ಗೋಕಾಕ 10: ಮಾನವೀಯತೆ ಎಲ್ಲಿ ಇರುತ್ತದೇಯೂ ಅಲ್ಲಿ ಧರ್ಮ ಇರುತ್ತದೆ, ಅದಕ್ಕಾಗಿಯೆ ಮಹಾಮಾನವತಾದಿ ಬಸವಣ್ಣನವರರು ದಯವೇ ಧರ್ಮದ ಮೂಲವೆಂದು ತಿಳಿಸಿದ್ದಾರೆ ಎಂದು ನಿವೃತ್ತ ಪ್ರಾಚಾರ್ಯ ವಸಂತರಾವ ಕುಲಕರ್ಣಿ ಹೇಳಿದರು.
ಇಲ್ಲಿಯ ವಿದ್ಯಾ ನಗರದಲ್ಲಿ ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗದ ಆಯೋಜಿಸಿದ್ದ 10ನೇ ಮಾಸಿಕ ಚಿಂತನಾಗೋಷ್ಠಿಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಪ್ರತಿಯೊಂದು ಎಲ್ಲ ಧರ್ಮಗಳು ವೈಚಾರಿಕತೆ ಹಾಗೂ ವೈಜ್ಞಾನಿಕ ತಳಹದಿಯಲ್ಲಿ ರೂಪಿತವಾಗಿವೆ ಎಂದು ತಿಳಿಸಿದರು.
ನಿವೃತ್ತ ಪ್ರಾಧ್ಯಾಪಕಿ ಶಕುಂತಲಾ ಹಿರೇಮಠ ಮಾತನಾಡುತ್ತಾ ಎಲ್ಲ ಧರ್ಮಗಳ ಆಚರಣೆಗಳು ನಮ್ಮ ಆರೋಗ್ಯಕ್ಕೆ ಒಳ್ಳೆಯ ವಿಚಾರಗಳಾಗಿವೆ. ಯಾವುದೇ ಗೊಡ್ಡು ಸಂಪ್ರದಾಯಗಳಿಲ್ಲ, ದೇವಸ್ಥಾನಕ್ಕೆ ಹೋಗುವುದು, ಅಲ್ಲಿ ಗಂಟೆ ಬಾರಿಸುವುದಕ್ಕೆ ವೈಜ್ಞಾನಿಕ ಹಿನ್ನಲೆ ಇದೆ. ಗಂಟೆ ಬಾರಿಸುವುದರಿಂದ ಸಕಾರಾತ್ಮಕ ತರಂಗಗಳು ಮೂಡಿ ಮನಸ್ಸಿನ ಪ್ರಶಾಂತೆತೆಗೆ ಕಾರಣವಾಗುತ್ತದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗ ತಾಲೂಕ ಘಟಕದ ಅಧ್ಯಕ್ಷೆ ಮಹಾನಂದಾ ಪಾಟೀಲ ವಹಿಸಿದ್ದರು.
ವೇದಿಕೆ ಮೇಲೆ ಸೃಜನ್ಶೀಲ ಸಾಹಿತ್ಯ ಮಹಿಳಾ ಬಳಗದ ರಾಜ್ಯ ಉಪಾಧ್ಯಕ್ಷೆ ಭಾರತಿ ಮದಭಾಂವಿ, ಕ.ಸ.ಪಾ ತಾಲೂಕಾಧ್ಯಕ್ಷ ಮಹಾಂತೇಶ ತಾವಂಶಿ, ಸಾಹಿತಿ ಪುಷ್ಪಾ ಮುರಗೋಡ, ಶಕುಂತಲಾ ದಂಡಗಿ ಇದ್ದರು.
ಸುಮೀತ್ರಾ ಬಾರಕಿ ಸ್ವಾಗತಿಸಿದರು, ವಿನೂತಾ ನಾವಲಗಿ ನಿರೂಪಿಸಿದರು, ವಸುಂಧರಾ ಕಾಳೆ ವಂದಿಸಿದರು.