ಪ್ರವಚನಗಳನ್ನು ಆಲಿಸಿದರೆ ಚಿಂತೆಗಳು ದೂರ: ಸಚಿವ ಆರ್‌.ಬಿ.ತಿಮ್ಮಾಪೂರ

If you listen to the sermons, worries go away: Minister RB Thimmapura

ಪ್ರವಚನಗಳನ್ನು ಆಲಿಸಿದರೆ ಚಿಂತೆಗಳು ದೂರ: ಸಚಿವ ಆರ್‌.ಬಿ.ತಿಮ್ಮಾಪೂರ 

ಜಮಖಂಡಿ 13: ಮನುಷ್ಯ ಪ್ರತಿನಿತ್ಯ ಚಿಂತೆಯಲ್ಲಿ ಇರುತ್ತಾನೆ. ಚಿಂತೆಗಳು ದೂರವಾಗಬೇಕಾದರೆ ಮಠ, ಮಂದಿರಗಳಲ್ಲಿ ನಡೆಯುವ ವೇದಾಂತ ಪರಿಷತನಲ್ಲಿ ಶರಣರ, ಸಾಹಿತ್ಯ, ಪ್ರವಚನಗಳನ್ನು ಆಲಿಸಬೇಕು. ಎಲ್ಲರ ಬದುಕನ್ನು ಬದಲಾವಣೆ ಮಾಡುವ ಕೆಲಸ ಮಠದ ಶ್ರೀಗಳಿಂದ ಮಾತ್ರ ಸಾಧ್ಯ ಎಂದು ಅಬಕಾರಿ ಸಚಿವ ಆರ್‌.ಬಿ.ತಿಮ್ಮಾಪೂರ ಹೇಳಿದರು. 

ನಗರದ ರುದ್ರಸ್ವಾಮಿ ಪೇಠದಲ್ಲಿ ನಡೆದ ರುದ್ರಾವಧೂತರ 94 ನೇ ಪುಣ್ಯಾರಾಧನೆ ಹಾಗೂ 39ನೇ ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಮಾತನಾಡಿ ಅವರು, ಮನಸಿಗೆ ನೆಮ್ಮದಿ ದೊರಯಬೇಕಾದರೆ ಆಧ್ಯಾತ್ಮಿಕ ಕಡೆಗೆ ಒಲವು ತೋರಿಸಬೇಕು. ಸುಖ, ಶಾಂತಿ, ನೆಮ್ಮದಿಯನ್ನು ನೀಡುತ್ತದೆ. ಹಾನಿ ಮಾಡಿಕೊಳ್ಳಬೇಡಿ ಹುಚ್ಚಪ್ಪ ಗಳಿರಾ ಎಂದು ವಚನ ಹೇಳಿದರು. ಭಜನಾ ಪದಗಳು ಅರ್ಥ ಗರ್ಭಿತವಾಗಿರುತ್ತವೆ. ಇಂತಹ ಪದಗಳನ್ನು ಕೇಳುತ್ತಾ ಇರಬೇಕು ಅನಿಸುತ್ತದೆ. ಹಂತಿ ಪದಗಳು, ಜೋಗುಳ ಹಾಡು, ಜಾನಪದ, ಡೊಳ್ಳು ಹೀಗೆ ಎಲ್ಲ ಕಲೆಗಳು ಮಾಯವಾಗುತ್ತಿವೆ. ಇಂದಿನ ಮಕ್ಕಳಿಗೆ ದೂರವಾಗಿದ್ದಾವೆ. ಮಕ್ಕಳನ್ನು ಬೇರೆ ಕಡೆಗೆ ಇಟ್ಟು ತಾಯಿ ಮಕ್ಕಳನ್ನು ದೂರ ಮಾಡಿ ಮಕ್ಕಳಿಗೆ ಶಿಕ್ಷಣ ಕಲಿಸುವ ಕಾಲ ಬಂದಿದೆ. ಆದರೆ ನಮ್ಮಗೆ ಜನ್ಮ ನೀಡಿದ ಸ್ಥಳದಲ್ಲಿ ಶಿಕ್ಷಣ ಮುಗಿಸಿದರೆ ಮಾತ್ರ ತಂದೆ, ತಾಯಿಗಳ ಪ್ರೀತಿ ವಾತ್ಸಲ್ಯ ದೊರೆಯುತ್ತದೆ. ಪ್ರತಿಯೊಬ್ಬರೂ ಪ್ರವಚನ ಕೀರ್ತನ ಕೇಳಿ ಶ್ರೀಗಳ ದರ್ಶನ ಆಶೀರ್ವಾದ ಪಡೆದುಕೊಂಡರೆ ಮಾತ್ರ ಜೀವನ ಸುಖಮಯವಾಗುತ್ತದೆ ಎಂದರು. ವೇದಿಕೆಯಲ್ಲಿ ರುದ್ರಾವಧೂತ ಮಠದ ಶ್ರೀಗಳು ಸೇರಿದಂತೆ ವಿವಿಧ ಮಠಾಧೀಶರು ಇದ್ದರು.