ಬೆಳಗಾವಿ 9- ಒಂದು ಸಾವಿರ ಇಂಗ್ಲೀಷ ಶಾಲೆಗಳಿಗೆ ಕನರ್ಾಟಕ ಸಕರ್ಾರದವರು ಅನುಮತಿ ಕೊಡುತ್ತಿರುವುದು ಖೇದಕರ ಸಂಗತಿ. ಕನ್ನಡ ಮಾಧ್ಯಮ ಶಿಕ್ಷಕರೇ ಇಂಗ್ಲೀಷ ಭಾಷೆಯನು ಕಲಿಸಬೇಕೆಂಬ ಸರಕಾರದ ನಿಧರ್ಾರ ಕನ್ನಡ ಭಾಷೆಯ ಮಾರಣ ಹೋಮ ಮಾಡಿದಂತೆ. ಮಾತೃಭಾಷೆಯನು ಮರೆತರೆ ಮಾತೆಯನು ಮರೆತಂತೆ ಎಂದು ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ ಅವರು ಇಂದಿಲ್ಲಿ ತುಂಬ ನೋವಿನಿಂದ ಹೇಳಿದರು.
ನಗರದ ಸಾಹಿತ್ಯ ಭವನ ಸಭಾಭವನದಲ್ಲಿ ಬೆಳಗಾವಿ ಜಿಲಾ ಲೇಖಕಿಯರ ಸಂಘ, ಮೇಳೇದ ಪ್ರಕಾಶನ ಸಂಯುಕ್ತ ಆಶ್ರಯದಲ್ಲಿ ಶ್ರೀಮತಿ ವಾಸಂತಿ ಮೇಳೇದ ಅವರ ತ್ರಿದಳ(ತ್ರಿಪದಿಗಳ ಸಂಕಲನ), ಸೆರಗಿನ ಸಿರಿ(ಕವನಗಳ ಸಂಕಲನ) ಹಾಗೂ ಚಿಲಿಪಿಲಿ(ಚುಟುಕುಗಳ ಸಂಕಲನ) ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ತ್ರಿದಳ ಕೃತಿ ಬಿಡುಗಡೆ ಮಾಡಿದ ಡಾ. ಬಾಳೇಕುಂದ್ರಿಯವರು ಮೇಲಿನಂತೆ ಅಭಿಪ್ರಾಯ ವ್ಯಕ್ತ ಪಡಿಸಿದರು.
ಮುಂದೆ ಮಾತನಾಡುತ್ತ ಅವರು ಐದನೇ ಇಯತ್ತೆವರೆಗೆ ಮಾತೃಭéಾಷೆಯ ಶಿಕ್ಷಣ ಅತ್ಯವಷ್ಯವಾಗಿದೆ. ಒಂದು ಸಾವಿರ ಇಂಗ್ಲೀಷ ಮಾಧ್ಯಮ ಶಾಲೆಗಳನ್ನು ತೆರೆಯಲು ನಿಧರ್ಾರ ತೆಗೆದುಕೊಂಡಿರುವ ದಳ ಸಕರ್ಾರಕ್ಕೆ ಧಿಕ್ಕಾರ. ತಮ್ಮ ಬರವಣಿಗೆಗಳ ಮೂಲಕ ಕನ್ನಡ ಜಾಗೃತಿ ಮಾಡುತ್ತಿರುವ 'ತ್ರಿದಳ' ಕತೃ ವಾಸಂತಿ ಮೇಳೇದ ಅವರ ಕಾರ್ಯಕ್ಕೆ ಸತ್ಕಾರ ಎಂದು ಹೇಳಿದರು.
'ಸೆರಗಿನ ಸಿರಿ' ಕವನ ಸಂಕಲನ ಕೃತಿಯನ್ನು ಪರಿಚಯಿಸುತ್ತ ಡಾ. ಗುರುದೇವಿ ಹುಲೆಪ್ಪನವರಮಠ ಅವರು. ಶ್ರೀಮತಿ ಮೇಳೇದ ಅವರ ಕವನಗಳು ಗ್ರಾಮೀಣ ಸಂಸ್ಕೃತಿಯನ್ನು ಕಣ್ಣಮುಂದೆ ತಂದು ನಿಲ್ಲಿಸುತ್ತವೆ. ಇವರ ಕವನಗಳಲ್ಲಿ ದಾಂಪತ್ಯ ಪ್ರೀತಿ, ಪ್ರೇಮ, ವಿರಹ, ಕರುಣೆ, ಅನುಕಂಪ ಎಲ್ಲವನ್ನು ಕಾಣಬಹುದು. ಸಮಾಜದಲ್ಲಿ ನಡೆಯುವ ಅಂಕುಡೊಂಕುಗಳನ್ನು ಇವರು ಕವನಗಳ ಮೂಲಕ ತೆರೆದಿಟ್ಟಿದ್ದಾರೆ. ಇವರಿಂದ ಇಂತಹ ಹಲವು ಕೃತಿಗಳು ಹೊರಬರಲಿ ಎಂದು ಹೇಳಿದರು.
ತ್ರಿದಳ(ತ್ರಿಪದಿಗಳ ಸಂಕಲನ), ಚಿಲಿಪಿಲಿ (ಚುಟುಕುಗಳ ಸಂಕಲನ) ಕೃತಿಗಳನ್ನು ಪರಿಚಯಿಸತ್ತ ಡಾ. ಮೈತ್ರಾಯಿಣಿ ಗದಿಗೆಪ್ಪಗೌಡರ ಶ್ರೀಮತಿ ವಾಸಂತಿ ಮೇಳೇದ ಅವರು ತ್ರಿಪದಿ, ಕವನ ಹಾಗೂ ಚುಟುಕುಗಳು ಮೂರು ಪ್ರಕಾರಗಳಲ್ಲಿ ಬರೆದಿದ್ದಾರೆ. ಇವರ ಕೃತಿಗಳಲ್ಲಿ ವಿಷಯ ವೈವಿಧ್ಯತೆ ಇದೆ. ಜಾನಪದ ಮಾದರಿಯಲ್ಲಿ ಬರೆಯುವುದು ಕಷ್ಟದ ಕೆಲಸ ಅದು ಇವರಿಗೆ ಸಾಧಿಸಿದೆ. ಜಾನಪದ ಸಾಹಿತ್ಯವನ್ನು ಕೀಳರಿಮೆಯಿಂದ ಕಾಣುವವರಿದ್ದಾರೆ ಆದರೆ ಜಾನಪದಕ್ಕೆಂದೂ ಸಾವಿಲ್ಲ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಲೇಖಕಿ ವಾಸಂತಿ ಮೇಳೇದ ದಂಪತಿಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಶ್ರೀಮತಿ ಜ್ಯೋತಿ ಬದಾಮಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಮತಿ ನೀಲಗಂಗಾ ಚರಂತಿಮಠ ಸೆರಗಿನ ಸಿರಿ ಹಾಗೂ ಚಿಲಿಪಿಲಿ ಕೃತಿಗಳನ್ನು ಬಿಡುಗಡೆಗೊಳಿಸಿದರು. ಲೇಖಕಿ ವಾಸಂತಿ ಮೇಳೇದ ಅವರು ಪುಸ್ತಕ ಪ್ರಕಾಶನಗೊಳ್ಳಲು ಸಹಕರಿಸಿದ ಎಲ್ಲ ಮಹನೀಯರನ್ನು ತಮ್ಮ ಮಾತುಗಳಲ್ಲಿ ಸ್ಮರಿಸಿಕೊಂಡರು.
ಆಶಾ ಯಮಕನಮರಡಿ, ಸುಷ್ಮಾ ಮೇಳೇದ, ಸುಪ್ರಿಯಾ ಜಂಬಗಿ ವಾಸಂತಿ ಮೇಳೇದ ಅವರ ರಚನೆಗಳನ್ನು ಹಾಡಿದರು.
ಆಶಾ ಯಮಕನಮರಡಿ ಹಾಗೂ ಸುಷ್ಮಾ ಮೇಳೇದ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಿ. ನಿರ್ಮಲಾ ಬಟ್ಟಲ ಸ್ವಾಗತಿಸಿದರು. ಸುನಂದಾ ಎಮ್ಮಿ ಪರಿಚಯಿಸಿದರು. ಸುಮಾ ಕಿತ್ತೂರ ವಂದಿಸಿದರು.
ಬಸವರಾಜ ಸಸಾಲಟ್ಟಿ, ಪ್ರೊ. ಎಂ. ಎಸ್. ಇಂಚಲ, ಡಾ. ಸರಜು ಕಾಟ್ಕರ್, ಯ.ರು. ಪಾಟೀಲ, ಕವಿತಾ ಕುಸಗಲ್ಲ, ಮಂಜುನಾಥ ಮೇಳೇದ, ರಂಜನಾ ನಾಯಕ, ಡಾ. ಹೇಮಾ ಸೊನೊಳ್ಳಿ, ಕೆ. ತಾನಾಜಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.