ಆಟೋ ಚಾಲಕರ ಮತ್ತು ಮಾಲಕರ ಸಂಘದಿಂದ ರಮಜಾನ್ ಪ್ರಯುಕ್ತ ಇಫ್ತಾರ ಕೂಟ

Iftar party on the occasion of Ramadan by Auto Drivers and Owners Association

ಆಟೋ ಚಾಲಕರ ಮತ್ತು ಮಾಲಕರ ಸಂಘದಿಂದ ರಮಜಾನ್ ಪ್ರಯುಕ್ತ ಇಫ್ತಾರ ಕೂಟ

ಕೊಪ್ಪಳ   16:  ನಗರದ ಪ್ರಮುಖ ಜವಾಹರ ರಸ್ತೆಯಲ್ಲಿರುವ ಯೂ ಸೂಫಿ ಯ ಮಸೀದಿ ಆವರಣದಲ್ಲಿ ಶನಿವಾರ ಸಂಜೆ ವೇಳೆಗೆ ಮುಸ್ಲಿಂ ಸಮುದಾಯದ ಪವಿತ್ರ ರಂಜಾನ್ ಮಾಸಾಚರಣೆ ಪ್ರಯುಕ್ತ ವೃತ ರೋಜ ದಾರ್ ಮುಸ್ಲಿಂ ಬಾಂಧವರಿಗೆ ಕೊಪ್ಪಳದ ಆಟೋ ಚಾಲಕರ ಮತ್ತು ಮಾಲಕರ ಸಂಘದಿಂದ ಇಫ್ತಾರ್ ಕೋಟ ಏರಿ​‍್ಡಸಲಾಗಿತ್ತು, ಮಸೀದಿಯ ಪೇಶ್ ಇಮಾಮ್ ಮುಫ್ತಿ ಮೌಲಾನ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ರವರು ವಿಶೇಷ ಪ್ರಾರ್ಥನೆ ನಡೆಸಿ ಆಟೋ ಚಾಲಕರ ಮತ್ತು ಮಾಲಕರ ಸಂಘದ ಪದಾಧಿಕಾರಿಗಳಿಗೆ ಶುಭ ಆಶೀರ್ವಾದ ನೀಡಿದರು, ಈ ಸಂದರ್ಭದಲ್ಲಿ ಸಂಘದ ಗೌರವ ಅಧ್ಯಕ್ಷರಾದ ಎಂ ಮಾನ್ವಿ ಪಾಶಾ ಅಧ್ಯಕ್ಷ ಗವಿಸಿದ್ದಪ್ಪ ಚಾಕ್ರಿ ಉಪಾಧ್ಯಕ್ಷ ಖಾಜಾಸಾಬ್ ಡ್ರೈವರ್, ಪ್ರಧಾನ ಕಾರ್ಯದರ್ಶಿ ನಜೀರ್ ಅಹಮದ್ ಶರೀಫ್, ಇತರ ಪದಾಧಿಕಾರಿಗಳಾದ ದಾದಾಪೀರ್, ತನ್ವೀರ್ ಪಾಷಾ, ಮುಧಸ್ಸೀರ್, ಯೂಸುಫ್ ,ಶರಣಪ್ಪ ಅಂಗಡಿ, ನಜೀರ್, ಮರ್ದಾನ್ ಸಾಬ್ ಕೋತ್ವಾಲ್ ,ನಜೀರ್ ಎಸ್, ಇಸ್ಮಾಯಿಲ್ ಅರಗಂಜಿ ,ಸ್ವಾಮಿ ಮೇಟಿ ,ಮೆಹಬೂಬ್ ಸಾಬ್ ದೇವರಾಜ ಅರಸ್ ಕಾಲೋನಿ, ಸೇರಿದಂತೆ ಅನೇಕರು ಪಾಲ್ಗೊಂಡು ಇಫ್ತಾರ ಕೋಟ ಯಶಸ್ವಿಯಾಗಿ ಆಚರಿಸಿದರು,