ರಾಯಬಾಗ 15: ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2025-26 ರಿಂದ 2029-30 ಸಾಲಿನ ಆಡಳಿತ ಮಂಡಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಜಿನೇಶ್ವರ ಮಗದುಮ್ಮ ಹಾಗೂ ಉಪಾಧ್ಯಕ್ಷರಾಗಿ ಸೈಯ್ಯಾಜಿ ದೇಸಾಯಿ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಅಧಿಕಾರಿಯಾಗಿ ಗೋವಿಂದಗೌಡ ಪಾಟೀಲ ಕಾರ್ಯನಿರ್ವಹಿಸಿದರು. ಆಡಳಿತ ಮಂಡಳಿಯ ನಿರ್ದೇಶಕರಾದ ಅಜೀತ ಕಾಮಗೌಡ, ಮಹಾದೇವ ಮಂಗಸೂಳೆ, ಕುಮಾರ ಕಾಮಗೌಡ, ಸಿರಾಜ ತರಾಳ, ಚಂದ್ರಕಾಂತ ಉಮರಾಣಿ, ಕಲ್ಲಪ್ಪ ಖೋತ, ತ್ರಿಶಲಾ ಜನಾಜ, ಸುಗಂಧಾ ಚೌಗಲಾ, ಶ್ರೀಪತಿ ಕಾಂಬಳೆ, ಅಜೀತ ನಾಯಿಕ ಹಾಗೂ ಹಿರಿಯ ಮುಖಂಡರಾದ ಈರಗೌಡ ಪಾಟೀಲ, ಅಣ್ಣಾಸಾಹೇಬ ಕೂಗೆ, ಕಾಕಾಸಾಬ ತಡಾಕೆ ಉಪಸ್ಥಿತರಿದ್ದರು.