ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶ: ಆರೋಪಿ ಬಂಧನ
ಜಮಖಂಡಿ 31: ತಾಲೂಕಿನ ಖಾಜೀಬೀಳಗಿ ಗ್ರಾಮದ ಸಂಜು ಮಲ್ಲಪ್ಪ ಮಾಳಶೆಟ್ಟಿ ಇವರ ತೋಟದ ಮನೆಯ ಪತ್ರಾಸ್ ಶೆಡ್‌ನಲ್ಲಿ 29 ಪ್ಲಾಸ್ಟಿಕ್ ಬ್ಯಾಗಗಳಲ್ಲಿ ಸಂಗ್ರಹಿಸಲಾಗಿದ್ದ ಅಂದಾಜು ರೂ. 3 ಲಕ್ಷ ಮೌಲ್ಯದ 30, 88 ಕೆ,ಜಿ ಒಣಗಿದ ಗಾಂಜಾವನ್ನು ಅಬಕಾರಿ ಇಲಾಖೆಯ ಅಧಿಕಾರಿಗಳು ರಾತ್ರಿ ಸಮಯದಲ್ಲಿ ದಾಳಿ ಮಾಡಿ ವಶಪಡಿಸಿಕೊಂಡಿರುವ ಘಟನೆ ನಡೆದಿದೆ.
ತಾಲೂಕಾ ವಲಯ ಕಚೇರಿಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡು ಗಾಂಜಾ ವಶಪಡಿಸಿಕೊಂಡು ಆರೋಪಿ ಸಂಜು ಮಲ್ಲಪ್ಪ ಮಾಳಶೆಟ್ಟಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ದಾಳಿಯಲ್ಲಿ ಅಬಕಾರಿ ನೀರೀಕ್ಷಕ ಆದಿನಾಥ ನರಸಗೊಂಡ, ಸಿಬ್ಬಂದಿಗಳಾದ ಮಹಮ್ಮದ ಬಾಗವಾನ, ಆನಂದ ಬಾಗಿ, ಮಹೇಶ ಇರಳಿ, ಹನಮಂತ ಕಸರಡ್ಡಿ, ಕಿರಣ ವಡೆಯರ, ಪ್ರಕಾಶ ಮುಧೋಳ ಇದ್ದರು.