ಸಂಜೆ 5 ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ... ಶಬರಿಮಲೆಯಲ್ಲಿ ಪೊಲೀಸ್​ ಸರ್ಪಗಾವಲು

ನಿಲಾಕಲ್ 17: ಶಬರಿಮಲೆಯಲ್ಲಿ ಸದ್ಯದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡಂದಾತಾಗಿದೆ. ಒಂದೆಡೆ ಸುಪ್ರೀಂಕೋರ್ಟ್​ ಬ್ರಹ್ಮಾಸ್ತ್ರ ಹಿಡಿದು ಅಯ್ಯಪ್ಪನ ದೇಗುಲ ಪ್ರವೇಶಿಸುವ ತವಕದಲ್ಲಿ ಮಹಿಳಾ ಭಕ್ತರಿದ್ದರೆ, ಮತ್ತೊಂದೆಡೆ ಶತಮಾನಗಳ ಪದ್ಧತಿಯನ್ನು ಮುರಿಯಲು ಬಿಡೆವು ಎಂದು ಮತ್ತೊಂದು ಭಕ್ತರ ಗುಂಪು ಸನ್ನದ್ಧವಾಗಿ ನಿಂತಿವೆ.

ಪರಿಸ್ಥಿತಿ ಸೂಕ್ಷ್ಮತೆ ಅರಿತಿರುವ ಕೇರಳ ಸರ್ಕಾರ ದೇಗುಲದಿಂದ ಸುಮಾರು 20 ಕಿ.ಮೀ ದೂರದವರೆಗೂ ಪೊಲೀಸ್​ ಸರ್ಪಗಾವಲನ್ನು ಏರ್ಪಡಿಸಿದೆ. 1000 ಭದ್ರತಾ ಸಿಬ್ಬಂದಿ, 800 ಪುರುಷ ಹಾಗೂ 200 ಮಹಿಳಾ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. 500 ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನೂ ನಿಯುಕ್ತಿಗೊಳಿಸಲಾಗಿದೆ. ಸದ್ಯ ಗಲಭೆಗೆ ಮುಂದಾಗಿದ್ದ 16 ಮಂದಿ ಅಯ್ಯಪ್ಪನ ಭಕ್ತರನ್ನು ಪೊಲೀಸರು ಬಂಧಿಸಿದ್ದಾಗಿ ತಿಳಿದುಬಂದಿದೆ.
ಶತಮಾನಗಳ ಸಂಪ್ರದಾಯ ಮುರಿದು ಅಯ್ಯಪ್ಪನ ದರ್ಶನ ಪಡೆಯಲು ತುದುಗಾಲಲ್ಲಿ ನಿಂತಿರುವ ಮಹಿಳಾ ಭಕ್ತರಿಗೆ ಸಂಜೆ 5 ಗಂಟೆಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಎರಡೂ ಭಕ್ತರ ಗುಂಪುಗಳು ಅಯ್ಯಪ್ಪನ ಸನ್ನಧಿ ಬಳಿ ಬೀಡುಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ. 


ವಿಶೇಷ ಸೌಲಭ್ಯವಿಲ್ಲ:

ತ್ರಿವಾಂಕೂರ್​ ದೆವಾಸ್ಥಾನ್​ ಬೋರ್ಡ್​ ಭಕ್ತೆಯರಿಗೆ ವಿಶೇಷ ಸೌಲಭ್ಯ ನೀಡಲು ನಿರಾಕರಿಸಿದೆ. ಆದರೆ ಸುಪ್ರೀಂ ತೀರ್ಪನ್ನು ಪಾಲಿಸುವುದಾಗಿ ಹೇಳಿದೆ.