ಶಿಕ್ಷಣದ ಮಹತ್ವ ಜೀವನ ನಿರ್ವಹಣೆ ಮಾಡುವಾಗ ಗೊತ್ತಾಗುತ್ತದೆ : ನಾಗೇಶ ಶರ್ಮಾ
ಶಿಗ್ಗಾವಿ 11: ವಿಧ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಕಲ್ಪನೆ ಬಂದಿರುವುದಿಲ್ಲ ನಂತರ ಜೀವನ ನಿರ್ವಹಣೆ ಮಾಡುವಾಗ ಶಿಕ್ಷಣದ ಮಹತ್ವ ಗೊತ್ತಾಗುತ್ತದೆ ಎಂದು ಗುಜರಾತ್ ಅಂಬುಜಾ ಸಿ.ಇ.ಓ ನಾಗೇಶ ಶರ್ಮಾ ಹೇಳಿದರು. ಪಟ್ಟಣದ ತಾಲೂಕ ಶಿಕ್ಷಣ ಸಮಿತಿ, ಶ್ರೀಮಂತ ಬಸವಂತರಾವ ಬುಳ್ಳಪ್ಪ ಮಾಮ್ಲೆದೇಸಾಯಿ ಸಮೂಹ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಗುರುಗಳ ಕೊಟ್ಟಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದಾಗ ನಾವು ಸಹಿತ ಮುಖ್ಯವಾಹಿನಿಗೆ ಬರುತ್ತೇವೆ ಅಲ್ಲದೇ ನಾವು ಕಲಿತ ಶಾಲೆಯನ್ನು ಎಂದಿಗೂ ಮರೆಯಬಾರದು ಹಾಗೂ ಜಿಲ್ಲೆಯಲ್ಲಿ ಉತ್ತಮ ಸಂಸ್ಥೆ ಎಂಬ ಹೆಗ್ಗಳಿಕೆ ಪಾತ್ರವಾದ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಪೋಲಿಸ್ ಕಮಾಡೆಂಟ್ ಎನ್. ಬಿ.ಮೆಳ್ಳಾಗಟ್ಟಿ ಮಾತನಾಡಿ ತಾಲೂಕಿನಲ್ಲಿ ಉತ್ತಮ ಶಿಕ್ಷಣಕ್ಕೆ ಹೆಸರುವಾಸಿಯಾದ ಸಂಸ್ಥೆ ಇದಾಗಿದೆ. ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇತ್ತೀಚಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸತತ ಪ್ರಯತ್ನ ಪಟ್ಟರೆ ಮಾತ್ರ ಯಶಸ್ಸು ಸಾಧ್ಯ ಎಂದು ಕಿವಿ ಮಾತು ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಸಿ.ನಾಗರಜ್ಜಿ ಮತ್ತು ತಾಲೂಕ ಶಿಕ್ಷಣ ಸಮಿತಿ ಉಪಾದ್ಯಕ್ಷ ದತ್ತಣ್ಣಾ ವೇರ್ಣೇಕರ ಅದ್ಯಕ್ಷತೆವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ, ಕಾರ್ಯದರ್ಶಿ ಎಸ್.ಪಿ.ಜೋಶಿ, ರಾಜಣ್ಣಾ.ಬಿ.ಮಾಮ್ಲೇದೇಸಾಯಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಕೆ.ಸಿ.ನಾಗರಜ್ಜಿ,ಡಾ.ಪಿ.ಆರ್.ಪಾಟೀಲ, ಎಂ.ಎಲ್.ದೇಶಪಾಂಡೆ, ಎಸ್.ಎಂ.ಚಿನ್ನಪ್ಪನವರ,ವ್ಹಿ.ಬಿ.ಮೇಟಿ, ಎಸ್.ಎಫ್.ಯಲಿಗಾರ, ಎಸ್.ಎಂ.ಬುಳ್ಳಕ್ಕನವರ, ಸಿ.ಎಸ್.ಪಾಲನಕರ, ಎಸ್.ಎಸ್.ರಾಮಗೇರಿ, ವ್ಹಿ.ಎಂ.ಅಂಕಲಕೋಟಿ, ಜಯಣ್ಣಾ ಹೆಸರೂರ, ಅಶೋಕ ಕಾಳೆ, ಬಶೆಟ್ಟೆಪ್ಪ ಯಲಿಗಾರ, ಶಿವಾನಂದ ಕುನ್ನೂರ, ಪ್ರಾಚಾರ್ಯ ಆರ್.ಎಸ್.ಭಟ್, ಉಪಪ್ರಾಚಾರ್ಯ ಕೆ.ಬಿ.ಚೆನ್ನಪ್ಪ ಸೇರಿದಂತೆ ನಿವೃತ್ತ ಸಿಬ್ಬಂದಿಗಳು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು. ಉಪ ಪ್ರಾಚಾರ್ಯ ಕೆ.ಬಿ.ಚೆನ್ನಪ್ಪ ಸ್ವಾಗತಿಸಿದರು, ಡಾ.ಹರ್ಲಾಪೂರ ಕಾರ್ಯಕ್ರಮ ನಿರ್ವಹಿಸಿದರು.