ಧಾರವಾಡ 28: ಮಕ್ಕಳು ಸ್ಫಧರ್ಾತ್ಮಕ ಪರೀಕ್ಷೆಯನ್ನು ಎದುರಿಸಲು ಸಿದ್ಧರಾಗುವಂತಹ ಪ್ರಶ್ನೆಪತ್ರಿಕೆಗಳು ತಯಾರಾಗಬೇಕು. ಮಕ್ಕಳು ಅಂಕಗಳಿಸುವ ಉದ್ದೇಶವನ್ನು ಮಾತ್ರ ಹೊಂದಿರದೇ ಜೀವನವನ್ನು ಎದುರಿಸುವಂತಹ ಪರೀಕ್ಷೆಗೆ ಸಿದ್ಧರಾಗಬೇಕೆಂದು ಬೆಳಗಾಂ ವಿಭಾಗದ ಸಹನಿದರ್ೇಶಕ ಪ್ರಸನ್ನಕುಮಾರ ಕರೆ ನೀಡಿದರು.
ಸೇಂಟ್ ಜೋಸೆಪ್ ಶಾಲೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಗೆ ರಸಪ್ರಶ್ನೆ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದ ಅವರು ಎಸ್ಎಸ್ಎಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಬರವಣಿಗೆ, ಓದು, ಉತ್ತರಿಸುವ ಶೈಲಿ ಇತರ ರಾಜ್ಯಗಳಿಗಿಂತ ಭಿನ್ನವಾಗಿ ಗುಣಮಟ್ಟದ್ದಾಗಿರಲಿ ಎಂದು ಹೇಳಿದರು. ಪಠ್ಯವಸ್ತು, ಪಠ್ಯಪುಸ್ತಕ ಅದೇ ಇದ್ದರೂ ಸಹ ಪ್ರಶ್ನೆ ಹಾಗೂ ಅಂಕಗಳಲ್ಲಿ ಸ್ವಲ್ಪ ಬದಲಾವಣೆಯಾಗಿದೆ. ಶೇ. 97 ಕ್ಕಿಂತ ಹೆಚ್ಚಿನ ಅಂಕ ಪಡೆದ ಮಕ್ಕಳಿಗೆ ಪ್ರತಿಷ್ಠಿತ ಕಾಲೇಜುಗಳಲ್ಲಿ 5 ಸೀಟುಗಳನ್ನು ಕಾಯ್ದಿರಿಸಬೇಕೆಂದು ಸಕರ್ಾರದಿಂದಲೇ ಆದೇಶ ಮಾಡಲಾಗಿದೆ. ಪ್ರಯತ್ನ ಪಟ್ಟು ಸಾಧನೆ ತೋರಿದ ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಇದು ಸಹಕಾರಿಯಾಗುವುದು ಎಲ್ಲ ಮಕ್ಕಳೂ ಸತತ ಪಯತ್ನದಿಂದ ಸಾಧನೆ ಮಾಡಲು ಸಾಧ್ಯ. ಎಲ್ಲರೂ ಸುಮ್ಮನಿರಲ್ಲ, ಸುಮ್ಮನಿದ್ದವರೂ ಗೆಲ್ಲುವದಿಲ್ಲ ಎನ್ನುವಂತೆ, ಓದಲಿಕ್ಕಾಗಿಯೇ ಅವಧಿಯನ್ನು ಮೀಸಲಾಗಿರಿಸಿರಿ. ನೀವೆಲ್ಲರೂ ಖಟಚಿಡಿಣ ತಿಠಡಿಞ ಮಾಡಿರಿ ಎಂದು ಕರೆ ನೀಡಿದರು.
ಮಕ್ಕಳಲ್ಲಿ ಆತ್ಮ ವಿಶ್ವಾಸ, ಗುಣಮಟ್ಟ ಸುಧಾರಣೆ ಆಗಿ, ಸ್ವಸಾಮಥ್ರ್ಯದಿಂದ ಪರೀಕ್ಷೆ ಬರೆಯುವಂತೆ ಸಿದ್ಧಗೊಳ್ಳಬೇಕು. ಅದಕ್ಕೆ ಪೂರಕವಾಗಿರುವುದೇ ಈ ರಸ ಪ್ರಶ್ನೆ ಕಾರ್ಯಕ್ರಮ. ನೀವೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಿರಿ. ಈಗಾಗಲೇ ತಮ್ಮ ಕಾಯರ್ಾಲಯದಿಂದ ಗುಣಮಟ್ಟದ ಶಿಕ್ಷಣಕ್ಕಾಗಿ ಸಿದ್ಧಪಡಿಸಿದ ಅರಳು ಮಲ್ಲಿಗೆ, ಉತ್ತೇಜಕ, ಉದರ್ು ಮಾಧ್ಯಮದವರಿಗಾಗಿ ಫಿಕರ್ ಹಾಗೂ ಶಾಲೆಯ ಸಮಗ್ರ ಶೈಕ್ಷಣಿಕ ಕಡತವನ್ನು ನಿರ್ವಹಿಸಲಾಗುತ್ತಿದೆ. ಇದರ ಮುಖ್ಯ ಉದ್ದೇಶ ಶಾಲೆಯಲ್ಲಿನ ಪ್ರತಿಯೊಂದು ಮಗುವಿನ ಆದರ್ಶ ವ್ಯಕ್ತಿತ್ವ, ಗುಣಮಟ್ಟದ ಕಲಿಕೆ ಮೌಲ್ಯಯುತ ಗುಣಗಳನ್ನು ರೂಢಿಸುವುದಾಗಿದೆ. ಇದರಲ್ಲಿ ಪ್ರಾರ್ಥನೆಯಿಂದ ಹಿಡಿದು ಪಠ್ಯ ಹಾಗೂ ಸಹ ಪಠ್ಯವನ್ನು ಮಕ್ಕಳಲ್ಲಿ ಮೂಡಿಸಲು ಕೈಕೊಂಡ ಕ್ರಮದ ವಿವರವಾದ ಮಾಹಿತಿಯನ್ನು ಅರಿಯಬಹುದಾಗಿದೆ. ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ ಎ ಖಾಜಿಯವರು ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ ಹೇಳಿದರು.
ಕೆ ಎಫ್ ಜಾವೂರ ಶಿಕ್ಷಣ ಸಂಯೋಜಕರು ಸ್ವಾಗತಿಸಿದರು, ವೇದಿಕೆಯಲ್ಲಿ ವಿಷಯ ಪರಿವೀಕ್ಷಕರಾದ ಎನ್ ಆರ್ ಪಾಟೀಲ, ಶ್ಯಾಮ ಮಲ್ಲನಗೌಡರ, ಲದ್ದಿಮಠ, ವಾಯ್ ಹೆಚ್ ಪಾಟೀಲ, ವಿವಿಧ ಶಾಲೆಗಳಿಂದ ಆಗಮಿಸಿದ 240 ಕ್ಕೂ ಹೆಚ್ಚು ಮಕ್ಕಳು ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
44 ಮಕ್ಕಳು ಅಂತಿಮ ರಸಪ್ರಶ್ನೆಗೆ ಆಯ್ಕೆಯಾದರು. ಅದರಲ್ಲಿ ಪ್ರಥಮ ಸ್ಥಾನವನ್ನು ಕೆ ಇ ಬೋಡರ್್ ಕನ್ನಡ ಮಾಧ್ಯಮ ಶಾಲೆ ಶಾಲೆಯ ಮಕ್ಕಳು ಪಡೆದರೆ ದ್ವಿತೀಯ ಸ್ಥಾನವನ್ನು ಕೆ ಇ ಬೋಡರ್್ ಆಂಗ್ಲ ಮಾಧ್ಯಮ ಮತ್ತು ಪ್ರಜೆಂಟೇಶನ್ ಪ್ರೌಢ ಶಾಲೆಯ ಮಕ್ಕಳು ಹಾಗೂ ತೃತೀಯ ಸ್ಥಾನವನ್ನು ಜೆಎಸ್ಎಸ್ ಸೆಂಟ್ರಲ್ ಶಾಲೆ ಮತ್ತು ಬಾಲಬಳಗ ಶಾಲೆಯ ಮಕ್ಕಳು ತಮ್ಮದಾಗಿಸಿಕೊಂಡರು.
ವಿ ಬಿ ಹೊಸಕೇರಿ ಸಿಆರ್ಪಿ ಗಾಂಧಿಚೌಕ ವಂದಿಸಿದರು. ಕೀತರ್ಿವತಿ ವಿ ಎನ್ ಬಿಐಇಆರ್ಟಿ ನಿರೂಪಿಸಿದರು.