್ಷ ರೂ.ಗಳನ್ನು ಖಚರ್ು ಮಾಡಿದ್ದಾರೆ. ಕಳೆದ ನವೆಂಬರ್ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 800-1000 ಕೆ.ಜಿ. ಯಷ್ಟು ಆಯಿಸ್ಟರ್ ಅಣಬೆಯನ್ನು ರೂ. 300 ಪ್ರತಿ ಕೆ.ಜಿ. ಯಂತೆ ಮಾರಾಟ ಮಾಡಿರುತ್ತಾರೆ.
ಅಣಬೆ ಬೆಳೆಗಾರರಿಂದಲೇ 3 ದಿನಗಳ ಕಾಲ ಸತತ ತರಬೇತಿ ಪಡೆದ ವಾಣಿಶ್ರೀ ರವರು ತಾವೇ ಸ್ವತಃ ಅಣಬೆ ಬೆಳೆದು ಒಬ್ಬ ಮಾದರಿ ಮಹಿಳೆಯರಾಗಿದ್ದಾರೆ. ಇವರ ಪತಿ ವಿರೇಶರವರು ಮಾರುಕಟ್ಟೆ ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಗಂಗಾವತಿ ಹೊಸಪೇಟೆ ಹೋಟೆಲ್ಗಳಿಗೆ, ಸ್ನೇಹಿತರಿಗೆ ಹಾಗೂ ಪರಿಚಯಸ್ತರಿಗೆ ಅಣಬೆ ರುಚಿ ತೋರಿಸುತ್ತಿರುವ ವಿರೇಶ ರವರು ಮುಂದಿನ ದಿನಮಾನಗಳಲ್ಲಿ ಆಧುನಿಕ ಪದ್ಧತಿಯ ಮೂಲಕ ಗುಣಮಟ್ಟದ ಉತ್ಪಾದನೆ ಮಾಡುವುದು, ಮೌಲ್ಯವರ್ಧನೆ ಮತ್ತು ವಿವಿಧ ಖಾದ್ಯಗಳನ್ನು ತಯಾರಿಸಿ ಪ್ಯಾಕಿಂಗ್ ಮಾಡುವುದಲ್ಲದೇ ಅಣಬೆ ಪುಡಿ ಮಾಡಿ ಮಾರುವ ಉದ್ದೇಶ ಇಟ್ಟುಕೊಂಡಿದ್ದಾರೆ. "ಇವರೆಲ್ಲ ಈ ಗುರಿ ಈಡೇರಿ ಕೊಪ್ಪಳ ಜಿಲ್ಲೆಗೊಬ್ಬ ಮಾದರಿ ಅಣಬೆ ಬೆಳೆಗಾರರಾಗಲಿ ಅವರಿಗೆ ನಮ್ಮ ಇಲಾಖೆಯಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು" ಎನ್ನುತ್ತಾರೆ ಗಂಗಾವತಿ ಹಿರಿಯ ಸಹಾಯಕ ತೋಟಗಾರಿಕೆ ನಿದರ್ೇಶಕ ಶಿವಯೋಗಪ್ಪರವರು.
"ಒಟ್ಟಾರೆ ಐದು ಜನ ಅಣಬೆ ಬೆಳೆಯಲು ಮುಂದಾಗಿದ್ದು ಅದರಲ್ಲಿ ವಾಣಿಶ್ರೀ ತುಂಬಾ ಆಸಕ್ತಿ ಹೊಂದಿ ಎಲ್ಲಾ ತರಬೇತಿ ಪಡೆದು ಈಗಾಗಲೇ ಅಣಬೆ ಲಾಭದಾಯಕ ಉತ್ಪಾದನೆ ಮಾಡುತ್ತಿದ್ದಾರೆ", ಎನ್ನುತ್ತಾರೆ ಗಂಗಾವತಿ ಸಹಾಯಕ ತೋಟಗಾರಿಕೆ ಅಧಿಕಾರಿ ಅಜರುದ್ದೀನ್ ಗುಳೇದಗುಡ್ಡ.
ತೋಟಗಾರಿಕೆ ಇಲಾಖೆಯ "ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ರೈತರಿಗೆ, ರೈತ ಮಹಿಳೆಯರಿಗೆ ಹಾಗೂ ನಿರುದ್ಯೋಗಿ ಯುವಕ ಯವತಿಯರಿಗೆ ಸ್ವಾವಲಂಬನೆ ಜೀವನ ನಡೆಸಲು ತರಬೇತಿ ನೀಡಿ ಅಣಬೆ ಉತ್ಪಾದಕ ಘಟಕ ಸ್ಥಾಪಿಸಿಕೊಳ್ಳಲು ಶೇಕಡ 50 ರಷ್ಟು ಸಹಾಯಧನ ನೀಡಲಾಗುತ್ತದೆ. ಈ ಮೂಲಕ ಯುವಜನಾಂಗದಲ್ಲಿ ಕೌಶಲ್ಯಭಿವೃದ್ಧಿ ಮೂಲಕ ಸ್ವಾವಲಂಬನೆ ಜೀವನ ನಡೆಸಲು ಉತ್ತಮ ಆವಕಾಶ ಕಲ್ಪಿಸಿಕೊಡಲಾಗುತ್ತದೆ. ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬಂದು ತರಬೇತಿ ಪಡೆದು ಲಾಭದಾಯಕ ಉದ್ಯಮವಾದ ಅಣಬೆ ಬೇಸಾಯ ಮಾಡಲು ಕೊಪ್ಪಳ ತೋಟಗಾರಿಕೆ ಇಲಾಖೆ ಉಪನಿದರ್ೇಶಕ ಕೃಷ್ಣ ಸಿ. ಉಕ್ಕುಂದರವರು ಕರೆ ನೀಡಿದ್ದಾರೆ.
"ತಮ್ಮದೇ ಆದ ಅಣಬೆ ಬೆಳೆಗಾರರ ಗುಂಪು ಕಟ್ಟಿಕೊಂಡು ಮಾರುಕಟ್ಟೆ ಹಿಡಿಯಬೇಕು ಮತ್ತು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ಕೊಟ್ಟಲ್ಲಿ ಹೆಚ್ಚಿನ ಲಾಭ ದೊರೆಯುತ್ತದೆ", ಎನ್ನುತ್ತಾರೆ ತೋಟಗಾರಿಕೆ ವಿಷಯ ತಜ್ಞ ವಾಮನಮೂತರ್ಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ವಾಣಿಶ್ರೀ ಮೊ.ಸಂ. 9663030509, ವಿರೇಶ ಮೊ.ಸಂ. 8904959995, ಗಂಗಾವತಿ ಸಹಾಯಕ ತೋಟಗಾರಿಕೆ ಅಧಿಕಾರಿ ಅಜರುದ್ದೀನ್ ಗುಳೇದಗುಡ್ಡ ಮೊ.ಸಂ. 8867729889, ಇವರನ್ನು ಸಂಪಕರ್ಿಸಬಹುದು.