ಶ್ರದ್ಧೆಯಿಂದ ಕಲಿತರೆ ಯಶಸ್ಸು ಕಟ್ಟಿಟ್ಟ ಬುತ್ತಿ: ಡಾ.ಬಾಗೋಜಿ

ಲೋಕದರ್ಶನ ವರದಿ

ಬೆಳಗಾವಿ 06:  ಯಶಸ್ಸು ಎನ್ನುವುದು ತಾನೇ ತಾನಾಗಿ ಬಂದು ಒಲಿಯುವುದಿಲ್ಲ ಅದಕ್ಕೆ ನಿತ್ಯ ಪರಿಶ್ರಮಬೇಕು. ಪ್ರತಿಯೊಬ್ಬರು ಗೆಲುವು ಸಾದಿಸಬೇಕೆಂದು ಬಯಸುತ್ತಾರೆ ಆದರೆ ಅದಕ್ಕೆ ಎಷ್ಟು ಜನ ಸಿದ್ಧರಾಗಿ ಬಂದಿರುತ್ತಾರೆ ಎನ್ನುವುದು ಬಹಳ ಪ್ರಾಮುಖ್ಯವಾಗಿದೆ. ಗೆಲುವು ಅದೃಷ್ಠವಲ್ಲ ಅದು ಕಠಿಣ ಶ್ರಮ ಮತ್ತು ತಾಳ್ಮೆಯ ಫಲವಾಗಿದೆ. ನಾವು ಮಾಡುವ ಕೆಲಸದಲ್ಲಿ ಶ್ರದ್ಧೆಯಿದ್ದರೆ ನಮ್ಮ ಯಶಸ್ಸು ಯಾವ ಕ್ಷೇತ್ರದಲ್ಲಾದರು ಕಟ್ಟಿಟ್ಟ ಬುತ್ತಿ ಎಂದು ವೈದ್ಯ ಡಾ. ಬಸವರಾಜ ಬಾಗೋಜಿ ಅಭಿಪ್ರಾಯಪಟ್ಟರು. ಅವರು ಇಂದು ನಗರದ ಡಾ ಸ. ಜ. ನಾಗಲೋಟಿಮಠ ವಿಜ್ಞಾನ ಕೇಂದ್ರದಲ್ಲಿ ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ತು, ಸಾರ್ವಜನಿಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ಆಯೋಜಿಸಿದ್ದ ಬೆಳಗಾವಿ ಜಿಲ್ಲಾ ಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪಧರ್ೆಯಲ್ಲಿ ವಿಜೇತ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು. 

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ವಿಷಯ ಪರಿವೀಕ್ಷಕ ಎಸ್. ಜಿ. ಕಂಬಳಿ ಮಾತನಾಡಿ ವಿದ್ಯಾಥರ್ಿಗಳ ಜ್ಞಾನ ಭಂಡಾರ ಹೆಚ್ಚಿಸುವಲ್ಲಿ, ಸ್ಪಧರ್ಾತ್ಮಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸುಂತಹ ಜ್ಞಾನವನ್ನು ನೀಡುವಲ್ಲಿ ವಿಜ್ಞಾನ ರಸಪ್ರಶ್ನೆಯಂತಹ ಸ್ಪಧರ್ೆಗಳು ಸಹಕಾರಿಯಾಗಿವೆ ಎಂದರು.

ಬೆಳಗಾವಿ ಅಸೋಶಿಯೇಷನ್ ಫಾರ್ ಸೈನ್ಸ ಎಜ್ಯುಕೇಶನ್ ಕಾರ್ಯದಶರ್ಿ ರಾಜನಂದಾ ಘಾಗರ್ಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯ ಮೇಲೆ  ವಿಷಯ ಪರಿವೀಕ್ಷಕ ಈರಯ್ಯ ಹಿರೇಮಠ, ಕರಾವಿಪ ಜಿಲ್ಲಾ ಸಮಿತಿ ಸದಸ್ಯ ವಿ. ಎಸ್. ಜಂಬಗಿ ಉಪಸ್ಥಿತರಿದ್ದರು. ವಿಜ್ಞಾನ ರಸಪ್ರಶ್ನೆ ಸ್ಪಧರ್ೆಯಲ್ಲಿ ರಾಜಶೇಖರ ಪಾಟೀಲ, ಎಮ್. ಬಿ. ಅಂಗಡಿ ಕ್ವಿಝ್ ಮಾಸ್ಟರ್ ಆಗಿ ಕಾರ್ಯನಿರ್ವಹಿಸಿದರು. ಕೆ.ಪಿ.ಎಸ್. ಮುಗಳಿಹಾಳ ಶಾಲೆಯ ರಶ್ಮಿ ಹೊಸಟ್ಟಿ ಹಾಗೂ ಜ್ಞಾನೇಶ್ವರ ಕಿತ್ತೂರ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯ ಮಟ್ಟಕ್ಕೆ ಆಯ್ಕೆಯಾದರು. ರಾಮದುರ್ಗ ಸಿ.ಡಿ. ಹಳ್ಯಾಳ ಪ್ರೌಢಶಾಲೆಯ ಕಿರಣ ಕಂಬಾರ ಹಾಗೂ ಶಿವಾನಂದ ಹೋಳಿ ದ್ವಿತೀಯ ಸ್ಥಾನ ಪಡೆದುಕೊಂಡರು.