ಅನೈತಿಕ ಸಂಬಂಧ: ಗಂಡನನ್ನೆ ಕೊಲೆ ಮಾಡಿದ ಪತ್ನಿ
ರಾಯಬಾಗ 09: ಅನೈತಿಕ ಸಂಬಂಧ ಹಿನ್ನೆಲೆ ಗಂಡನನ್ನೆ ಕೊಲೆ ಮಾಡಿ ಬಾವನಸೌಂದತ್ತಿ ಗ್ರಾಮದ ಕೃಷ್ಣಾನದಿಯಲ್ಲಿ ಬೀಸಾಕಲಾಗಿದೆ ಎಂದು ಮೃತ ವ್ಯಕ್ತಿಯ ಅಕ್ಕ ರಾಯಬಾಗ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ದೂರು ದಾಖಲಿಸಿದ್ದಾರೆ.
ಮೂಲತಹ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಅಳಗಿನಾಳ ನಿವಾಸಿ ಹಾಲಿ ವಸ್ತಿ ಬಸ್ತವಾಡ ಗ್ರಾಮದಲ್ಲಿ ನೆಲೆಸಿದ್ದ ಅಪ್ಪಾಸಾಹೇಬ್ ಓಲೆಕಾರ(45) ಮೃತ ವ್ಯಕ್ತಿ ಎಂದು ತಿಳಿದು ಬಂದಿದೆ. ತಲೆಗೆ ಬಲವಾದ ಹೊಡೆತದಿಂದ ವ್ಯಕ್ತಿ ಮೃತನಾಗಿದ್ದಾನೆ. ಘಟನಾ ಸ್ಥಳಕ್ಕೆ ರಾಯಬಾಗ ಪೊಲೀಸರು ಭೇಟಿ ನೀಡಿ ಪರೀಶೀಲಿಸಿದ್ದಾರೆ.
ಕೊಲೆಯಾದ ವ್ಯಕ್ತಿಯ ಹೆಂಡತಿ ಸಿದ್ದವ್ವ ಅಪ್ಪಾಸಾಹೇಬ್ ಓಲೆಕಾರ ಅವರು ಬಸ್ತವಾಡ ಗ್ರಾಮದ ಗಣಪತಿ ಪರಸಪ್ಪ ಕಾಂಬಳೆ ಜೊತೆ ಅನೈತಿಕ ಸಂಬಂಧ ಇದ್ದು, ಅದನ್ನು ಅಪ್ಪಾಸಾಹೇಬ್ ಬಿಡು ಎಂದಿದ್ದರಿಂದ ಆತನನ್ನು ಕೊಲೆ ಮಾಡಿದ್ದಾರೆ ಎಂದು ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿರುವ ಅಪ್ಪಾಸಾಹೇಬ್ ಅವರ ಅಕ್ಕ ಮಹಾನಂದಾ ಸಿದ್ದಪ್ಪ ತೋರಣ್ಣವರ ಅವರು ರಾಯಬಾಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಿಪಿಐ ಬಿ ಎಸ್ ವಂಟಮೂರೆ, ಪಿಎಸ್ ಐ ಶಿವಶಂಕರ ಮುಖರಿ ನೇತೃತ್ವದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಗುರುವಾರ ತಾಲೂಕಿನ ಬಾವನಸೌಂದತ್ತಿ ಗ್ರಾಮದ ಕೃಷ್ಣಾನದಿಯಲ್ಲಿ ಅಪರಿಚಿತ ಮೃತ ದೇಹ ಪತ್ತೆಯಾಗಿತ್ತು.