ತಾಲೂಕಿನ ಕುಂಚನೂರ ಗ್ರಾಮದಲ್ಲಿ ಹಸು, ಕರು,ನಾಯಿಗಳ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ
ಜಮಖಂಡಿ 05 : ತಾಲೂಕಿನ ಕುಂಚನೂರ ಗ್ರಾಮದಲ್ಲಿ ಹಸು, ಕರು,ನಾಯಿಗಳ ಮೇಲೆ ಚಿರತೆ ದಾಳಿ ಮಾಡಿದ್ದರಿಂದ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.
ಗ್ರಾಮದ ಈರ್ಪ ಎಂಬುವರ ಹಸು,ಕರುಗಳ ಮೇಲೆ ದಾಳಿ ಮಾಡಿದ್ದರಿಂದ ಗಾಯಗೊಂಡಿವೆ.ಚಿರತೆ ಭಯಕ್ಕೆ ಬೆಚ್ಚಿಬಿದ್ದ ಅನ್ನದಾತರು. ಗುಡ್ಡಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮದ ಜಮೀನಗಳಲ್ಲಿನ ರೈತರಲ್ಲಿ ಆತಂಕ ಮನೆ ಮಾಡಿದೆ. ಹಸು, ಕರುಗಳು ಸೇರಿದಂತೆ ನಾಯಿ ಮೇಲೆ ದಾಳಿ ಮಾಡಿರುವ ಚಿರತೆಯನ್ನು ಸೆರೆಹಿಡಿಯುವಂತೆ ರೈತರು ಒತ್ತಾಯಿಸಿದ್ದಾರೆ.ಚಿರತೆ ದಾಳಿಗೈದ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ. ಚಿರತೆ ಸೆರೆ ಕಾರ್ಯಾಚರಣೆ ಹಾಗೂ ಚಿರತೆ ಹೆಜ್ಜೆ ಗುರುತು ಆಧರಿಸಿ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ಕ್ಯಾಮೆರಾ, ಬೋನು ಹಾಕಿ ಕಾರ್ಯಚರಣೆ ನೆಡೆಸುತ್ತಿದ್ದು. ಅಲ್ಲಿಂದ ಪಕ್ಕದ ಗ್ರಾಮವಾದ ಕುಂಬರಹಳ್ಳದ ಹೊಲದಲ್ಲಿ ಕಾಣಿಸಿಕೊಂಡಿದೆಮದು ಗ್ರಾಮಸ್ಥರು ಮಾಹಿತಿಯನ್ನು ನೀಡಿದ್ದಾರೆ.