ಲೋಕದರ್ಶನ ವರದಿ
ಬ್ಯಾಡಗಿ27: ರೋಗ ಮುಕ್ತ ಸಮಾಜಕ್ಕಾಗಿ ಯೋಗದ ಮೊರೆ ಹೋಗಲೇಬೇಕು ಮಕ್ಕಳನ್ನ ಆಸ್ಪತ್ರೆಗಳಿಂದ ದೂರವಿಡಬೇಕಾದರೆ ಚಿಕ್ಕಂದಿನಿಂದಲೇ ಯೋಗ ತರಬೇತಿ ನೀಡಿದಲ್ಲಿ ಆರೋಗ್ಯವಂತ ಸಮಾಜ ಕಟ್ಟಲು ಸಾಧ್ಯವೆಂದು ಗಾನಯೋಗಿ ಕಲಾ ತಂಡದ ಅಧ್ಯಕ್ಷ ವೀರಭದ್ರಗೌಡ ಹೊಮ್ಮರಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಗಾಯಯೋಗಿ ಕಲಾ ತಂಡದ ವತಿಯಿಂದ ಆಯೋಜಿಸಲಾಗಿದ್ದ ಯೋಗ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಆಚರಣೆಗಳಿಗೂ ಭಿನ್ನವಾಗಿರುವ ಯೋಗ ಇದೊಂದು ಧಮರ್ಾಚರಣೆಯಲ್ಲ, ದೇಹವನ್ನು ದಂಡಿಸುವ ಮೂಲಕ ಆರೋಗ್ಯಯುತ ವಾಗಿ ನಿಯಂತ್ರಣದಲ್ಲಿಡುವ ಶಕ್ತಿ ಯೋಗಕ್ಕಿದೆ, ಇದನ್ನು ಒಂದು ಧರ್ಮದ ಚೌಕಟ್ಟಿಗೆ ಸೀಮಿತಗೊಳಿಸದಂತೆ ಮನವಿ ಮಾಡಿದರು.
ಯೋಗ ಶಿಕ್ಷಕಿ ಉಮಾದೇವಿ ಪತ್ತಾರ ಮಾತನಾಡಿ, ಪ್ರಕೃತಿ ಜೊತೆಗೆ ಮಾನವ ಸಾಮ್ಯತೆ ಹೊಂದುವುದೇ ಯೋಗ, ಆರೋಗ್ಯಕರ ಜೀವನಕ್ಕಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಹಾಗೂ ಅಮೂಲ್ಯ ಕೊಡುಗೆ ಯೋಗವಾಗಿದೆ 5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗವನ್ನು ಇಂದು ಜಗತ್ತಿನ ಎರಡನೂರಕ್ಕೂ ಹೆಚ್ಚು ರಾಷ್ಟ್ರಗಳು ಆಚರಿಸುತ್ತಿರುವುದು ಭಾರತೀಯರು ಹೆಮ್ಮೆಪಡಬೇಕಾದ ಸಂಗತಿ ಎಂದರು.
ಮಾಲತೇಶ ದೇವಗಿರಿ ಮಾತನಾಡಿ, ಆರೋಗ್ಯಕರ ಜೀವನಕ್ಕಾಗಿ ಜಗತ್ತಿಗೆ ಭಾರತ ನೀಡಿದ ಅದ್ಭುತ ಹಾಗೂ ಅಮೂಲ್ಯ ಕೊಡುಗೆಯೆಂದರೆ ಯೋಗ, ಆದರೆ ಇತ್ತೀಚೆಗೆ ಅರ್ಥವಿಲ್ಲದ ಮಾತುಗಳಿಂದ ಸಮಾಜದಲ್ಲಿ ಸುಲಭವಾಗಿ ಕೈಗೆಟುಕಲಿರುವ ನೈಸಗರ್ಿಕ ಚಿಕಿತ್ಸೆ ಸಿಗುವಂತಾಗಿದೆ, ಯೋಗ ಶಿಕ್ಷಣದ ಉದ್ದೇಶವನ್ನೇ ತಿರುಚುತ್ತಿರುವ ಜನರು ಹಣಕ್ಕಾಗಿ ವಾತಾವರಣ ನಿಮರ್ಿಸಿದ್ದು ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಶಿಕ್ಷಣದ ಪ್ರತಿ ಹಂತದಲ್ಲೂ ಯೋಗಶಿಕ್ಷಣ ಕಡ್ಡಾಯಗೊಳಿಸುವುದು ಸೂಕ್ತ ಎಂದರು. ಈ ಸಂದರ್ಬದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀದೇವಿ ಉದಾಸಿಮಠ, ಕವಿತಾ ಭೈರಾಪುರ, ವಿಜಯಲಕ್ಷ್ಮಿ ಜಮಖಂಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.