ಸಮಾಜದ ಬದಲಾವಣೆಗೆ ಮಾನವ ಹಕ್ಕುಗಳ ಅನುಷ್ಠಾನ ಬಹಳ ಮುಖ್ಯ- ಎಂ.ಎನ್‌.ಶ್ರೀರಾಮ್

Implementation of human rights is very important for the change of society- MN Sriram

ಸಮಾಜದ ಬದಲಾವಣೆಗೆ ಮಾನವ ಹಕ್ಕುಗಳ ಅನುಷ್ಠಾನ ಬಹಳ ಮುಖ್ಯ- ಎಂ.ಎನ್‌.ಶ್ರೀರಾಮ್ 

ಬಳ್ಳಾರಿ 14: ಇಂದು ವುಂಕಿ ಸಣ್ಣರುದ್ರ​‍್ಪ ಕಾನೂನು ವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ದಿನಾಚರಣೆಯ ಪ್ರಯುಕ್ತ ಕಾರ್ಯಕ್ರಮವನ್ನು ಕಾಲೇಜು ಆಡಳಿತ ಮತ್ತು ಸಿ.ಪಿ.ಡಿ.ಆರ್‌.ಎಸ್ (ಸೆಂಟರ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ ಅಂಡ್ ಸೆಕ್ಯುಲರಿಸಂ) ಬಳ್ಳಾರಿ ಇವರುಗಳು ಸಂಯೋಜಿತವಾಗಿ ಅಯೋಜಿಸಲಾಗಿತ್ತು. 

ಈ ಸಂದರ್ಭದಲ್ಲಿ ಸಿ.ಪಿ.ಡಿ.ಆರ್‌.ಎಸ್‌ನ ರಾಜ್ಯ ಸಂಚಾಲಕರಾದ ಎಂ.ಎನ್‌.ಶ್ರೀರಾಮ್ ಅವರು ಮಾತನಾಡುತ್ತಾ ಮಾನವ ಹಕ್ಕುಗಳು ಪ್ರಗತಿ ದಾಯಕವಾದ ಮೌಲ್ಯಗಳನ್ನು ಒಳಗೊಂಡಿವೆ. ಇವು ಅಸ್ತಿತ್ವಕ್ಕೆ ಬಂದದ್ದು ಒಬ್ಬ ವ್ಯಕ್ತಿಯ ಹಿತಾಸಕ್ತಿಗಲ್ಲ, ಬದಲಾಗಿ ಇಡೀ ಸಮಾಜದ ಹಿತಾಸಕ್ತಿಯನ್ನು ಕಾಪಾಡುವುದ್ದಕ್ಕಾಗಿ. ಜೊತೆಗೆ ಒಂದನೇ ಮತ್ತು ಎರಡನೇ ಮಹಾಯುದ್ಧದ ನಂತರ ಪ್ರಪಂಚದ ಹಲವಾರು ದೇಶಗಳು ಸೇರಿ 30 ಕ್ಕಿಂತ ಹೆಚ್ಚಿನ ಕಾಯ್ದೆಗಳನ್ನು (ಅಂಶಗಳನ್ನು) ಒಪ್ಪಿಕೊಳ್ಳಲಾಯಿತು, ಆದರೆ ಇವುಗಳನ್ನು ಅನುಷ್ಠಾನ ಗೊಳಿಸಲು ಇದುವರೆಗೂ ಸಹ ಯಾವುದೇ ದೇಶಗಳು ಮುಂದಾಗಿಲ್ಲ.  ಮತ್ತು ಇಂದು ಚಾಲ್ತಿಯಲ್ಲಿರುವ ಕೇಂದ್ರ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗವು ಸಹ ಹಲ್ಲು ಕಿತ್ತಿದ ಹಾವಿನಂತೆ ವರ್ತಿಸುತ್ತಿದೆ. ಮಿಸಾ ಮತ್ತು ಯುಎಪಿಎ ಅಂತಹ ಕಾಯ್ದೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಹಾಗಾಗಿ ಸಮಾಜದ ಬದಲಾವಣೆಗೆ ಈ ಮಾನವ ಹಕ್ಕುಗಳ ಅನುಷ್ಠಾನ ಬಹಳ ಮುಖ್ಯ, ಅದನ್ನು ರಕ್ಷಿಸಲು ನೀವೆಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು. 

ಪ್ರಾಸ್ತಾವಿಕವಾಗಿ ಕಾಲೇಜಿನ ಪ್ರಾಂಶುಪಾಲರಾದ ರಜಿನಿ ಕುಮಾರಿ ಅವರು ಮಾತನಾಡುತ್ತಾ ಈ ದೇಶದಲ್ಲಿ 1970ರ ದಶಕದಲ್ಲಿ ಜಾರಿಯಾದ ತುರ್ತುಪರಿಸ್ಥಿತಿಯ ಸಂಧರ್ಭವನ್ನು ವಿವರಿಸಿದರು. ಸಿ.ಪಿ.ಡಿ.ಆರ್‌.ಎಸ್‌ನ ಜಿಲ್ಲಾ ಸಂಚಾಲಕರಾದ ಆರ್‌.ಸೋಮಶೇಖರ್ ಗೌಡ ಅವರು ಈ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. 

ಸಮಿತಿಯ ಸದಸ್ಯರಾದ ಗುರಳ್ಳಿ ರಾಜ, ಶೇಖರ್ ವಿದ್ಯಾರ್ಥಿಗಳಾದ ಠಾಕೂರ್ ನಾಯಕ್, ವಿನೋದ್ ಸೇರಿದಂತೆ ನೂರಾರು  ವಿದ್ಯಾರ್ಥಿಗಳು ಭಾಗವಹಿಸಿದ್ದರು.