ವಿಚಾರದಲ್ಲಿ ಉದಾರತೆ, ಕೃತಿಯಲ್ಲಿ ಮಾನವೀಯತೆ ಇರಲಿ: ರಂಜನಾ

ಲೋಕದರ್ಶನವರದಿ

ಧಾರವಾಡ : ವಿಚಾರದಲ್ಲಿ ಉದಾರತೆ, ಕೃತಿಯಲ್ಲಿ ಮಾನವೀಯತೆ ಉಳ್ಳವರು ಮಾತ್ರ ಸಮಾಜದ ದೃಷ್ಟಿಯಲ್ಲಿ ದೊಡ್ಡವರಾಗುತ್ತಾರೆ ಎಂದು ಹಿರಿಯ ಸಾಹಿತಿ ರಂಜನಾ ನಾಯಕ ಅಭಿಪ್ರಾಯಪಟ್ಟರು. ನಗರದ ಕನರ್ಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಕೀತರ್ಿಶೇಷ ಪ್ರಹ್ಲಾದ ನರೇಗಲ್ ಮಾಸ್ತರ ದತ್ತಿ ಹಾಗೂ ಗುರುದೇವ ರವೀಂದ್ರನಾಥ ಠಾಕೂರರ 158 ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಮಾತನಾಡುತ್ತಿದ್ದರು.

ಪ್ರಹ್ಲಾದ ನರೇಗಲ್ ಮಾಸ್ತರರನ್ನು ನಾವೆಲ್ಲ ಪ್ರಲ್ಹಾದ ಕಾಕಾ ಎಂದೇ ಕರೆಯುತ್ತಿದ್ದೆವು, ಅವರು ಎಲ್ಲರನ್ನೂ ಪ್ರೀತಿಸುವ ಹಾಗೂ ಪರರ ಏಳ್ಗೆಯ ಬಗ್ಗೆ ಚಿಂತಿಸುವ ವ್ಯಕ್ತಿಗಳಾಗಿದ್ದರು. 

      ಪ್ರಹ್ಲಾದ ಕಾಕಾರು ಕವಿ ರವೀಂದ್ರನಾಥ ಠಾಕೂರರು ಸ್ಥಾಪಿಸಿದ ವಿಶ್ವಭಾರತಿ ವಿದ್ಯಾಸಂಸ್ಥೆಯಿಂದ ಬಿ. ಎ. ಪಾಸ್ ಮಾಡಿಕೊಂಡು ಅವರ ಪರಮಶಿಷ್ಯರಾಗಿ ಕವಿ ರವೀಂದ್ರನಾಥರ ವಿಶ್ವಮಾನವ ದೃಷ್ಟಿ ಹೊಂದಿದ್ದರು. 

       ಬಂಗಾಲಿ ಹಾಗೂ ಇಂಗ್ಲೀಷ ಭಾಷೆಯಲ್ಲಿ ಪರಿಣತಿ ಹೊಂದಿದ್ದ ಅವರು ಬಂಗಾಲಿ ನೆಲದಲ್ಲಿ ಕನ್ನಡದ ಛಾಪು ಮೂಡಿಸಿ, ಕನ್ನಡದ ಕಂಪು ಸೂಸುವಂತೆ ಮಾಡಿದ್ದರು. ಶಾಂತಿನಿಕೇತನದ ವಿಶ್ವಭಾರತಿಯಲ್ಲಿ ಕನರ್ಾಟಕ ಕುಂವೆ ಎಂಬುದು ಈಗಲೂ ಪ್ರಸಿದ್ಧಿ ಇರುವುದನ್ನು  ಕಾಣಬಹುದು ಎಂದರು. ಹಿರಿಯ ಸಾಹಿತಿ ಶ್ಯಾಮಸುಂದರ ಬಿದರಕುಂದಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ನಾಡು-ನುಡಿಯ ಸೇವಕರಾದ ಪ್ರಲ್ಹಾದ ಮಾಸ್ತರ ಆದರ್ಶ ಶಿಕ್ಷಕರಾಗಿ, ವೃತ್ತಿಧರ್ಮವನ್ನು ಕಾಪಾಡಿಕೊಂಡು ಬಂದವರಾಗಿದ್ದರು ಎಂದು ಹೇಳಿದರು. 

         ರವೀಂದ್ರನಾಥ ಠಾಕೂರರ ಶಿಷ್ಯತ್ವ ಸ್ವೀಕರಿಸಿದ ಪ್ರಲ್ಹಾದ ನರೇಗಲ್ಲ ಗುರುಗಳ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಗೌರವ ಸಲ್ಲಿಸಲಾಯಿತು. ಹಿರಿಯ ಸಾಹಿತಿ ದಮಯಂತಿ ನರೇಗಲ್ಲ, ಕವಿ ರವೀಂದ್ರನಾಥ ಠಾಕೂರರ ಗೀತಾಂಜಲಿಯ ಕನ್ನಡ ಅನುವಾದದ ಆಯ್ದ ಭಾಗಗಳನ್ನು ವಾಚಿಸಿದರು. 

         ಪ್ರಧಾನ ಕಾರ್ಯದಶರ್ಿ ಪ್ರಕಾಶ ಎಸ್. ಉಡಿಕೇರಿ ಸ್ವಾಗತಿಸಿದರು. ಉಪನ್ಯಾಸಕ ವೀರಣ್ಣ ಒಡ್ಡೀನ ನಿರೂಪಿಸಿದರು. 

    ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮೇ ತಿಂಗಳ ದತ್ತಿ ಕಾರ್ಯಕ್ರಮಗಳ ಸಂಚಾಲಕರಾದ ಶಂಕರ ಕುಂಬಿ ಅತಿಥಿಗಳನ್ನು ಗೌರವಿಸಿದರು.  ಸಹಕಾರ್ಯದಶರ್ಿ ಸದಾನಂದ ಶಿವಳ್ಳಿ ವಂದಿಸಿದರು. 

          ಕಾರ್ಯಕ್ರಮದಲ್ಲಿ ಎನ್. ಪಿ. ಭಟ್, ಡಾ. ವೀಣಾ ನರೇಗಲ್ಲ, ಡಾ. ಅರವಿಂದ ಯಾಳಗಿ, ಪ್ರಕಾಶ ಮುಳಗುಂದ, ಲಾರೆನ್ಸ್ ಝಳಕಿ, ಬಿ. ಎಸ್. ಶಿರೋಳ, ಎಚ್. ಡಿ. ನದಾಫ, ಮಹಾಂತೇಶ ನರೇಗಲ್ಲ, ಚನಬಸಪ್ಪ ಅವರಾದಿ ಮತ್ತು ನರೇಗಲ್ಲ ಕುಟುಂಬದವರು ಅವರ ಶಿಷ್ಯರು ಸೇರಿದಂತೆ ಅನೇಕರು ಭಾಗವಹಿಸಿದ್ದರು.