ಧಾರವಾಡ 22: ಮಾನವನ ವಿಕಾಸದ ಇತಿಹಾಸದೊಂದಿಗೆ ವಿಶ್ವದ ಎಲ್ಲ ಧರ್ಮಗಳ ಮೂಲ ಸೂತ್ರವಾಗಿ ಅನುಭಾವ ಬೆಳೆದು ಬಂದಿದೆ. ಅನುಭವ ಇಂದ್ರೀಯ ಜನ್ಯವಾದರೆ ಅನುಭಾವ ಭಾವ ಹೃದಯ ಜನ್ಯ ಅದರ ಅಂತಿಮ ಗುರಿ ಆತ್ಮಾನಂದ ಪಡೆಯುವುದು. ಅನುಭಾವ ಇಂದ್ರಿಯ ಮತ್ತು ಮನಸ್ಸುಗಳಿಗೆ ಅತೀತವಾದ ಪ್ರಜ್ಞೆ ಆನಂದದ ನಿಲುವನ್ನು ಹೊಂದುವುದೇ ಅದರ ಗುರಿ. ಅದು ಬೌದ್ಧಿಕ ಜ್ಞಾನಕ್ಕೆ ವಿರೋಧಿಯಲ್ಲ. ಶಿವಶರಣರು ಅನುಭಾವಕ್ಕೆ ನೂತನ ಆವಿಷ್ಕಾರ ನೀಡಿ ಅದನ್ನು ಜನಸಾಮಾನ್ಯರಿಗೂ ತಿಳಿಯುವಂತೆ ಜನರಾಡುವ ಭಾಷೆಯಲ್ಲಿ ವಿವರಿಸಿ ಸಾಮಾಜೀಕರಣಗೊಳಿಸಿದ್ದು ದೊಡ್ಡ ಸಾಧನೆ ಎಂದು ಡಾ. ವೀರಣ್ಣ ರಾಜೂರ ಹೇಳಿದರು.
ಅವರು ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಿದ್ದ ಮಹಾಂತಪ್ಪಗಳು ಮುರುಘಾಮಠ ದತ್ತಿ ಹಾಗೂ ಮಹಾಂತಪ್ಪ ಕೋ. ಆಪ್ ಕ್ರೆಡಿಟ್ ಸೊಸಾಯಿಟಿ ದತ್ತಿ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಶರಣರ ಕಾಲಕ್ಕೆ ಅರಿವಿನ ಮಹಾ ಸ್ಪೋಟ ನಡೆಯಿತು. ಆತ್ಮದೊಂದಿಗೆ ನಡೆಯುವ ಅನುಸಂಧಾನವೇ ಅನುಭಾವ, ಆತ್ಮ ವಿದ್ಯೆ ತಾನಾರೆಂದು ತಿಳಿಯುವುದೇ ಅನುಭಾವ ಎಂಬ ಹಿನ್ನೆಲೆಯಲ್ಲಿ ಶರಣರ, ಸಂತರ ಅರವಿಂದರು, ವಿವೇಕಾನಂದ ಮತ್ತು ಇತರರ ದೃಷ್ಟಿಯಲ್ಲಿ ಅನುಭಾವದ ಪರಿಕಲ್ಪನೆಗಳು ಹೇಗಿದ್ದವೆ ಎಂಬುದರ ಜೊತೆಗೆ 'ವಚನಗಳಲ್ಲಿ ಅನುಭಾವ' ವಿಷಯ ಕುರಿತು ಉಪನ್ಯಾಸ ನೀಡುತ್ತ ಡಾ. ವಾಯ್. ಎಮ್ ಭಜಂತ್ರಿ ತಿಳಿಸಿದರು. ಶರಣರು ತಾವು ಕಂಡ ಸತ್ಯವನ್ನು ಉಂಡಸುಖವನ್ನು ಅನುಭವಿಸಿದ ಆನಂದವನ್ನು ಲೋಕಕ್ಕೆ ಹಂಚಬೇಕೆಂಬ ಹಂಬಲದಿಂದ ಕನ್ನಡ ಭಾಷೆಯಲ್ಲಿ ಅಭಿವ್ಯಕ್ತ ಪಡಿಸಿದ ಸಾಹಿತ್ಯವೇ ಅನುಭಾವ ಸಾಹಿತ್ಯವೆನಿಸಿತೆಂದು ಹೇಳಿದರು. ಆತ್ಮ ಕಲ್ಯಾಣದೊಂದಿಗೆ ಸಮಾಜದ ಕಲ್ಯಾಣವೂ ಅನುಭಾವದ ಗುರಿಯಾಗಿದೆ ಎಂದರು.
ವಿದೂಷಿ ಸುಜಾತಾ ಗುರವ ಅವರು ವಚನ ಸಂಗೀತವನ್ನು ಸಾದರ ಪಡಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಸ್ವಾಗತಿಸಿದರು. ಕಾರ್ಯದಶರ್ಿ ಪ್ರೊ. ಕೆ. ಎಸ್. ಕೌಜಲಗಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯದಶರ್ಿ ಡಾ. ಜಿನದತ್ತ ಹಡಗಲಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧ್ಯಕ್ಷ ಪ್ರೊ. ಎಸ್. ಎಸ್. ದೊಡಮನಿ ವಂದಿಸಿದರು. ದತ್ತಿದಾನಿಗಳಾದ ಸುಮಂಗಲಾ ಪಾಟೀಲ ಉಪಸ್ಥಿತರಿದ್ದರು.
ಎಸ್. ಬಿ. ಗಾಮನಗಟ್ಟಿ ಪ್ರೊ. ಮೂಲಿಮನಿ, ಚಂದ್ರಶೇಖರ ಪಾಟೀಲ, ಎಫ್. ಬಿ. ಕಣವಿ, ಶಶಿಧರ ಹಿರೇಮಠ, ಸುಜಾತಾ ಹಡಗಲಿ, ಆರತಿದೇವ ಶಿಖಾಮಣಿ, ಎಮ್. ವಾಯ್ ಸಿದ್ನಾಳ, ಪ್ರೊ ಎನ್. ಆರ್ ಬಾಳಿಕಾಯಿ, ಮುಕಂದ ಕುಲಕಣರ್ಿ ಮೊದಲಾದವರು ಉಪಸ್ಥಿತರಿದ್ದರು.