ಕಾಗವಾಡ 26: ಬೆಳಗಾವಿಯ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಇವರ ವತಿಯಿಂದ ಕಾಗವಾಡ ತಾಲೂಕಿನ ಶಿರಗುಪ್ಪಿ ಗ್ರಾಮದ ಗ್ರಾಮ ಪಂಚಾಯತಿ ಅಧ್ಯಕ್ಷ ಈಕಬಾಲ ಕನವಾಡೆ ಇವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.
ರವಿವಾರರಂದು ಬೆಳಗಾವಿಯಲ್ಲಿ ಜರುಗಿರುವ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ಇವರಿಂದ ಸಹಕಾರರತ್ನ ಪ್ರಶಸ್ತಿ ನೀಡಿ, ಗೌರವಿಸಿದರು. ಸಾನಿಧ್ಯ ಮುರಗೋಡ ಮಠದ ನೀಲಕಂಠ ಸ್ವಾಮಿಜಿ, ಮುಗೊಳಖೋಡ ಶ್ರೀಕ್ಷೇತ್ರ ಮಠದ ಡಾ.ಮುರಗೇಂದ್ರ ಸ್ವಾಮಿಜಿ ವಹಿಸಿದರು.
ಶಿರಗುಪ್ಪಿ ಗ್ರಾಪಂ ಅಧ್ಯಕ್ಷ ಈಕಬಾಲ ಕನವಾಡೆ ಇವರು ಗ್ರಾಮದ ಸವರ್ಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಇಲ್ಲಿಯ ಶುದ್ಧ ಕುಡಿಯುವ ನೀರು, ಸುಸಜ್ಜಿತ ರಸ್ತೆ, ಚರಂಡಿಗಳು ನಿಮರ್ಾಣ ಮಾಡಿದ್ದು ಗ್ರಾಮದ ಸವರ್ಾಂಗೀಣ ಅಭಿವೃದ್ಧಿ ಕಂಡು ರಾಜ್ಯ ಮಟ್ಟದ ಅತ್ಯುತ್ತಮ ಪಂಚಾಯತಿ ಎಂಬ ಪ್ರಶಸ್ತಿ ಪಡೆದಿದ್ದಾರೆ. ಅಲ್ಲದೇ ಇಲ್ಲಿಯ ವಿವಿಧ ಸಂಘ ಸಂಸ್ಥೆಗಳಲ್ಲಿ ಅತ್ಯುತ್ತಮ ನಿದರ್ೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಇದನ್ನು ಗಮನಿಸಿ ಆಧ್ಯಕ್ಷ ಈಕಬಾಲ ಕನವಾಡೆ ಇವರಿಗೆ ಸಹಕಾರರತ್ನ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.
ಬೆಳಗಾವಿಯ ಸಂಸದ ಸದಸ್ಯ ಸುರೇಶ ಅಂಗಡಿ ಇವರಿಂದ ಪ್ರಶಸ್ತಿ ವಿತರಿಸಲಾಯಿತು. ಗೌರವಾನ್ವಿತ ಬೆಳಗಾವಿ ಜಿಲ್ಲಾ ಹಾಗೂ ಸತ್ರ ನ್ಯಾಯಧೀಶ ಮರಳುಸಿದ್ಧಾರಾಧ್ಯ ಎಚ್.ಜಿ.,ಬೆಳಗಾವಿ ಪೊಲೀಸ್ ಆಯುಕ್ತರು ಡಾ. ಡಿ.ಸಿ.ರಾಜಪ್ಪಾ, ಬೆಳಗಾವಿ ರಾ.ಚ್.ವ್ಹಿ.ವ್ಹಿ, ಕುಲಸಚಿವ ಡಾ. ರಂಗರಾಜ ವನದುರ್ಗ, ಮಾಜಿ ಸಚಿವ ಶಶಿಕಾಂತ ನಾಯಿಕ, ಪ್ರತಿಷ್ಠಾನದ ಅಧ್ಯಕ್ಷ ಶಶೀಧರ ಘೀವಾರಿ, ಉಪಾಧ್ಯಕ್ಷ ವ್ಹಿ.ಬಿ.ದೊಡ್ಡಮನಿ, ಸಂಚಾಲಕ ರುದ್ರಣ್ಣಾ ಚಂದರಗಿ ಸೇರಿದಂತೆ ಅನೇಕ ಗಣ್ಯರು ಇದ್ದರು.
ಸಮಾರಂಭದಲ್ಲಿ ಶಿರಗುಪ್ಪಿ ಗ್ರಾಪಂ ಸದಸ್ಯ ವಿದ್ಯಾಧರ ಕಾಂಬಳೆ, ರಾಮು ಕಾಂಬಳೆ, ಬಾಳಾಸಾಹೇಬ ಕಾಟಕರ, ಸುರೇಶ ವಡ್ಡರ, ಭೀಮಾಶಂಕರ ಧನಧರಗಿ, ಪದ್ಮನ್ನಾ ಕುಂಬಾರ ಪಾಲ್ಗೊಂಡಿದ್ದರು.