ಇಂಪ್ಯಾಕ್ಟ್: ಒಂದೇ ಸುದ್ದಿಗೆ ಬಗೆಹರಿಯಿತು ದೊಡ್ಡ ಸಮಸ್ಯೆ, ಹ್ಯಾಂಡ್ ಪಂಪ್ಗೆ ಬಂತು ಜೀವ, ಕಂಬಾರುಗಟ್ಟಿಯ ಜನರಿಗೆ ಉಲ್ಲಾಸ!
Impact: A big problem was solved with a single piece of news, the hand pump came back to life, and
ಲೋಕದರ್ಶನ
ಮುಂಡಗೋಡ 10 : ಅದು ಸುಮಾರು ಸಾವಿರ ಜನ ಬದುಕೋ ಜಾಗ, ಮನುಷ್ಯನ ಅತೀವ ಅವಶ್ಯಕತೆ ಏನೆಂದರೆ ನೀರು, ಅಂತಹ ನೀರಿಗೆ ಅಲ್ಲಿ ತತ್ವಾರ ಬಂದಿತ್ತು. ಆದರೆ ನಿಮ್ಮ ಜೊತೆ ಯಾವಾಗಲೂ ನಿಲ್ಲುವ ಜವಾಬ್ದಾರಿ ಹೊತ್ತಿರುವ ನಮಗೆ ಜನರ ಸಂವೇದನೆ ಅರ್ಥ ಮಾಡ್ಕೊಳ್ಳೋ ಶಕ್ತಿ ಇದೆ. ಆ ಶಕ್ತಿಯೇ ಶಬ್ದವಾಗಿ ಒಂದು ಖಡಕ್ ವರದಿ ತಯಾರಾಗಿತ್ತು, ಪರಿಣಾಮ ಇವತ್ತು ಆ ಓಣಿಯ ಜನರಿಗೆ ‘ಜಲ ಭಾಗ್ಯ’ ಬಂದಿದೆ.ಮುಂಡಗೋಡ ತಾಲೂಕಿನ ಕಂಬಾರುಗಟ್ಟಿ ವ್ಯಾಪ್ತಿಯ ಬೋರ್ ವೆಲ್ ಒಂದು ಹಾಳಾಗಿ ಜಮಾನಾನೇ ಆಗಿತ್ತು, ದಿಕ್ಕಿಲ್ಲ, ದೆಸೆಯಿಲ್ಲ ಎಂಬಂತೆ ತುಕ್ಕು ಹಿಡಿಯುತ್ತಾ ಬಿದ್ದಿದ್ದ ಬೋರ್ವೆಲ್ ಒಂದು ಬದಿಯಾದರೆ ದೂರದೂರದಿಂದ ನೀರು ಹೊತ್ತು ಸಾಗೋ ಹೆಂಗಸರು ಮತ್ತೊಂದು ಕಡೆ. ಪಟ್ಟಣದ ಪ್ರಮುಖ ಭಾಗದಲ್ಲಿರೋ ಕಾರಣ ಸಂಜೆಯಾದಾಗ ದಣಿವಾರಿಸಿಕೊಳ್ಳೋಕೆ ಬಡ ಕೂಲಿಯಾಳುಗಳು ಇದೇ ಬೋರ್ ವೆಲ್ ನೀರಿಗೆ ಕೈ ಚಾಚುತ್ತಿದ್ದರು.
ಆ ಕೆಟ್ಟುಹೋದ ಬೋರ್ ನಿಂದ ಕಂಬಾರುಗಟ್ಟಿಯಲ್ಲಿ ನೀರಿನ ಹಾಹಾಕಾರ ಉಂಟಾಗಿತ್ತು, 30-40 ಮನೆಗಳ 300 ಜನ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಬೀದಿಗಿಳಿದರು, ಕೊಡ ಇಟ್ಟು ಪ್ರತಿಭಟನೆ ಮಾಡಿದರು. ಉಹೂಂ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ ಅಧಿಕಾರಿಗಳು, ಯಾವಾಗ ನಮ್ಮ ಲೋಕದರ್ಶನ ಪತ್ರಿಕೆ ಈ ವಿಷಯಕ್ಕೆ ತಲೆ ಹಾಕಿತೋ ಆಗ ಅದು ವೈರಲ್ ಆಯಿತು. ಜನರು ಬಾಯಿಂದ ಬಾಯಿಗೆ ವಿಷಯ ಸಾಗಿ ಇಂದು ನಾಲ್ಕೈದು ಜನ ರಿಪೇರಿ ಮಾಡಿ ಬೋರ್ ವೆಲ್ ಅನ್ನು ಸರಿಮಾಡಿದ್ದಾರೆ. ಕಳೆದ 30 ವರ್ಷದಿಂದ ಜನರ ಜೀವನಾಡಿಯಾಗಿದ್ದ ಹ್ಯಾಂಡ್ ಪಂಪ್ ಗೆ ಮರು ಜೀವ ಬಂದಿದೆ. ಅಂತೂ ಇಂತೂ ಈ ಬಿರು ಬೇಸಿಗೆಯಲ್ಲಿ ದಣಿದಿದ್ದ ಜೀವಗಳಿಗೆ ತುಸು ನೆಮ್ಮದಿ ಹಾಗೂ ನಮ್ಮ ವರದಿ ಗೆದ್ದಿತು, ಅಧಿಕಾರಿಗಳು ಸಹಕರಿಸಿದರು ಎಂಬಲ್ಲಿಗೆ ಬೋರ್ ವೆಲ್ ಪ್ರಸಂಗ ಸುಖಾಂತ್ಯ ಕಂಡಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 