ಕೊಪ್ಪಳ 08: ಕ್ಷಯರೋಗ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಪ ಪರೀಕ್ಷಿಸಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.
ಕೊಪ್ಪಳ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಕ್ಷಯರೋಗ ನಿಯಂತ್ರಣ ಸಂಘ ಕೊಪ್ಪಳ, ಪ್ರಾ.ಆ.ಕೇಂದ್ರ ಆನೆಗುಂದಿ ಹಾಗೂ ಸರಕಾರಿ ಪ್ರೌಢಶಾಲೆ ಮಲ್ಲಾಪುರ ಇವರ ಸಹಯೋಗದಲ್ಲಿ ಮಲ್ಲಾಪುರ ಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾದ ''ಕ್ಷಯರೋಗ ನಿಯಂತ್ರಣ'' ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.
ಕೊಪ್ಪಳ ಜಿಲ್ಲೆಯಲ್ಲಿ ಜ. 02. ರಿಂದ 12 ರವರೆಗೆ ''ಸಕ್ರೀಯ ಕ್ಷಯರೋಗ ಪತ್ಯೆ & ಚಿಕಿತ್ಸಾ ಆಂದೋಲನ'' ಏರ್ಪಡಿಸಲಾಗಿದೆ. ''ನಾಯಕರು ಬೇಕಾಗಿದ್ದಾರೆ, ಕ್ಷಯರೋಗ ಮುಕ್ತ ನಿಮರ್ಾಣಕ್ಕೆ ಕ್ಷಯರೋಗವನ್ನು ನಿಮರ್ೂಲನೆಗೊಳಿಸಿ ಇತಿಹಾಸ ನಿಮರ್ಿಸೋಣ'' ಎಂಬ ಘೋಷಣೆಯೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾರಿಗಾದರೂ ಎರಡು ವಾರ ಅಥವಾ ಅದಕ್ಕಿಂತ ಸತತ ಕೆಮ್ಮು, ಕಪ ಬರುವುದು, ಕಪದಲ್ಲಿ ರಕ್ತ ಬಿಳುವುದು, ಹಸಿವು ಆಗದೇ ಇರುವುದು, ಸಂಜೆ ವೇಳೆ ಜ್ವರ ಬರುವುದು, ತೂಕ ಕಡಿಮೆಯಗುವುದು, ಕತ್ತು ಮತ್ತು ಕಂಕಳಲ್ಲಿ ಗಡ್ಡೆ ಕಾಣಿಸುವುದು. ಇಂತಹ ಲಕ್ಷಣಗಳು ಕ್ಷಯರೋಗದ ಲಕ್ಷಣಗಳಾಗಿದ್ದು, ಈ ರೀತಿ ಕಂಡುಬಂದರೆ ಕೂಡಲೇ ಹತ್ತಿರದ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಕಪ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆದುಕೊಳ್ಳಬೇಕು. ಒಬ್ಬ ಕ್ಷಯ ರೋಗಿಯು ಚಿಕಿತ್ಸೆ ಪಡೆಯದಿದ್ದರೆ ಒಂದು ವರ್ಷಕ್ಕೆ 10 ರಿಂದ 15 ಜನರಿಗೆ ಪ್ರಸಾರ ಮಾಡುತ್ತಾನೆ. ಆದ್ದರಿಂದ ಎಲ್ಲಾ ಸಾರ್ವಜನಿಕರು & ವಿದ್ಯಾಥರ್ಿಗಳು ಈ ಖಾಯಿಲೆಯ ಬಗ್ಗೆ ಜಾಗೃತಿ ತೆಗೆದುಕೊಳ್ಳುವುದು ಅತ್ಯವಶ್ಯಕವಾಗಿದೆ ಎಂದು ಬಗ್ಗೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹೇಳಿದರು.
ಗಂಗಾವತಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ ಮಾತನಾಡಿ, ಕ್ಷಯರೋಗ ತಡೆಗಟ್ಟಲು ಅನುಸರಿಸಬೇಕಾದ ಕ್ರಮಗಳಾದ ಕ್ಷಯರೋಗಿಯು ಕೆಮ್ಮುವಾಗ & ಸೀನುವಾಗ, ಬಾಯಿ& ಮೂಗಿನ ಮೇಲೆ ಕರವಸ್ತ್ರ ಇಟ್ಟುಕೊಳ್ಳಬೇಕು. ಕ್ಷಯರೋಗಿಯು ಕಪವನ್ನು ಎಲ್ಲೆಂದಲ್ಲೂ ಉಗಿಯಬಾರದು, ಕಪವನ್ನು ಡಬ್ಬಿಯಲ್ಲಿ ಶೇಖರಿಸಿ ಗಟ್ಟಿಯಾಗಿ ಮುಚ್ಚಿ, ಸುಟ್ಟು ಹಾಕಬೇಕು, ಮತ್ತು ಮಣ್ಣಲ್ಲಿ ಊಳಬೇಕು. ನವಜಾತ ಶಿಶುಗಳಿಗೆ ಬಿ.ಸಿ.ಜಿ ಲಸಿಕೆ ಹಾಕಿಸಬೇಕು. ಕ್ಷಯರೋಗಿಗೆ ಸರಕಾರಿ ಆಸ್ಪತ್ರೆಯಲ್ಲಿ 06 ರಿಂದ 09 ತಿಂಗಳವರೆಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು ಮತ್ತು ಪೌಷ್ಠಿಕ ಆಹಾರದ ಸಲುವಾಗಿ ಪ್ರತಿ ತಿಂಗಳು ರೂ. 500/-ಗಳನ್ನು ನೀಡಲಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯೋಪಾದ್ಯಾಯರಾದ ಬಸವರಾಜ ಕರಾಟೆ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಹನುಮಂತಪ್ಪ, ಗಂಗಾವತಿ ತಾಲೂಕಾ ಆಸ್ಪತ್ರೆಯ ಸ್ಯಾಮವೇಲ್, ಸಹ-ಶಿಕ್ಷಕರಾದ ಉಮೇಶ, ಪುಷ್ಪಲತಾ ಮತ್ತು ಕಿ.ಆ.ಸ(ಮ\ಪು) ಕೆ.ಹೆಚ್.ಪಿ.ಟಿ, ಸಿಬ್ಬಂದಿ ವರ್ಗದವರು, ಆಶಾ ಕಾರ್ಯಕತರ್ೆಯರು, ವಿಧ್ಯಾಥರ್ಿಗಳು, ಸಾರ್ವಜನಿಕರು, ಇಲಾಖೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಂತರ ಮಲ್ಲಾಪುರ ಗ್ರಾಮದಲ್ಲಿ ಐ.ಇ.ಸಿ ವಾಹನದ ಮೂಲಕ ಎಲ್ಲಾ ವಾರ್ಡಗಳಲ್ಲಿ ಹಾಗೂ ಗಂಗಾವತಿ ನಗರದ ಪ್ರದೇಶಗಳಾದ ಮೆಹೆಬೂಬು ನಗರ & ಹಮಾಲರ ಕಾಲೋನಿ, ಸಂತೆ ಮಾಕರ್ೆಟ್ಗಳಲ್ಲಿ ಜಾಗೃತಿ ಮೂಡಿಸಲಾಯಿತು.