ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಿದ್ದಲ್ಲಿ, ದೂರು ಸಲ್ಲಿಸಲು ಅವಕಾಶ: ಅಪರ ಜಿಲ್ಲಾಧಿಕಾರಿ ಅಯಿಷಾ

ಕೊಪ್ಪಳ 17: ಜುಲೈ. 05 ರಂದು ಕಲ್ಬುರ್ಗಿಯಲ್ಲಿ ನಡೆಯುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸಭೆಯಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆ ಪ್ರಕರಣಗಳು ಇದ್ದಲ್ಲಿ, ದೂರು ಸಲ್ಲಿಸಲು ಅವಕಾಶವಿದೆ ಎಂದು ಕೊಪ್ಪಳ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಹೇಳಿದರು.  

ಅವರು ಇಂದು (ಜೂ.17ರಂದು) ತಮ್ಮ ಕಚೇರಿಯಲ್ಲಿ ಆಯೋಜಿಸಲಾದ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋದ ವತಿಯಿಂದ ಕಲಬುರಗಿ ವಿಭಾಗದ ಎಲ್ಲಾ ಜಿಲ್ಲೆಗಳಿಗೆ ಜುಲೈ. 5 ರಂದು ಕಲಬುರಗಿಯಲ್ಲಿ "ಬೆಂಚ್ ಸಿಟ್ಟಿಂಗ್ ಕಾರ್ಯಕ್ರಮ ಆಯೋಜಿಸಿರುವ ಹಿನ್ನಲೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.    

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಧಿನಿಯಮ 2005ರ ಕಲಂ 13 & 14ರಡಿಯಲ್ಲಿ ರಚಿತವಾಗಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಶಾಸನಬದ್ಧ ಸಮಿತಿಯಾಗಿದ್ದು, ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗದಲ್ಲಿ ದೂರುಗಳನ್ನು ಸ್ವೀಕರಿಸಿ ತನಿಖೆಯನ್ನು ನಡೆಸುವ ಅಧಿಕಾರವನ್ನು ಮತ್ತು ಕಡ್ಡಾಯ ಮತ್ತು ಉಚಿತ ಶಿಕ್ಷಣ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ-2012 ಹಾಗೂ ಮಕ್ಕಳ ನ್ಯಾಯ (ಮಕ್ಕಳ ಪೋಷಣೆ ಮತ್ತು ರಕ್ಷಣೆ) ಕಾಯ್ದೆ-2015ರ ಅನುಷ್ಠಾನದ ಮೇಲ್ವಿಚಾರಣೆ ಅಧಿಕಾರವನ್ನು ಹೊಂದಿರುತ್ತದೆ.  ರಜಿಸ್ಟ್ರಾರ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ನವದೆಹಲಿ ರವರು, ಸಾರ್ವಜನಿಕರಿಗೆ ನೆರವಾಗಲೆಂದು, ಮಕ್ಕಳ ಹಕ್ಕುಗಳ ದೂರು ಉಲ್ಲಂಘನೆಯ ಪ್ರಕರಣಗಳನ್ನು ಸ್ಥಳೀಯ ಮಟ್ಟದಲ್ಲಿ ಆಲಿಸಿ, ಸ್ವೀಕರಿಸಿ ತ್ವರಿತವಾಗಿ ವಿಚಾರಣೆಯನ್ನು ನಡೆಸಿ, ದೂರುಗಳ ವಿಲೇವಾರಿಗಾಗಿ ಆಯೋಗವು ಜುಲೈ.  05 ರಂದು ಕಲ್ಬುಗರ್ಿಯಲ್ಲಿ "ಬೆಂಚ್ ಸಿಟ್ಟಿಂಗ್ನ್ನು ನಡೆಸುತ್ತಿದೆ.  ವಿಶ್ವ ಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆಯಲ್ಲಿ ವಿವರಿಸಿರುವಂತೆ ಮಕ್ಕಳ ಬದುಕುವ, ಅಭಿವೃಧ್ಧಿ ಮತ್ತು ವಿಕಾಸಹೊಂದುವ, ಶೋಷಣೆಯ ವಿರುದ್ಧ ಸಂರಕ್ಷಣೆಯ ಮತ್ತು ಭಾಗವಹಿಸುವ ಹಕ್ಕುಗಳ ಉಲ್ಲಂಘನೆ ಕುರಿತು ಯಾವುದೇ ದೂರುಗಳು ಇದ್ದಲ್ಲಿ, ಭಾದಿತರ ಅಥವಾ ಅವರ ಪರವಾಗಿ ಯಾರಾದರೂ ಈ ಸಭೆಯಲ್ಲಿ ಖುದ್ದಾಗಿ ಭಾಗವಹಿಸಿ ದೂರು ನೀಡಬಹುದಾಗಿರುತ್ತದೆ ಅಥವಾ ಸ್ಥಳಿಯ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು ಅಥವಾ ಅಪರ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ.  ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಜುಲೈ. 05 ರಂದು ನಡೆಸುತ್ತಿರುವ "ಸಿಟ್ಟಿಂಗ್ ಕುರಿತು" ಸಮುದಾಯದಲ್ಲಿ ವ್ಯಾಪಕ ಪ್ರಚಾರವನ್ನು ನೀಡಲು ಅವಶ್ಯವಿದ್ದು, ಎಲ್ಲಾ ಸರಕಾರಿ ಕಛೇರಿಗಳಲ್ಲಿ ಮಕ್ಕಳ ಪಾಲನಾ ಸಂಸ್ಥೆ, ಅರೆ ಸರಕಾರಿ, ಗ್ರಾಮ ಪಂಚಾಯತ್ಗಳು, ಅಟಲ್ ಜನಸ್ನೇಹಿ ಕೇಂದ್ರಗಳು ಮತ್ತು ಖಾಸಗಿ ಸಂಸ್ಥೆಗಳ ಕಛೇರಿಗಳ ನೊಟೀಸ್ ಫಲಕಗಳಿಗೆ ಲಗತ್ತಿಸಿ ಹಾಗೂ ವಿವಿಧ ಸಭೆಗಳಲ್ಲಿ ಮಾಹಿತಿಯನ್ನು ನೀಡುವ ಮೂಲಕ ವ್ಯಾಪಕ ಪ್ರಚಾರವನ್ನು ನೀಡುವಂತೆ ಅಪರ ಜಿಲ್ಲಾಧಿಕಾರಿ ಸೈಯದಾ ಅಯಿಷಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಸಭೆಯಲ್ಲಿ ಜಿಲ್ಲಾ ಕಾರ್ಮಿಕ  ಅಧಿಕಾರಿ ಚಂದ್ರಶೇಖರ ಐಲಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಜಯಶ್ರೀ, ಜಿಲ್ಲಾ ಬಾಲ ಕಾರ್ಮಿಕ  ಯೋಜನಾ ನಿದರ್ೇಶಕ ಬಸವರಾಜ ಹಿರೇಗೌಡರ, ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿಯ ಅಧ್ಯಕ್ಷೆ ನಿಲೋಪರ ಆರ್., ಸದಸ್ಯೆ ಸರೋಜ ಬಾಕ್ಳೆ, ಯುನಿಸ್ಸೆಫ್ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯ ಜಿಲ್ಲಾ ಸಂಯೋಜಕ ಹರೀಶ ಜ್ಯೋಗಿ, 1098 ಮಕ್ಕಳ ಸಹಾಯವಾಣಿ ಕೇಂದ್ರದ ಶರಣು ಸೇರಿದಂತೆ ವಿವಿಧ ಇಲಾಖೆಗಳ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.