ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಿಸುವುದು ಮುಖ್ಯ : ಯೋಗಾನಂದ

In sports, winning or losing is not important, competing is important: Yogananda

ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಿಸುವುದು ಮುಖ್ಯ : ಯೋಗಾನಂದ

ಕೊಪ್ಪಳ 14: ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ ಸ್ಪರ್ಧಿಸುವುದು ಮುಖ್ಯ ಎಂದು ಬಹದ್ದೂರ್ ಬಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಯೋಗಾನಂದ ಹೇಳಿದರು.ಅವರು ತಾಲೂಕಿನ ಚುಕ್ಕನಕಲ್ ಗ್ರಾಮದಲ್ಲಿ ಜಿಸಿಸಿ ಕ್ರಿಕೆಟ್ ಕ್ಲಬ್ ಇವರ ವತಿಯಿಂದ  ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಪ್ರತಿಯೊಂದು ಕ್ರೀಡೆಯು ದೈಹಿಕ ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ, ನಿತ್ಯ ಕ್ರೀಡೆಗಳನ್ನು ಆಡುವುದರ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳುವಂತೆ ತಿಳಿಸಿದರು.  ಪ್ರಥಮ ಬಹುಮಾನವನ್ನು ಲಾಚನಕೇರಿ ತಂಡ ಪಡೆದುಕೊಂಡಿತು.ದ್ವಿತೀಯ ಬಹುಮಾನ ಚಿಕ್ಕನಕಲ್ ಜೆಸಿಸಿ ತಂಡ ಗೆದ್ದುಕೊಂಡಿದೆ.ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ  ಯುವ ಮುಖಂಡ ಫಕ್ರುದ್ದೀನ್ ನದಾಫ್, ಸಿದ್ದನಗೌಡ ಪೊಲೀಸ್ ಪಾಟೀಲ್, ಪ್ರಕಾಶ್, ಹನುಮಂತ ಹರಿಜನ್, ಫಕ್ಕಿರೆಡ್ಡಿ ಮರಿಯಪ್ಪ ಟೂರ್ನಿಯಾ ಆಯೋಜಕರಾಗಿ ಜಿಸಿಸಿ ತಂಡದ ಎಲ್ಲಾ ಆಟಗಾರರು ಪಾಲ್ಗೊಂಡಿದ್ದರು.