ಭೂಮಿ ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳ ನಿರ್ಮಾಣ : ನಿತಿನ್ ಗಡ್ಕರಿ

ನಿತೀನ್ ಗಡ್ಕರಿ

 ನವದೆಹಲಿ 16: ನಮಗೆ ರಸ್ತೆ ಮಾಡಲು ಭೂಮಿ ಕೊಡದಿದ್ದರೆ, ಇಲ್ಲದಿದ್ದರೆ, ಆಕಾಶದಲ್ಲಿ ರಸ್ತೆಗಳನ್ನು ಮಾಡುತ್ತೇವೆ ಎಂದು ಹೆದ್ದಾರಿ ಸಚಿವ ಸಚಿವ ನಿತಿನ್ ಗಡ್ಕರಿ ಪಶ್ಚಿಮ ಬಂಗಾಳ ಸಕರ್ಾರದ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿ ಈ ವಿಷಯದಲ್ಲಿ ಸಂಸದರು  ಭೂಸ್ವಾಧೀನಕ್ಕೆ  ಹೆಚ್ಚಿನ  ಕಾಳಜಿ ವಹಿಸಬೇಕು  ಎಂದು ಭೂಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಒತ್ತಾಯಿಸಿದ ಪ್ರಸಂಗ ಮಂಗಳವಾರ ಲೋಕಸಭೆಯಲ್ಲಿ ಜರುಗಿದೆ.   ಪಶ್ಚಿಮ ಬಂಗಾಳ ಸರಕಾರದಲ್ಲಿ  ಭೂಸ್ವಾಧೀನಕ್ಕೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ  ಚುನಾಯಿತ ಪ್ರತಿನಿಧಿಗಳ ನಡೆಯನ್ನು ಪ್ರಶ್ನೆ ಮಾಡಿ ರಾಜ್ಯ ಸರಕಾರ ಅಗತ್ಯ ಭೂಮಿ ಕೊಡದಿದ್ದರೆ   ಆಕಾಶದಲ್ಲಿ ರಸ್ತೆ ಮಾಡಬಹುದಲ್ಲ ಎಂದರು . 

   "ನಾವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಆಕಾಶದಲ್ಲಿ ರಸ್ತೆಗಳನ್ನು ನಿಮರ್ಿಸುತ್ತೇವೆ  ಎಂದು ಸಚಿವರು  ಲೋಕಸಭೆಯಲ್ಲಿ ಇಲಾಖಾ ಅನುದಾನದ ಬೇಡಿಕೆಗಳ ಚಾರ್ ಚರ್ಚೆಗೆ ಉತ್ತರಿಸುತ್ತಾ ವ್ಯಂಗವಾಡಿದರು. ಸೋಮವಾರ ನಡೆದ ಚರ್ಚೆ ಯ ವೇಳೆ ತೃಣಮೂಲ ಕಾಂಗ್ರೆಸ್ನ ಸೌಗತಾ ರಾಯ್ ಅವರು ಎತ್ತಿದ ರಾಷ್ಟ್ರೀಯ ಹೆದ್ದಾರಿ 34 ರ ರಸ್ತೆ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಅವರು ಈ ಉಲ್ಲೇಖ ಮಾಡಿದ್ದಾರೆ. "ಎನ್ಎಚ್ 34 ದಕ್ಷಿಣದಿಂದ ಉತ್ತರಕ್ಕೆ ಜೀವಸೆಲೆಯಾಗಿದೆ. ಇದು ಹತ್ತು ವರ್ಷಗಳದಾರೂ ಪೂರ್ಣಗೊಂಡಿಲ್ಲ. ಕೃಷ್ಣನಗರ - ಬೆಹ್ರಾಂಪುರ್ ವಿಭಾಗವು ಅಪೂರ್ಣವಾಗಿ ಜನರು, ವಾಹನಗಳು ಒಡಾಡದಂತಹ ಪರಿಸ್ಥಿತಿ ಇದೆ ಎಂದು ರಾಯ್ ಸದನದ ಗಮನಕ್ಕೆ ತಂದರು.  ಈ ಯೋಜನೆಯ ಕುರಿತು ರಾಜ್ಯ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ  ಅವರೊಂದಿಗೆ ಚರ್ಚೆ  ನಡೆಸಿರುವುದಾಗಿ ಸಚಿವ  ಗಡ್ಕರಿ ಹೇಳಿದರು. ಯೋಜನಾ ಕಾರ್ಯವನ್ನು ರಾಜ್ಯ ಲೋಕೋಪಯೋಗಿ ಇಲಾಖೆಗೆ  ಹಸ್ತಾಂತರಿಸಲಾಯಿತು, ಆದರೆ ಇಲ್ಲಿಯವರೆಗೆ ಯಾವುದೇ ಭೂಸ್ವಾಧೀನವಾಗಿಲ್ಲ. "ಆದ್ದರಿಂದ ನನ್ನ ಮನವಿ ಎಂದರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ನಾವು ಆಕಾಶದಲ್ಲಿ ರಸ್ತೆಗಳನ್ನು ಮಾಡಬೇಕಾದೀತು" ಎಂದು ಸಚಿವರು ಅಸಮಾಧಾನ ಹೊರಹಾಕಿದರು.   

    ಇತರೆ ಸಂಸದರು ಮೊದಲು ಸ್ಥಳೀಯ ಜಿಲ್ಲಾ ನಾಗರಿಕ ಮತ್ತು ಅರಣ್ಯ ಅಧಿಕಾರಿಗಳೊಂದಿಗೆ ಮಾತುಕತೆ ಮಾಡಿ ಪರಿಸರ ಅನುಮತಿ ಅಥವಾ ಭೂಸ್ವಾಧೀನ ಸಮಸ್ಯೆಗಳ ಬಗ್ಗೆ ತಿಳಿದುಕೊಂಡು ಈ ವಿಷಯಗಳನ್ನು ಸ್ಥಳೀಯ ಮಟ್ಟದಲ್ಲೇ ನಿವಾರಿಸಬಹುದು ಎಂದು ಅವರು ಸದಸ್ಯರಿಗೆ ತಿಳಿಸಿದರು. ಹಲವು ರಾಜ್ಯ ಸರಕಾರಗಳು ಕೇಂದ್ರದೊಂದಿಗೆ ಸಹಕರಿಸುತ್ತಿವೆ, ಆದರೆ ಇದಕ್ಕೆ  ಹೆಚ್ಚಿನ  ಸಮಯ ತೆಗೆದುಕೊಳ್ಳಲಿದೆ ಎಂದೂ  ಸಚಿವ ಗಡ್ಕರಿ ಸದನಕ್ಕೆ ತಿಳಿಸಿದರು.