ಅಕ್ರಮ ಗಾಂಜಾ ಮಾರಾಟ: ವ್ಯಕ್ತಿಯ ಬಂಧನ

ಕೊಪ್ಪಳ 19: ಕೊಪ್ಪಳ ಅಬಕಾರಿ ಉಪ ಅಧೀಕ್ಷಕರ ನೇತೃತ್ವದ ತಂಡವು ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ ವ್ಯಕ್ತಿಯನ್ನ ಬಂಧಿಸಿದೆ.   

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಿರೂಪಾಪುರ ಗಡ್ಡಿಯಿಂದ ಸಾಣಾಪುರ ಗ್ರಾಮಕ್ಕೆ ಹೋಗುವ ರಸ್ತೆ ಬದಿಯಲ್ಲಿ (ಸಾಣಾಪುರ ಗ್ರಾಮದ ಹತ್ತಿರ ಇರುವ) ನಯನ ಫಾಸ್ಟ್ ಫುಡ್ ಹೋಟಲ್ ಎದುರುಗಡೆಯ ಜಾಗೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ನಿಂಗಪ್ಪ ತಂದೆ ಯರಿಸ್ವಾಮಿ ಹರಗೋಲ (35) ಎಂಬ ವ್ಯಕ್ತಿಯನ್ನು ಕೊಪ್ಪಳ ಅಬಕಾರಿ ಉಪ ಅಧೀಕ್ಷಕರ ನೇತೃತ್ವದ ತಂಡವು ಶುಕ್ರವಾರದಂದು ಬಂಧಿಸಿದೆ.  ಅಲ್ಲದೇ ಅಬಕಾರಿ ತಂಡದವರು ಆರೋಪಿತನಿಂದ ಸುಮಾರು 25000 ಮೌಲ್ಯದ 800 ಗ್ರಾಂ. ಗಾಂಜಾವನ್ನ ವಶಡಿಸಿಕೊಂಡಿದ್ದಾರೆ.  

ಆರೋಪಿತನ ವಿರುದ್ಧ ಕಲಂ 8(ಬಿ),8(ಸಿ),20(ಬಿ)25,27,28,29 ರಡಿ ಪ್ರಕರಣ ದಾಖಲಿಸಲಾಗಿದೆ.  ಅಬಕಾರಿ ಉಪ ಅಧೀಕ್ಷಕ ದೇಮಣ್ಣ, ಜಿಲ್ಲಾ ವಿಚಕ್ಷಣಾದಳ ಅಬಕಾರಿ ನಿರೀಕಕ ಮಹದೇವ ಪೂಜಾರಿ, ಅಬಕಾರಿ ರಕ್ಷಕ ಸಿಬ್ಬಂಧಿಗಳಾದ ಶಿವಪುತ್ರಪ್ಪ, ನಾಗಮುನಿಸ್ವಾಮಿ, ಜಕ್ಕಪ್ಪ, ಟಿ. ಶ್ರೀಧರ, ಹುಸೇನ್ ಬಾಷಾ ಮತ್ತು ಶಿವಾನಂದ ಇದೇ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.