ಬೆಳಗಾವಿಯಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಘಟನೆ

In Belgaum, while traveling in a KSRTC bus, the operator was assaulted by asking him to speak in Ka

 ಬೆಳಗಾವಿಯಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಘಟನೆ  

ಶಿಗ್ಗಾವಿ 22 : ಬೆಳಗಾವಿಯಲ್ಲಿ ಕೆ.ಎಸ್‌.ಆರ್‌.ಟಿ.ಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆಯಲ್ಲಿ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿ ನಿರ್ವಾಹಕರ ಮೇಲೆ ಹಲ್ಲೆ ಮಾಡಿದ ಘಟನೆಯನ್ನು ಶನಿವಾರ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಶಿಗ್ಗಾವಿ ತಾಲೂಕಾ ಕಾರ್ಯಕರ್ತರು ಶಿಗ್ಗಾವಿ-ಸವಣೂರ ಕ್ಷೇತ್ರದ ಶಾಸಕರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಶನಿವಾರ ಡಾ. ಬಿ.ಆರ್‌. ಅಂಬೇಡ್ಕರ ಕಚೇರಿಗಳ ಸಂಕಿರ್ಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.  ಜಿಲ್ಲಾ ಸಮಿತಿಯ ಅಧ್ಯಕ್ಷರಾದ ರಾಮು ತಳವಾರ ಮಾತನಾಡಿ ಕೆ.ಎಸ್‌.ಆರ್‌.ಟಿ.ಸಿ ಬೆಳಗಾವಿ ನಗರ ಘಟಕದ ಬಸ್ಸ ಒಂದು ಸುಳೇಭಾವಿ-ಬಾಳೇಕುಂದ್ರಿ ಮಾರ್ಗ ಮಧ್ಯೆ ಸಾಗುತ್ತಿದ್ದಾಗ ಯುವತಿ ಒಬ್ಬಳು ಮರಾಠಿ ಭಾಷೆಯಲ್ಲಿ ಶಕ್ತಿ ಯೋಜನೆಡೆಯಲ್ಲಿ ಆಧಾರ ಕಾರ್ಡ ತೋರಿಸಿ ತನಗು ಹಾಗೂ ತನ್ನೊಂದಿಗೆ ಪ್ರಯಾಣಿಸುತ್ತಿದ್ದ ಯುವಕನಿಗೆ ಉಚಿತವಾಗಿ ಟಿಕೇಟ ನೀಡುವಂತೆ ಕೋರಿದ್ದಾಳೆ. ಇದಕ್ಕೆ ಉತ್ತರವಾಗಿ ನಿರ್ವಾಹಕರು ಮಹಿಳೆಯರಿಗೆ ಮಾತ್ರ ಉಚಿತ ಟಿಕೇಟ ಲಭ್ಯವಿದ್ದು ಯುವಕನ ಟಿಕೇಟ ತೆಗೆದುಕೊಳ್ಳಿ ಮತ್ತು ನನಗೆ ಮರಾಠಿ ಭಾಷೆ ಬರುವುದಿಲ್ಲ. ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದಾಗ ಕೋಪಗೊಂಡ ಇವರು ಮರಾಠಿ ಭಾಷೆಯಲ್ಲಿ ಅವಾಚ್ಯ ಶಭ್ದಗಳಿಂದ ನಿಂಧಿಸಿ ಬಾಳೇಕುಂದ್ರಿ ಗ್ರಾಮದಲ್ಲಿ ಬಸ್ಸನ್ನು ತೆಡೆದು 20 ಹೆಚ್ಚಿನ ಯುವಕರು ಕೂಡಿಕೊಂಡು ನಿರ್ವಾಹಕರ ಮೇಲೆ ಮರಣಾಂತಿಕ ಹಲ್ಲೆ ಮಾಡಿದ್ದು ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಜರುಗಿಸಲು ಒತ್ತಾಯಿಸಿದ್ದರು.  ತಾಲೂಕ ಅಧ್ಯಕ್ಷರಾದ ಸುರೇಶ ವನಹಳ್ಳಿ ಮಾತನಾಡಿ ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಗಡಿಭಾಗಗಳಲ್ಲಿ ಮರಾಠಿಗರು ಕನ್ನಡಿಗರ ಮೇಲೆ ನಿರಂತರವಾಗಿ ಅನ್ಯಾಯ ಮಾಡುತ್ತಾ ಬಂದಿರುತ್ತಾರೆ. ಕ್ಷುಲಕ ಕಾರಣಗಳನ್ನು ಮುಂದಿಟ್ಟು ಪದೇ ಪದೇ ತಂಟೆ ತಕರಾರು ಮಾಡುತ್ತಾ ಕನ್ನಡ ಹಾಗೂ ಮರಾಠಿ ಭಾಷಿಕರ ನಡುವೆ ವೈಷಮ್ಯ ಉಂಟು ಮಾಡಿ ಶಾಂತಿ ಸುವ್ಯವಸ್ಥೆ ಕದಡಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರ್ಕಾರ ಇಂತಹ ಘಟನೆಗೆ ಕಾರಣಿಕರ್ತರಾದ ವ್ಯಕ್ತಿಗಳ ಮೇಲೆ ಉಗ್ರ ಕ್ರಮ ಜರುಗಿಸಲು ಆಗ್ರಹಿಸಿದರು.  ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಎಸ್‌.ಎಸ್ ಭರಮಣ್ಣನವರ ಹಿರಿಯ ಕನ್ನಡ ಪರ ಹೋರಾಟಗಾರ ಡಿ.ಎಸ್‌. ಓಲೇಕಾರ ಮುಖಂಡರುಗಳಾದ ಮಾಲತೇಶ ಸುಂಕದ, ಪ್ರದೀಪ ಅತ್ತಿಗೇರಿ, ವೀರಯ್ಯ ಪ್ರಭಯ್ಯನವರಮಠ, ಬಾಪುಗೌಡ್ರ ಪಾಟೀಲ, ಧರ್ಮಣ್ಣ ಜೋಳದ ಸೇರಿದಂತೆ ಅನೇಕರು ಉಪಸ್ಥಿತರು ಇದ್ದರು.