ಆಧುನಿಕತೆಗೆ ತಕ್ಕಂತೆ ಬದಲಾಗುತ್ತಿವೆ ಗ್ರಂಥಾಲಯಗಳು

ಧಾರವಾಡ 24: ಆಧುನಿಕ ತಂತ್ರಜ್ಞಾನದ ಸ್ಪರ್ಶದಿಂದ ಇಂದು ಗ್ರಂಥಾಲಯಗಳ ಸ್ವರೂಪ ಬದಲಾಗಿದೆ ಎಂದು ವಿಧಾನ ಪರಿಷತ್ತ ಸದಸ್ಯ ಪ್ರೊ. ಎಸ್.ವಿ. ಸಂಕನೂರ ಅಭಿಪ್ರಾಯಟ್ಟರು. 

ಅವರು ಕನರ್ಾಟಕ ಕಾಲೇಜಿನ ಡಾ. ವಿ.ಕೃ.ಗೋಕಾಕ್ ಕೇಂದ್ರ ಗ್ರಂಥಾಲಯವು ಕೆಸಿಡಿಯ ಬಿಬಿಎ ಸಭಾಂಗಣದಲ್ಲಿ 'ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ ಗ್ರಂಥಾಲಯಗಳ ಮರುದೃಷ್ಟಿಕೋನ' ಎಂಬ ವಿಷಯದ ಕುರಿತು ಆಯೋಜಿಸಿದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಆಧುನಿಕತೆಗೆ ತಕ್ಕಂತೆ ಇಂದು ಗ್ರಂಥಾಲಯಗಳು ಬದಲಾಗುತ್ತಿದ್ದು, ಇಂದು ಮಾಹಿತಿ ಕೇಂದ್ರಗಳಾಗಿವೆ ಎಂದರು. ವ್ಯಕ್ತಿಯ ವ್ಯಕ್ತಿತ್ವ ವಿಕಾಸಕ್ಕಾಗಿ ಜ್ಞಾನ ಅವಶ್ಯಕವಾಗಿದ್ದು, ಇಂದು ಡಿಜಿಟಲ್ ತಂತ್ರಜ್ಞಾನದ ಮೂಲಕ ಅಂಗೈಯಲ್ಲಿ ಕಂಪ್ಯೂಟರ್ ಮೊಬೈಲ್ ಮೂಲಕ ಗ್ರಂಥಗಳನ್ನು ಓದುಬಹುದಾಗಿದೆ ಎಂದರು. 

ಎಲ್ಲ ಪದವಿ ಮತ್ತು ಪಿಯುಸಿ ಕಾಲೇಜುಗಳಲ್ಲಿ ಗ್ರಂಥಾಲಯಗಳನ್ನು ಸ್ಥಾಪಿಸಲು ಮತ್ತು ಇರುವ ಗ್ರಂಥಾಲಯಗಳನ್ನು ಮೇಲ್ದರ್ಜಗೆ ಏರಿಸಲು ಮುಂಬರುವ ಬಜೆಟ್ನಲ್ಲಿ ಹಣವನ್ನು ಮೀಸಲು ಇಡಬೇಕು ಎಂದು ರಾಜ್ಯ ಸರಕಾರವನ್ನು ಆಗ್ರಹಿಸಿದ ಅವರು ಪ್ರಸ್ತುತ  ರಾಜ್ಯದಲ್ಲಿ ಒಟ್ಟು 1,998 ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಕೇವಲ 189 ಮಾತ್ರ ಗಂಥಪಾಲಕರು ಮಾತ್ರ ಇದ್ದು ಇದರಿಂದ ಸಾಕಷ್ಟು ತೊಂದರೆಗಳು ಸಮಸ್ಯೆಗಳು ಕಾಲೇಜುಗಳು ಎದುರಿಸುತ್ತಿದ್ದು, ಈ ನಿಟ್ಟನಿಲ್ಲಿ ರಾಜ್ಯ ಸರಕಾರವು ಖಾಲಿ ಇರುವ  ಗ್ರಂಥಪಾಲಕರನ್ನು ನೇಮಕ ಮಾಡಿಕೊಳ್ಳಬೇಕು ಎಂದು ಸರಕಾರವನ್ನು ಆಗ್ರಹಿಸಿದರು.

ಗ್ರಾಮೀಣ ಜನರ ಜ್ಞಾನಾರ್ಜನೆಗಾಗಿ ರಾಜ್ಯದ 6,500 ಗ್ರಾಮ ಪಂಚಾಯತ ಮಟ್ಟದಲ್ಲಿ ಗ್ರಂಥಾಲಯಗಳನ್ನು ಸರಕಾರಗಳು ಪ್ರಾರಂಭಿಸಿದ್ದು, ಇಂತಹ ಗ್ರಂಥಾಲಯಗಳಲ್ಲಿ ಕಳೆದ 30 ವರ್ಷಗಳಿಂದ ತಾತ್ಕಾಲಿಕವಾಗಿ ಗ್ರಂಥಪಾಲಕರು ಕಾರ್ಯನಿರ್ವಹಿಸುತ್ತಿದ್ದು ಅವರ ಸ್ಥಿತಿ ಅತಂತ್ರವಾಗಿದ್ದು, ಅವರನ್ನು ಕೂಡ ಖಾಯಂಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು.

ಕನರ್ಾಟಕ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಮುಖ್ಯಸ್ಥರಾದ ಡಾ. ಬಿ.ಡಿ.ಕುಂಬಾರ ಮಾತನಾಡಿ ಇಂದು ಎಲ್ಲ ಗ್ರಂಥಪಾಲಕರು ಬದಲಾದ ತಂತ್ರಜ್ಞಾನಕ್ಕೆ ಅನುಗುಣವಾಗಿ ಜ್ಞಾನ ವೃದ್ಧಿಸಲು ಇಂತಹ ವಿಚಾರ ಸಂಕಿರಣ ಬಹಳ ಮಹತ್ವ ಪಡೆದುಕೊಂಡಿದೆ ಎಂದ ಅವರು ಇಂದು ರಾಜ್ಯದ ಗ್ರಂಥಾಲಯಗಳ ಸ್ಥಿತಿ ಬಹಳ ಶೋಚನಿಯ ಸ್ಥಿತಿಯಲ್ಲಿದ್ದು, ಗ್ರಂಥಾಲಯಗಳ ಅಭಿವೃದ್ಧಿಗಾಗಿ ಸರಕಾರವು ಗಮನ ಹರಿಸಬೇಕಾಗಿದೆ ಎಂದರು.

ಕವಿವಿಯ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಡಾ. ಎನ್.ಎಮ್ ಜೋಶಿ ಮಾತನಾಡಿ ಇಂದು ಆಧುನಿಕ ತಂತ್ರಜ್ಞಾನ ಎಷ್ಟೇ ಮುಂದೆವರೆದಿದ್ದರೂ ಇಂದು ಗ್ರಂಥಪಾಲಕರ ಸೇವೆ ಬೇಕೆ ಬೇಕು ಮತ್ತು ಇಂದು ಗ್ರಂಥಾಲಯಗಳು ಅನೇಕ ಸಮಸ್ಯೆಗಳ ಗೋಡಾಗಿವೆ ಈ ನಿಟ್ಟಿನಲ್ಲಿ ಸಂಬಂಧಪಟ್ಟ ಇಲಾಖೆಗಳು ಗಮನ ಹರಿಸಬೇಕು ಎಂದರು.

ಕವಿವಿಯ ಕೇಂದ್ರ ಗ್ರಂಥಾಲಯದ ನಿವೃತ್ತ ಗ್ರಂಥಪಾಲಕ ಎಸ್.ಬಿ. ಪಾಟೀಲ ಮಾತನಾಡಿ ಸರಕಾರವು ಕಾಲೇಜುಗಳಲ್ಲಿರುವ ಗ್ರಂಥಾಲಯಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಅವುಗಳಿಗೆ ಉತ್ತಮ ಆಡಳಿತ ನಿರ್ವಹಣೆಗಾಗಿ ಸಿಬ್ಬಂದಿ ಮತ್ತು ಹಣಕಾಸಿನ ನೆರವನ್ನು ನೀಡಬೇಕು ಎಂದರು.

ವಿಧಾನ ಪರಿಷತ್ ಸದಸ್ಯರ ಅನುದಾನದಲ್ಲಿ ಕೆಸಿಡಿ ವಿ.ಕೃ.ಗೋಕಾಕ್ ಗ್ರಂಥಾಲಯದಲ್ಲಿ ಶುದ್ಧ ನೀರಿನ ಘಟಕವನ್ನು ಅಳವಡಿಸಿದ್ದಕ್ಕಾಗಿ ಪ್ರೊ. ಎಸ್,ವಿ.ಸಂಕನೂರ ಅವರನ್ನು ಕೆಸಿಡಿ ಕಲಾ ಮತ್ತು  ವಿಜ್ಞಾನ ಕಾಲೇಜುಗಳಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ನಿವೃತ್ತ ಕವಿವಿ ಗಂಥಪಾಲಕ ಡಾ. ಎಸ್.ಬಿ.ಪಾಟೀಲ ಮತ್ತು ಕವಿವಿ ಗ್ರಂಥಾಲಯ ಅಧ್ಯಯನ ವಿಭಾಗದ ಚೇರಮನ್ ಡಾ. ಬಿ.ಡಿ.ಕುಂಬಾರ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ವಹಿಸಿದ್ದ ಕೆಸಿಡಿ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಬಿ.ಎಫ್.ಚಾಕಲಬ್ಬಿ ಮಾತನಾಡಿ ಕೆಸಿಡಿಯ ವಿ.ಕೃ.ಗೋಕಾಕ್ ಕೇಂದ್ರ ಗ್ರಂಥಾಲಯದಲ್ಲಿ ಶುದ್ಧ ನೀರಿನ ಘಟಕವನ್ನು ಅಳವಡಿಸಿದ್ದಕ್ಕಾಗಿ ಎಸ್.ವಿ.ಸಂಕನೂರ ಅವರಿಗೆ ಧನ್ಯವಾದಗಳನ್ನು ಹೇಳಿದರು. ಇಂದು ಮಾಹಿತಿ ತಂತ್ರಜ್ಞಾನವು ಗ್ರಂಥಾಲಯಗಳ ಬದಲಾವಣೆಗೆ ಕಾರವಾಗಿದೆ ಎಂದರು.

ಕೆಸಿಡಿ ವಿಜ್ಞಾನ ಕಾಲೇಜಿನ ಪ್ರಾಚಾರ್ಯ ಡಾ. ಸಿ.ಎಫ್.ಮೂಲಿಮನಿ ಕವಿವಿಯ ನಿವೃತ್ತ ಗ್ರಂಥಪಾಲಕ ಡಾ. ಎಸ್.ಬಿ.ಪಾಟೀಲ್, ಕೆಸಿಡಿ ವಿ.ಕೃ.ಗೋಕಾಕ್ ಗ್ರಂಥಾಲಯದ ಗ್ರಂಥಪಾಲಕರಾದ ಡಾ. ಅಶೋಕ ಆಲದಕಟ್ಟಿ, ಎನ್.ಎನ್. ಹಂಚಿನಾಳಮಠ. ಡಾ. ಸಂತೋಷ್ ಚವ್ಹಾಣ. ಸೇರಿದಂತೆ ಕವಿವಿ ವ್ಯಾಪ್ತಿಯ ವಿವಿಧ ಕಾಲೇಜಿನ ಗ್ರಂಥಪಾಲಕರು, ವಿಜ್ಞಾನ ಮತ್ತು ಕಲಾ ಕಾಲೇಜಿನ ಪ್ರಾಧ್ಯಾಪಕರು ವಿದ್ಯಾರ್ಥಿ ಗಳು ಇದ್ದರು.