ದಾಖಲೆಗಳನ್ನು ಕಾಯ್ದುಕೊಳ್ಳಲು ಮಹತ್ವ ನೀಡಿ: ಚೆಟ್ಟಿ

ಲೋಕದರ್ಶನ ವರದಿ

ಧಾರವಾಡ 31: ವಿದ್ಯಾಥರ್ಿಗಳಿಗೆ ಸರಕಾರಿ ಕೆಲಸಕ್ಕೆ ಅವಲಂಬಿತರಾಗದೆ ಸ್ವಾವಲಂಬಿಗಳಾಗಿ ಉದ್ಯೋಗಮಾಡಿ ಬದುಕಲು ಪ್ರೇರಣೆ ನೀಡುವುದು ಇಂದಿನ ಶೀಕ್ಷಕರ ಪ್ರಮುಖ ಕೆಲಸ ಎಂದು ಕೃಷಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎಮ್.ಬಿ.ಚೆಟ್ಟಿ ಅವರು ಅಂಜುಮನ್ ಇಸ್ಲಾಂ ಸಂಸ್ಥೆಯ ಸಭಾಭವನದಲ್ಲಿ ಅಂಜುಮನ್ ಇನಸ್ಟಿಟ್ಯೂಟ ಆಫ್ ಇನಫಾಮರ್ೇಷನ್ ಸೈನ್ಸ್ ಆ್ಯಂಡ್ ಮ್ಯಾನೆಜಮೆಂಟ್ ಆಯೋಜಿಸಿದ್ದ 2018-19 ನೇ ಸಾಲಿನ ಚಚರ್ಾಕೂಟ ಮತ್ತು ಜಿಮ್ಖಾನಾ ಚಟುವಟಿಕೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

                ವಿದ್ಯಾಥರ್ಿಗಳಿಗೆ ಆಸಕ್ತಿ ಇರುವ ವಿಷಯ ಕಲಿಸಲು ಪಾಲಕರು ಪ್ರೋತ್ಸಾಹಿಸಬೇಕು, ಭಾರತೀಯ ವಿದ್ಯಾಥರ್ಿಗಳು ವಿದೇಶದಲ್ಲಿ ಶೈಕ್ಷಣಿಕವಾಗಿ ಮುಂದೆ ಇದ್ದಾರೆ, ಆದರೆ ಸಂವಾದದಲ್ಲಿ, ಇನ್ನೊಬ್ಬರೊಂದಿಗೆ ಚಚರ್ೆಯಲ್ಲಿ ನಾಚಿಕೆ ಸ್ವಭಾವದಿಂದ ಹಿಂದೆ ಜರಿಯುತ್ತಾರೆ, ನಿಮಗೆ ಸರಿಯಾಗಿ ಅನಿಸಿದ್ದನ್ನು ಇತರರೊಂದಿಗೆ ಚಚರ್ಿಸಲು ಹಿಂದೆ ಜರಿಯದಿರಿ, ಬೇರೆ ಬೇರೆ ಭಾಷಿಕರೊಂದಿಗೆ ಬೆರೆತು ಭಾಷೆಯನ್ನು ಕಲಿಯಲು ಪ್ರಯತ್ನಿಸಿ, ಸಮಯ ಪಾಲನೆಗೆ  ಮಹತ್ವ ನೀಡಿ. ದಾಖಲೆಗಳನ್ನು ಇಡುವ ತರಬೇತಿ ಕರಗತ ಮಾಡಿಸಿಕೊಳ್ಳಿ, ಇದಕ್ಕೆ ಉದಾಹರಣೆ ನೀಡಿದ ಅವರು 1964 ರಲ್ಲಿ ಭಾರತದ ಕೃಷಿ ವಿಜ್ಞಾನಿಗಳು ಅಂಟ್ಲಾಟರ್ಿಕಾ ಭೇಟಿ ನೀಡಿ ಮಂಜುಗಡ್ಡೆಯಲ್ಲಿ ನೂರು ದಿನ ಇದ್ದು ಗಿಡಗಳ ಮೇಲೆ ಮಂಜಿನ ಪ್ರಭಾವದ ಬಗ್ಗೆ ಅಧ್ಯಯನ ಮಾಡಿ ಲಾಸ್ ಎಂಜಲಿಸ್ ಗ್ರಂಥಾಲಯದಲ್ಲಿ ದಾಖಲೆಗಳನ್ನು ಇಟ್ಟಿದ್ದು ನಾನು 1984 ರಲ್ಲಿ ಭೇಟಿ ನೀಡಿ ಕೇಳಿದಾಗ ಒಂದೇ ದಿನದಲ್ಲಿ  ದಾಖಲೆಗಳನ್ನು ನೀಡಿದ್ದು ನೋಡಿದರೆ ನಾವು ಭಾರತೀಯರು ರೀತಿಯ ಸೇವೆ ಕರಗತ ಮಾಡಿಕೊಳ್ಳಬೇಕೆಂದರು.

                ಹುಬ್ಬಳ್ಳಿಯ ಸ್ಯಾಂಡ್ಬಾಕ್ಸ್ ಸ್ಟಾರ್ ಟೂಬ್ಸ್ ವ್ಯವಸ್ಥಾಪಕ ನಿದರ್ೇಶಕ ಸಿ.ಎಮ್. ಪಾಟೀಲ ಮಾತನಾಡಿ ಹಿಂದೆ ಗುರು ಮುಂದೆ ಗುರಿ ಇದ್ದರೆ ಜಗತ್ತಿನಲ್ಲಿ ಏನೆಲ್ಲವನ್ನು ಸಾಧಿಸಬಹುದು, ನಿಮ್ಮ ಪದವಿಯ ನಂತರವೂ ಸಹ ನೀವು ಕಲಿತ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಯ ಬಗ್ಗೆ ಮಾಹಿತಿಗಾಗಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬಿಡದಿರಿ. ಯಾವಾಗಲೂ ಆತ್ಮ ವಿಶ್ವಾಸದಿಂದ ಬದುಕಲು ಪ್ರಯತ್ನಿಸಿ ಎಂದರು.

                ಅಂಜುಮನ್ ಸಂಸ್ಥೆಯ ಜಂಟಿ ಕಾರ್ಯದಶರ್ಿ ರಫೀಕ ಅಹ್ಮದ ಶಿರಹಟ್ಟಿ, ಚಚರ್ಾಕೂಟ ಮತ್ತು ಕ್ರೀಡಾ ಚಟುವಟಿಕೆಗಳ ಚೇರಮನ್ ಪ್ರೋ. ಎನ್.ಎಚ್.ಪಾಟೀಲ, ವಿದ್ಯಾಥರ್ಿ ಜನರಲ್ ಸೆಕ್ರೆಟರಿ ಬರಹನುದ್ದೀನ ಎಮ್. ಬಗದಾದಿ, ವಿದ್ಯಾಥರ್ಿ ಕ್ರೀಡಾ ಚಟುವಟಿಕೆಗಳ ಕಾರ್ಯದಶರ್ಿ ಮಹಮ್ಮದ ರಫೀಕ ಎಮ್. ಆವಳಿ, ಉಪ ಕಾರ್ಯದಶರ್ಿ ಸನಾ ಆಪ್ರೀನ್ ಗೋಡೆವಾಲೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಬ್ದುಲ್ ಅಜೀಜ ದಾಸನಕೊಪ್ಪ ವಿದ್ಯಾಥರ್ಿಗಳಿಗೆ ಪ್ರಮಾಣ ವಚನ ಬೋಧಿಸಿದರು, ಕಾಲೇಜಿನ ಪರಿಸರ ಜಾಗೃತಿ ಸಂಘಟನೆಯಿಂದ ವೇದಿಕೆ ಮೇಲಿನ ಗಣ್ಯರಿಗೆ ಸಸಿಗಳನ್ನು ನೀಡಲಾಯಿತು.

                ಕುರಾನ್ ಪಠಣ ಸನಾ ಜಹಾಗೀರದಾರ, ನಾಡಗೀತೆ ಶ್ರೇಯಾ ಮತ್ತು ಸಂಗಡಿಗರು, ಅತಿಥಿಗಳ ಪರಿಚಯ ಪ್ರೋ. ಪ್ರೀಯದಶರ್ಿನಿ.., ಸ್ವಾಗತ ಪ್ರಾಂಶುಪಾಲ ಅಬ್ದುಲ ಮತೀನ ಎಮ್.ಬಿ., ಕಾರ್ಯಕ್ರಮ ನಿರೂಪಣೆ ಪ್ರೋ. ಇಶರ್ಾದ ಅಹ್ಮದ ಹುಯಿಲಗೋಳ, ವಂದನಾರ್ಪಣೆ ಶಲರ್ಿ ಬೆನ್ ಮಾಡಿದರು