ಅರಿತರೆ ಶರಣ, ಮರೆತರೆ ಮಾನವ. ಪುಣ್ಯ ಭಾರತದಲ್ಲಿ ಹುಟ್ಟಿರುವ ನಾವು ಪುಣ್ಯವಂತರು
If you know, you surrender, if you forget, you are human. We, born in virtuous India, are virtuous
ರಾಯಬಾಗ 14: ಪರಮಾತ್ಮ ನಿಂದ ಬಂದ ನಾವು ಮತ್ತೆ ನಾವು ಕೊನೆಗೆ ಪರಮಾತ್ಮನಲ್ಲಿ ಸೇರುತ್ತೇವೆ ಎಂಬುದನ್ನು ಅರಿತರೆ ನಮ್ಮ ಜೀವನ ಪರಿಪೂರ್ಣವಾಗಿ ಪಾವನಗೊಳ್ಳುತ್ತದೆ ಎಂದು ನಂದಿಕುರಳಿ ಪಂಚಲಿಂಗೇಶ್ವರ ಮಠದ ವೀರಭದ್ರೇಶ್ವರ ಸ್ವಾಮಿಜೀ ಹೇಳಿದರು. ಶನಿವಾರ ಪಟ್ಟಣದ ಬ್ರಹ್ಮಕುಮಾರಿಸ್ ಸೇವಾಕೇಂದ್ರದಲ್ಲಿ ವಿಶ್ವಶಾಂತಿಗಾಗಿ 12 ಕಾರುಗಳ ಮೇಲೆ ದ್ವಾದಶ ಜ್ಯೋತಿರ್ಲಿಂಗಗಳ ಭವ್ಯ ಮೆರವಣಿಗೆಯ ಶಾಂತಿಯಾತ್ರೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಿವೃತ್ತ ಐಎಎಸ್ ಅಧಿಕಾರಿ ಶಂಭು ಕಲ್ಲೋಳಿಕರ ಮಾತನಾಡಿ, ನಮ್ಮನ್ನು ನಾವು ಅರಿತುಕೊಂಡಾಗ ಮಾತ್ರ ನಾವು ಜ್ಞಾನಿಗಳು ಆಗಲು ಸಾಧ್ಯ. ನಮ್ಮ ಭಕ್ತಿ ಭಗವಂತ ಒಲಿಯುತ್ತಾನೆ, ಅದಕ್ಕೆ ಉದಾಹರಣೆಯಾಗಿ ಅನೇಕ ಮಹಾತ್ಮರು, ಸಂತರು ದೇಶದಲ್ಲಿ ಬಂದು ಹೋಗಿ, ಇನ್ನು ಎಲ್ಲರ ಜನಮನದಲ್ಲಿ ಇದ್ದಾರೆ. ಆತ್ಮ, ಪರಮಾತ್ಮ ಬಗ್ಗೆ ಈಶ್ವರಿ ವಿಶ್ವವಿದ್ಯಾಲಯ ಜಾಗೃತಿ ಮೂಡಿಸುತ್ತಿದೆ.
ಅರಿತರೆ ಶರಣ, ಮರೆತರೆ ಮಾನವ. ಪುಣ್ಯ ಭಾರತದಲ್ಲಿ ಹುಟ್ಟಿರುವ ನಾವು ಪುಣ್ಯವಂತರು ಎಂದರು.ಡಿ.ಎಸ್.ನಾಯಿಕ ಮಾತನಾಡಿ, ನಮ್ಮಲ್ಲಿರುವ ದ್ವೇಷ, ಅಸೂಯೆ, ಅಹಂಕಾರ ತ್ಯಜಿಸಿ, ಸಹೋದರ ಭಾವನೆಯಿಂದ ಎಲ್ಲರನ್ನು ಪ್ರೀತಿಸುವ ಗುಣ ಬೆಳೆಸಿಕೊಂಡರೆ, ನಾವು ಸುಖ, ಸಂತೋಷ, ಶಾಂತಿ, ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವೆಂದರು.ಕೇಂದ್ರದ ಮುಖ್ಯಸ್ಥೆ ಪುಷ್ಪಾ ಅಕ್ಕನವರು ಪ್ರಾಸ್ತಾವಿಕ ಮಾತನಾಡಿ, ವಿಶ್ವದೆಡೆ ಶಾಂತಿ ಸಂದೇಶ ಸಾರಲು ಬ್ರಹ್ಮಕುಮಾರಿಸ್ ಈಶ್ವರಿ ವಿಶ್ವವಿದ್ಯಾಲಯವು ಕಾರ್ಯ ಮಾಡುತ್ತಿದೆ. ನಿತ್ಯ ಸದಾ ಶಿವನ ಧ್ಯಾನ ಮಾಡಿದರೆ ನಮ್ಮ ಕಷ್ಟಗಳು ದೂರವಾಗುತ್ತವೆ. ವಿಶ್ವದಲ್ಲಿ ಶಾಂತಿ ಪಸರಿಸಲು ನಾವೆಲ್ಲರೂ ಕೈಜೋಡಿಸೋಣ ಎಂದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕಲ್ಪನಾ ಕಾಂಬಳೆ, ರಾಜು ದಾನೋಳೆ, ಬಿ.ಎಮ್.ಮಾಳಿ, ಎಚ್.ಎ.ಭಜಂತ್ರಿ, ವಿ.ಎಸ್.ಪೂಜಾರಿ, ಬಿ.ಎನ್.ಬಂಡಗರ, ಡಿ.ಎಲ್.ಮಿರ್ಜೆ, ಲಗಮಣ್ಣ ಪಾಟೀಲ, ಎಲ್.ಬಿ.ನಾಯಿಕ, ಅಮೋಘ ನಾಯಿಕ ಸೇರಿ ಅನೇಕರು ಇದ್ದರು.
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ 