ಮುಗಳಖೋಡ 16: ತರಬೇತಿಗಳು ಜನರ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ವಹಿಸಿವೆ. ಅದರಲ್ಲೂ ಹಳ್ಳಿಗಳಲ್ಲಿ ಹೈನುಗಾರಿಕೆಗೆ ಬೇಕಾದ ಎಲ್ಲಾ ಸೌಕರ್ಯಗಳು ಇರುವುದರಿಂದ ಸ್ವ ಸಹಾಯ ಸಂಘದ ಸದಸ್ಯರುಗಳು ಇಂತಹ ಶಿಬಿರಗಳಲ್ಲಿ ಬಾಗವಹಿಸಿ, ಹೆಚ್ಚು ಹೆಚ್ಚು ಹೈನುಗಾರಿಕೆಯಲ್ಲಿ ತೊಡಗಿ ಹೆಚ್ಚಿನ ಆದಾಯವನ್ನು ಪಡೆದು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಬೆಳಗಾವಿ ನಬಾರ್ಡ ಎ.ಜಿ.ಎಮ್/ಡಿ.ಡಿ.ಎಮ್ ಆದಿತ್ಯ ಮಾವಿನಕುರವೆ ಹೇಳಿದರು.
ಮುಗಳಖೋಡ ಪುರಸಭೆ ವ್ಯಾಪ್ತಿಯ ಡಾ. ಬಾಬಾಸಾಹೇಬ ಅಂಬೇಡ್ಕರ ಸಮುದಾಯ ಭವನದಲ್ಲಿ ನೆರವೇರಿಸಿದ ಲೆವಲಿಹುಡ್ ಎಂಟರಪ್ರೈಜ್ ಡೆವೆಲಪಮೆಂಟ್ ಪ್ರೋಗ್ರಾಮ್ ನಬಾರ್ಡ ಬೆಂಗಳೂರು ಹಾಗೂ ಜನನಿ ಸಂಸ್ಥೆ ಮುನ್ಯಾಳ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಜರುಗಿದ ಜೀವನ ಉಪಾಯ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ 7 ದಿನಗಳ ಹೈನುಗಾರಿಕೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಬಾರ್ಡವು ಯಾವುದೇ ವ್ಯಕ್ತಿಯನ್ನು ಪ್ರತಿನಿಧಿಯಾಗಿ (ಏಜಂಟ್) ನೇಮಿಸಿರುವುದಿಲ್ಲಾ, ಹಲವಾರು ಜನ ನಬಾರ್ಡನ ಪ್ರತಿನಿಧಿ ಎಂದು ಜನರಿಗೆ ನಂಬಿಸಿ ಮೋಸಮಾಡುತ್ತಿದ್ದಾರೆ. ಹಾಗಾಗಿ ತಾವುಗಳು ಅದಕ್ಕೆ ಅವಕಾಶ ಕೊಡದೇ ತಮಗೆ ಸಹಾಯ ಧನ ಸಾಲ ಬೇಕಾದಲ್ಲಿ ನೇರವಾಗಿ ಬ್ಯಾಂಕುಗಳಿಗೆ ಹೋಗಿ ಅಜರ್ಿಗಳನ್ನು ಸಲ್ಲಿಸಿ, ಅಲ್ಲಿಂದಲೇ ಸಾಲ ಸೌಲತ್ತುಗಳನ್ನು ಪಡೆದುಕೊಳ್ಳಬಹುದು. ಹೈನುಗಾರಿಕೆಯು ಕೇವಲ ಒಂದು ಉದ್ಯೋಗ ಅಷ್ಟೇ ಆಗದೇ ಒಂದು ಉದ್ದಿಮೆಯಾಗಿ ಬೆಳೆಯಬೇಕು ಎಂದು ಅವರು ಕರೆ ಕೊಟ್ಟರು.
ಅಧ್ಯಕ್ಷತೆ ವಹಿಸಿದ್ದ ಮಹಾವೀರ ಬೊರಣ್ಣವರ ಮುಖ್ಯಾಧಿಕಾರಿ ಮಾತನಾಡುತ್ತಾ ಮಹಿಳೆಯರು ಕೇವಲ ನಾಲ್ಕು ಗೋಡೆಯಲ್ಲಿ ಸಿಮೀತವಾಗದೆ ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದು ಕರೆ ನೀಡಿದರು. ತರಬೇತಿಯನ್ನು ಮುಗಳಖೋಡ ಗ್ರಾಮಕ್ಕೆ ನಡೆಸುತ್ತಿರುವ ನಬಾರ್ಡ ಬ್ಯಾಂಕ ಹಾಗೂ ಜನನಿ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪಶು ವೈದ್ಯ ಮಹಾವೀರ ಕಂಕಣವಾಡಿ ಮಾತನಾಡಿ, ರಾಸುಗಳಲ್ಲಿ ಹಲವಾರು ತಳಿಗಳಿವೆ. ಅದರಲ್ಲಿ ನಮ್ಮ ಪ್ರದೇಶಕ್ಕೆ ಯಾವ ರೀತಿಯ ತಳಿಗಳನ್ನು ಸಾಕಾಣೆ ಮಾಡಬೇಕು ಮತ್ತು ಅವುಗಳ ಪಾಲನೆ ಪೊಷನೆ ಬಗ್ಗೆ ತಿಳಿದುಕೊಳ್ಳಲು ಈ ತರಬೇತಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗೂ ಅವುಗಳಿಗೆ ಸರಿಯಾದ ಸಮಯಕ್ಕೆ ಲಸಿಕೆಗಳನ್ನು ಹಾಕಿಸಬೇಕು ಎಂದರು.
ಜನನಿ ಸಂಸ್ಥೆಯ ಅಧ್ಯಕ್ಷ ಈರಪ್ಪಾ ಗೋಡಿಗೌಡರ ತರಬೇತಿಯ ಲಾಭಗಳನ್ನು ಹೇಳಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಸಿಬ್ಬಂದಿ ಕಲ್ಪನಾ ದೊಡ್ಡನ್ನವರ, ಪ್ರಭಾಕರ ಮುಗಳಖೋಡ, ಬೊರಮ್ಮ ಹುಕ್ಕೇರಿ, ಆಶಾ ಖೇತಗೌಡರ, ಲಕ್ಷ್ಮೀ ಕದಮ, ಪ್ರೀಯಾಂಕಾ ಹಾಗೂ ಅಂಗಣವಾಡಿ ಕಾರ್ಯಕತರ್ೆಯರು, ಆಯ್ದ ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯರುಗಳು ಭಾಗಿಯಾಗಿದ್ದರು.
ಸಂಸ್ಥೆಯ ಕಾರ್ಯದಶರ್ಿ ಆನಂದ ಸುಳ್ಳನವರ ಸ್ವಾಗತಿಸಿದರು. ಇಂದುಮತಿ ಕದಮ ನಿರೂಪಿಸಿದರು. ಜನನಿ ಸಂಸ್ಥೆಯ ಸಿಬ್ಬಂದಿ ವಿಶ್ವನಾಥ ಯಾಳವರಮಠ ವಂದಿಸಿದರು.