ಗೊಂದಲಗಳಿಗೆ ಅವಕಾಶವಿಲ್ಲದಂತೆ ರೈತರ ಬೆಳೆ ಸಾಲ ಮನ್ನಾ ಯೋಜನೆ ಅನುಷ್ಠಾನಗೊಳಿಸಿ: ಕುದರಿ

ಧಾರವಾಡ 19:  ಕನರ್ಾಟಕ ಸಕರ್ಾರವು ಜಾರಿಗೊಳಿಸಿರುವ ರೈತರ ಬೆಳೆಸಾಲ ಮನ್ನಾಯೋಜನೆಯನ್ನು ಬ್ಯಾಂಕ್ ಅಧಿಕಾರಿಗಳು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ರೈತರೊಂದಿಗೆ ಸಂಯಮದಿಂದ ವತರ್ಿಸಿ ವ್ಯವಸ್ಥಿತ ರೀತಿಯಲ್ಲಿ ಅನುಷ್ಠಾನಗೊಳಿಸಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ಹೇಳಿದರು.

ಅವರ ಇಂದು ಸಂಜೆ ಧಾರವಾಡ ತಾಲ್ಲೂಕ ಪಂಚಾಯತ ಸಭಾಭವನದಲ್ಲಿ ಧಾರವಾಡ ತಾಲ್ಲೂಕಿನ ವಿವಿಧ ಬ್ಯಾಂಕ್ಗಳ ಶಾಖಾ  ವ್ಯವಸ್ಥಾಪಕರೊಂದಿಗೆ ಸಭೆ ಜರುಗಿಸಿ ಮಾತನಾಡಿದರು.

ಧಾರವಾಡ ತಾಲ್ಲೂಕಿನಲ್ಲಿ ವಿವಿಧ ರಾಷ್ಟ್ರೀಕೃತ ಮತ್ತು ವಾಣಿಜ್ಯ ಬ್ಯಾಂಕುಗಳ 73 ಶಾಖೆಗಳಿದ್ದು, ಸುಮಾರು 15097 ಜನ ರೈತರು ಬೆಳೆಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಒಳಪಡುತ್ತಾರೆ. ಈ ರೈತರು ಯೋಜನೆಗೆ ಅಗತ್ಯವಿರುವ ದಾಖಲೆ, ಮಾಹಿತಿ ಸಲ್ಲಿಸಬೇಕು. ಬ್ಯಾಂಕ್ ಅಧಿಕಾರಿಗಳು ರೈತರೊಂದಿಗೆ ಸಂಯಮದಿಂದ ವತರ್ಿಸಿ ಯಾವುದೇ, ತಾಂತ್ರಿಕ ಅಥವಾ ದಾಖಲೆಗಳ ಕುರಿತು ಗೊಂದಲಗಳಿದ್ದರೆ ತಕ್ಷಣ ಸಹಾಯವಾಣಿಯನ್ನು ಸಂಪಕರ್ಿಸಬೇಕು ಮತ್ತು ಎಲ್ಲ ಬ್ಯಾಂಕ್ ಅಧಿಕಾರಿ ಹಾಗೂ ತಾಂತ್ರಿಕ ಸಿಬ್ಬಂದಿಗಳು ಇರುವ ವಾಟ್ಸ್ಫ್ ಗ್ರೂಪ್ ರಚಿಸಿದ್ದು ಅದಕ್ಕೆ ಮಾಹಿತಿ ಕಳುಹಿಸಬೇಕು.ಪ್ರತಿ ಬ್ಯಾಂಕ್ ಶಾಖೆಗೆ ಒರ್ವ ಗ್ರಾಮಲೆಕ್ಕಾಧಿಕಾರಿಯನ್ನು ನೇಮಿಸಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದು, ಅದರಂತೆ ಅವರು ಸಹ ನಿಮಗೆ ಸಹಾಯ ಮಾಡಲಿದ್ದಾರೆ. ಗ್ರಾಮೀಣ ಭಾಗದಲ್ಲಿ ಡಂಗೂರ ಸಾರುವ ಮೂಲಕ ಯೋಜನೆಯ ಮಾಹಿತಿಯನ್ನು ರೈತ ಸಮುದಾಯಕ್ಕೆ ತಲುಪಿಸುವ ಕಾರ್ಯ ಮಾಡಲಾಗುತ್ತದೆ.ಬ್ಯಾಂಕ್ ವ್ಯವಸ್ಥಾಪಕರು ಅರ್ಹ ರೈತ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕ್ ಮತ್ತು ಗ್ರಾಮ ಪಂಚಾಯತ ಕಾಯರ್ಾಲಯದ ಸೂಚನಾ ಫಲಕದಲ್ಲಿ ಲಗತ್ತಿಸಬೇಕು ಎಂದು ಅವರು ಹೇಳಿದರು.

ಧಾರವಾಡ ತಾಲ್ಲೂಕಾ ಬ್ಯಾಂಕರ್ಸ್ ಸಮಿತಿಯ ಸಂಯೋಜಕ ವಿಜಯ ಬ್ಯಾಂಕ್ ಮುಖ್ಯ ಶಾಖೆಯ ವ್ಯವಸ್ಥಾಪಕ ಬಸವರಾಜ ಬೆಲ್ಲದ ಮಾತನಾಡಿ, ಎಲ್ಲ ಬ್ಯಾಂಕ್ ಶಾಖೆಗಳು ಈ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಿದ್ದತೆ ಮಾಡಿಕೊಂಡಿವೆ. ಕಳೆದ ಎರಡು ಮೂರು ದಿನಗಳಿಂದ ರೈತರ ಸಂಖ್ಯೆ ಕಡಿಮೆ ಇತ್ತು ಅದರೆ ಇಂದಿನಿಂದ ಬ್ಯಾಂಕ್ ಶಾಖೆಗಳಿಗೆ ಫಲನುಭವಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಅವರಿಗೆ ಯೋಜನೆಗೆ ಅಗತ್ಯವಿರುವ ದಾಖಲೆ ಮತ್ತು ಅಗತ್ಯ ಮಾಹಿತಿಯನ್ನು ನೀಡುವ ವ್ಯವಸ್ಥೆಯಾಗಬೇಕು ಎಂದು ಹೇಳಿದರು.

ಅಟಲ್ ಜಿ ಜನಸ್ನೆಹಿ ಕೇಂದ್ರ ಯೋಜನೆಯ ಜಿಲ್ಲಾ ತಾಂತ್ರಿಕ ಸಮಾಲೊಚಕ ವಿಕಾಸ ಪೂಜಾರ ಮಾತನಾಡಿ, ರೈತರ ಬೆಳೆಸಾಲ ಮನ್ನಾ ಯೋಜನೆ ಅನುಷ್ಠಾನಕ್ಕಾಗಿ ಬ್ಯಾಂಕ್ ಅಧಿಕಾರಿಗಳಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ರೈತರ ವಿವರಗಳನ್ನು ದಾಖಲಿಸುವಾಗ ಯಾವುದೆ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಸಹಾಯವಾಣಿ ಅಥವಾ ಇಮೇಲ್ ಮತ್ತು ಧಾರವಾಡ ತಾಲ್ಲೂಕಿನ ಬ್ಯಾಂಕರ್ಸ್ ವಾಟ್ಸಪ್ ಗ್ರೂಪಿಗೆ ಮಾಹಿತಿ ಕಳುಹಿಸಬೇಕು.  ರೈತರಿಗೆ ಹೆಚ್ಚಿನ ಮಾಹಿತಿ ಅಗತ್ಯವಿದಲ್ಲಿ ಸಹಾಯವಾಣಿ ಸಂಪಕರ್ಿಸುವಂತೆ ತಿಳಿಸಬೇಕೆಂದು ಅವರು ಹೇಳಿದರು.

ಗ್ರಾಮೀಣ ಪೊಲೀಸ್ ಠಾಣೆಯ ಪ್ರಭಾರ ಪಿ.ಎಸ್.ಐ. ಪರಮೇಶ್ವರ ಕವಟಗಿ ಮಾತನಾಡಿ, ಬ್ಯಾಂಕ್ ವ್ಯವಸ್ಥಾಪಕರು ರೈತರೊಂದಿಗೆ ಶಾಂತದಿಂದ ವತರ್ಿಸಿ, ಮಾಹಿತಿ ನೀಡಬೇಕು. ಅಗತ್ಯವಿರುವ ಬ್ಯಾಂಕ್ ಶಾಖೆಗಳಿಗೆ ಸೂಕ್ತ ಪೊಲೀಸ್ ಬಂದೊಬಸ್ತ ನೀಡುವಂತೆ ಮೇಲಾಧಿಕಾರಿಗಳಿಂದ ಆದೇಶವಾಗಿದ್ದು, ಬ್ಯಾಂಕ್ ಅಧಿಕಾರಿಗಳು ತಿಳಿಸಿದಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನೇಮಿಸಲಾಗುವುದೆಂದು ಅವರು ಹೇಳಿದರು.

ಸಭೆಯಲ್ಲಿ ತಾಲ್ಲೂಕಿನ ವಿವಿಧ ಬ್ಯಾಂಕ್ ಶಾಖೆಗಳ ವ್ಯವಸ್ಥಾಪಕರು, ಕಂದಾಯ ನಿರೀಕ್ಷಕರು, ಆಹಾರ  ಇಲಾಖೆಯ ಅಧಿಕಾರಿಗಳು ಮತ್ತು ಇತರರು ಭಾಗವಹಿಸಿದ್ದರು.

ವಿವಿಧ ಬ್ಯಾಂಕ್ ಶಾಖೆಗಳಿಗೆ ಎಸಿ, ತಹಶೀಲ್ದಾರ ಭೇಟಿ : ರೈತ ಬೆಳೆಸಾಲ ಮನ್ನಾ ಯೋಜನೆಯ ಅನುಷ್ಠಾನದ ಕುರಿತು ಧಾರವಾಡ ಉಪವಿಭಾಗಾಧಿಕಾರಿ ಮಹ್ಮದ ಜುಬೇರ ಮತ್ತು ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿ ಅವರು ಇಂದು ಬೆಳಿಗ್ಗೆ ಧಾರವಾಡ ತಾಲ್ಲೂಕಿನ ವಿವಿಧ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಬ್ಯಾಂಕ್ ಅಧಿಕಾರಿಗಳಿಗೆ ಹಾಗೂ ರೈತರಿಗೆ ಯೋಜನೆಯ ಕುರಿತು ಮಾಹಿತಿ, ತಿಳುವಳಿಕೆ ನೀಡಿದರು.

ಎಸಿ ಮಹ್ಮದ ಜುಬೇರ ಅವರು ಧಾರವಾಡ ಎ.ಪಿ.ಎಂ.ಸಿ. ಯಲ್ಲಿರುವ ಕೆ.ವಿ.ಜಿ.ಬಿ ಬ್ಯಾಂಕ್ ಶಾಖೆ, ಹಾರೋಬೆಳವಡಿಯ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪರಿಶೀಲಿಸಿದರು. ಮತ್ತು ಅಮ್ಮಿನಭಾವಿಯ ಯುಕೋ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ರೈತರಿಗೆ ದಾಖಲೆಗಳ ಕುರಿತು ಮಾಹಿತಿ ನೀಡಿ, ಶಾಖೆಯಲ್ಲಿ ಇರುವ ಅರ್ಹ ರೈತ ಫಲಾನುಭವಿಗಳ ಪಟ್ಟಿಯನ್ನು ಬ್ಯಾಂಕ್ ಮತ್ತು ಅಮ್ಮಿನಭಾವಿ ಗ್ರಾಮ ಪಂಚಾಯತ ಕಚೇರಿಯ ಸೂಚನಾ ಫಲಕದಲ್ಲಿ ಲಗತ್ತಿಸಲು ಕ್ರಮ ಕೈಗೊಂಡರು. 

ಧಾರವಾಡ ತಹಶೀಲ್ದಾರ ಪ್ರಕಾಶ ಕುದರಿಯವರು ನರೇಂದ್ರ, ಮುಮ್ಮಿಗಟ್ಟಿ, ಗರಗ, ಕೋಟುರ ಬ್ಯಾಂಕ್ ಶಾಖೆಗಳಿಗೆ ಭೇಟಿ ನೀಡಿ ಬ್ಯಾಂಕ್ ವ್ಯವಸ್ಥಾಪಕರಿಗೆ ರೈತರ ಅಗತ್ಯ ದಾಖಲೆ ಹಾಗೂ ಮಾಹಿತಿಯನ್ನು ನೀಡುವಂತೆ ಸೂಚಿಸಿದರು. ಮತ್ತು ಡಾಟಾ ಎಂಟ್ರಿ ಮಾಡುವ ಬ್ಯಾಂಕ್ ಸಿಬ್ಬಂದಿಗಳೊಂದಿಗೆ ಉಪಸ್ಥಿತರಿದ್ದು, ಮಾಹಿತಿ ದಾಖಲಾತಿ ಪ್ರಗತಿಯನ್ನು ಪರಿಶೀಲಿಸಿದರು. ಬ್ಯಾಂಕಿಗೆ ಆಗಮಿಸಿದ್ದ ರೈತರಿಗೆ ಸಾವಧಾನದಿಂದ ವತರ್ಿಸಿ, ಬ್ಯಾಂಕ್ ಸಿಬ್ಬಂದಿಗಳಿಗೆ ಸಹಕಾರ ನೀಡುವಂತೆ ವಿನಂತಿಸಿದರು.