ದೇಶಾಭಿಮಾನ ಇದ್ದರೆ ಮಾತ್ರ ಸೈನಿಕನಾಗಲು ಸಾಧ್ಯ: ಚಿನ್ನೂರ
ಹುಬ್ಬಳ್ಳಿ03 : ಸೈನಿಕನಾಗುವುದು ಸುಲಭದ ಕೆಲಸವಲ್ಲ, ತಂದೆ-ತಾಯಿ ಮಕ್ಕಳನ್ನು ಅಷ್ಟೂ ಸರಳವಾಗಿ ಸೈನ್ಯಕ್ಕೆ ಸೇರಲು ಬಿಡುವುದಿಲ್ಲ, ಆದರೆ ಸೈನಿಕ ಆಗುವ ವ್ಯಕ್ತಿಯಲ್ಲಿ ದೇಶ ಪ್ರೇಮ ಉಕ್ಕಿ ಹರಿಯುತ್ತಿರಬೇಕು, ದೇಶ ಸೇವೆ ಮಾಡುವ ಉತ್ಕಟವಾದ ಇಚ್ಛಾಶಕ್ತಿ, ಆತ್ಮಭಲ, ದೇಶಾಭಿಮಾನ ಇದ್ದರೆ ಮಾತ್ರ ಸೈನಿಕನಾಗಲು ಸಾಧ್ಯ ಎಂದು ಕನರ್ಾಟಕ ವಚನ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಿದ್ದ ಶ್ರೀನಗರ:ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರಿಗೆ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿನಮನ ಕವಿಗೋಷ್ಟಿ ಕಾರ್ಯಕ್ರಮದಲ್ಲಿ ಮಾಜಿ ಯೋಧ ಈರಪ್ಪ ಚಿನ್ನೂರ ಹೇಳಿದರು.
ಸೈನ್ಯದಲ್ಲಿ ಸೇವೆ ಮಾಡುವುದು ಅತ್ಯಂತ ಪವಿತ್ರ, ಶ್ರೇಷ್ಠ ಕಾರ್ಯವಾಗಿದೆ. ಸೈನ್ಯದಲ್ಲಿ ಅತ್ಯಂತ ಕಠಿಣ ಜೀವನ ಸಾಗಿಸಬೇಕಾಗುತ್ತದೆ. ಸೈನ್ಯಕ್ಕೆ ಸೇರಲು ಯುವಕರನ್ನು ಪ್ರೊತ್ಸಾಹಿಸುವ ಕೆಲಸ ನಡೆಯಬೇಕು.
ಸೈನಿಕ ವೀರಮರಣ ಹೊಂದಿದಾಗ ಅವನ ಕುಟುಂಬದವರು ಅನುಭವಿಸುವ ಯಾತನೆ, ನೋವು, ಕಷ್ಟ ಹೇಳತಿರದು. ಸರಕಾರ, ಸಂಘ, ಸಂಸ್ಥೆಗಳು ಕುಟುಂಬವರಿಗೆ ಹೆಚ್ಚಿನ ನೇರವು, ಸಹಕಾರ ನೀಡಬೇಕು ಎಂದು ಹೇಳಿದರು.
ಕವಿಯಿತ್ರಿ ಪ್ರಮೀಳಾ ಹಟ್ಟಿಹೋಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಸುವರ್ಣಲತಾ ಗದಿಗೆಪ್ಪಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್ನ ಜಿಲ್ಲಾ ಘಟಕದ ಕಾಯರ್ಾಧ್ಯಕ್ಷ, ಗ್ರಂಥಪಾಲಕ ಸುರೇಶ ಡಿ. ಹೊರಕೇರಿ ಸ್ವಾಗತಿಸಿ, ವಂದಿಸಿದರು. ಕಾರ್ಯದಶರ್ಿ ಮೃತ್ಯುಂಜಯ ಮಟ್ಟಿ ನಿರೂಪಿಸಿದರು.
ಸಾಹಿತಿ ಶಾಂತಾ ಈಟಿ, ಡಾ.ಬಸವಕುಮಾರ ತಲವಾಯಿ, ರಮಾಕಾಂತ ಗದಿಗೆಪ್ಪಗೌಡರ, ಭಾರತಿ ಹಿರೇಗೌಡರ, ಮಾಲಾಭಾಯಿ ಗಜಕೋಶ, ಚೈತ್ರಾ ಹಿರೇಮಠ, ಸುಲೋಚನಾ ಸಿಸರ್ಿಕರ, ಉಮಾ ಹುಲಿಕಂತಿಮಠ, ರೇಣುಕಾ ಕಮತರ, ಸವಿತಾ ಲಿಂಗರೆಡ್ಡಿ, ಶಕುಂತಲಾ ಅಂಗಡಿ, ರೇಣುಕಾ ಟೆಂಗಿನಕಾಯಿ, ವಿರಾಟ, ಮುಂತಾದವರು ಇದ್ದರು. ಕವನಗಳ ಮೂಲಕ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಯೋಧರ ಆತ್ಮಕ್ಕೆ ಶಾಂತಿ ಕೋರಿ ಮೌನ ಆಚರಿಸಲಾಯಿತು.
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್
ಒಳಚರಂಡಿಗೆ ನುಗ್ಗುತ್ತಿದೆ ಮಳೆಯ ನೀರು : ಗಲ್ಲಿಯಲ್ಲಾ ಗಬ್ಬು ವಾಸನೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ
ಭಾರಿ ಮಳೆ, ಗಾಳಿಯಿಂದ ಹಾರಿಹೋದ ಸರ್ಕಾರಿ ಶಾಲೆಗಳ ಮೇಲ್ಚಾವಣಿ : ಮರ ಕಂಬಗಳು ಧರೆಗೆ
ಅಗಲಿದ ಅನಾಥನಿಗೆ ಅಗ್ನಿಸ್ಪರ್ಶ ಮಾಡಿ ಆಪತ್ಭಾಂದವನಾದ ವಿಜಯ ಮೋರೆ: ಅಂತ್ಯಕ್ರಿಯೆಗೆ ಮಾರ್ಕೆಟ್ ಪೊಲೀಸರ ಸಾಥ್
ದ್ವಿಚಕ್ರವಾಹನ ಕಳ್ಳರ ಬಂಧನ : 6.10 ಲಕ್ಷ ಮೌಲ್ಯದ 14 ವಾಹನಗಳ ವಶಕ್ಕೆ ಎಸ್ ಪಿ ರಾಮರಾಜನ್
ಸಾವಿರಾರು ಕೋಟಿ ವಂಚನೆ, ವರ್ಗಾವಣೆ ಆರೋಪ: ಶಿವಾನಂದ ನೀಲಣ್ಣವರ ಬಂಧನ 